ಮನರಂಜನೆ

ಖುಷ್ಬೂಗೆ ‘ವಿಶೇಷ ’ ಸ್ಥಾನಮಾನ

ಖುಷ್ಬೂಗೆ    ‘ವಿಶೇಷ ’   ಸ್ಥಾನಮಾನ

ಚೆನ್ನೈ, ಅ  8: ಕೊನೆಗೂ    ಬಿಜೆಪಿಯಲ್ಲಿ    ನಟಿ   ಖುಷ್ಬೂ   ಅವರಿಗೆ   ಒಂದು   ಹುದ್ದೆ  ದೊರೆತಿದೆ.    ಆ   ಪಕ್ಷದ     ವಿಶೇಷ   ಆಹ್ವಾನಿತರನ್ನಾಗಿ    ಗುರುವಾರ      ಬಿಜೆಪಿ ನೇಮಿಸಿದೆ.     ಕಾಂಗ್ರೆಸ್ ನಿಂದ  ಬಿಜೆಪಿ ಸೇರಿದ್ದ     ಖುಷ್ಬೂ    ಅವರಿಗೆ   ಇತ್ತೀಚಿಗೆ   ನಡೆದ    ತಮಿಳುನಾಡು ರಾಜ್ಯ   ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು   ಅವಕಾಶ   ಕಲ್ಪಿಸಲಾಗಿತ್ತು.     ಆದರೆ,   ಅವರು   ಹಲವು  ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ  ಟ್ರಿಪ್ಲಿಕೇನ್‌  ಕ್ಷೇತ್ರದ  ಬದಲಾಗಿ    ಥೌಸಂಡ್‌  ಲೈಟ್ಸ್‌    ವಿಧಾನಸಭಾ ಕ್ಷೇತ್ರದಿಂದ  ಸ್ಪರ್ಧಿಸಿ ಸೋಲು ಕಂಡಿದ್ದರು.

ವಿಧಾನಸಭಾ   ಚುನಾವಣೆಯಲ್ಲಿ ಸ್ಪರ್ಧಿಸಿ  ಸೋತಿದ್ದ    ಎಲ್. ಮುರುಗನ್  ಅವರಿಗೆ    ಕೇಂದ್ರ ಸಂಪುಟದಲ್ಲಿ   ರಾಜ್ಯ ಸಚಿವ  ಸ್ಥಾನ  ಕಲ್ಪಿಸಿ...   ಅಣ್ಣಾಮಲೈ  ಅವರನ್ನು  ತಮಿಳುನಾಡು  ರಾಜ್ಯ  ಬಿಜೆಪಿ  ಅಧ್ಯಕ್ಷರನ್ನಾಗಿಸಲಾಯಿತು.   ಇದರಿಂದ   ಖುಷ್ಬೂ  ಅವರಿಗೂ     ಪ್ರಮುಖ  ಹುದ್ದೆ  ಲಭ್ಯವಾಗಬಹುದು   ಎಂದು  ಅವರ ಬೆಂಬಲಿಗರು,  ಅಭಿಮಾನಿಗಳು  ನಿರೀಕ್ಷಿಸುತ್ತಿದ್ದರು.  ಆದರೆ,    ಅವರಿಗೆ   ಪಕ್ಷದ  ವಿಶೇಷ ಆಹ್ವಾನಿತೆಯ  ಸ್ಥಾನಮಾನ  ನೀಡಲಾಗಿದೆ.  ಹಿರಿಯ ನಾಯಕ ಎಚ್ ರಾಜಾ ಅವರನ್ನೂ  ವಿಶೇಷ ಆಹ್ವಾನಿತರನ್ನಾಗಿ,  ಮತ್ತೊಬ್ಬ ನಾಯಕ ಪೊನ್ ರಾಧಾಕೃಷ್ಣನ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.


ಸುದ್ದಿ ಓದಿ