ಯರಗಟ್ಟಿ

ಮಳೆಗಾಗಿ ಜೋಕಮಾರನಿಗೆ ವಿಶೇಷ ಪೂಜೆ

ಮಳೆಗಾಗಿ ಜೋಕಮಾರನಿಗೆ ವಿಶೇಷ ಪೂಜೆ


ಯರಗಟ್ಟಿ 23: ಮಳೆ ಉತ್ತಮವಾಗಿ ಸುರಿದು ಬೆಳೆ ಸಮೃದ್ಧಿಯಾಗಲಿ ಎಂದು ರೈತ ಮಹಿಳೆಯರು ಜೋಕಮಾರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಳೆ ಕೊರತೆಯಿಂದ ರೈತ ಸಮುದಾಯ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.  ಅಷ್ಟಮಿ ದಿನ ಕುಂಬಾರ ಮನೆಯಿಂದ ಜೋಕಮಾರನ ಮೂರ್ತಿಯನ್ನು ತಂದು ಗ್ರಾಮದ ಪ್ರಮುಖ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಯನ್ನು ಏಳು ಬುಟ್ಟಿಗಳಲ್ಲಿ ಇರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಕೊನೆಯ ದಿನ ರಾತ್ರಿ ಗ್ರಾಮದ ದಲಿತ ಕೆರೆಯಲ್ಲಿ ಜೋಕಮಾರನ ಮೂರ್ತಿಯನ್ನು ವಿಸರ್ಜಿಸಲಾಯಿತು.  ಈ ಸಂದರ್ಭದಲ್ಲಿ ಸಿದ್ದವ್ವ ಬಾಕಿ, ಮಹಾದೇವಿ ಬಾಕಿ, ಲಕ್ಷ್ಮವ್ವ ಕರಿಗಾರ, ಲಕ್ಷ್ಮೀ ಬಾಕಿ, ಕಸ್ತೂರಿ ಕರಿಗಾರ ಹಾಗೂ ಹಸನವ್ವ ಹುಕ್ಕೇರಿ ಸೇರಿದಂತೆ ರೈತ ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ