ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ
ದೇವರಹಿಪ್ಪರಗಿ 30 : ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಮಂಗಳವಾರದಿಂದ ದೇವರಹಿಪ್ಪರಗಿ ಪ್ರದೇಶದಲ್ಲಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಾಸಕ ರಾಜುಗೌಡ ಪಾಟೀಲ ಕುಡರಿಸಾಲವಾಡಗಿ ಅವರ ನಿವಾಸಕ್ಕೆ ಭೇಟಿ ನೀಡಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಿದರು. ಪರಿಷ್ಕರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭ ಹೂವಿನ ಹಿಪ್ಪರಗಿ ಉಪತಹಶೀಲ್ದಾರ್ ಎಸ್.ಎಸ್. ತಾವರಖೇಡ, ಕಂದಾಯ ನೀರೀಕ್ಷಕ ಜಗದೀಶ ಪಾರಿವಾಳ, ಗ್ರಾಮ ಆಡಳಿತ ಅಧಿಕಾರಿ ವಿದ್ಯಾ ಅವಟಿ ಹಾಗೂ ಬಿಎಲ್ಒಗಳಾದ ಕೆ.ಜಿ. ಪಾಟೀಲ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಾರ್ವಜನಿಕ ಮುಖಂಡರು ಉಪಸ್ಥಿತರಿದ್ದರು.