ಬಳ್ಳಾರಿ

ಸೃಜನಾತ್ಮಕ ದೃಶ್ಯ ನಿರ್ಮಾಣದಲ್ಲಿ ಸಂಕಲನದ ಪಾತ್ರ ಮುಖ್ಯ

ಸೃಜನಾತ್ಮಕ ದೃಶ್ಯ ನಿರ್ಮಾಣದಲ್ಲಿ ಸಂಕಲನದ ಪಾತ್ರ ಮುಖ್ಯ
ವಿಶ್ರೀಕೃವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ವೃತ್ತಿಪರ ವಿಡಿಯೋ ಸಂಕಲನಕಾರ ಶ್ರೀಧಾರ್ ಅಭಿಮತ |ದೃಶ್ಯ ಮಾಧ್ಯಮದಲ್ಲಿ ಸಂಕಲನದ ಪಾತ್ರ ಕುರಿತು ವಿಶೇಷ ಉಪನ್ಯಾಸ 

ಬಳ್ಳಾರಿ ಫೆ 18. ದೃಶ್ಯ ಮಾಧ್ಯಮದಲ್ಲಿ ಸಂಕಲನದ ಪಾತ್ರ ಬಹಳ ಮುಖ್ಯವಾದದ್ದು, ದೃಶ್ಯ ಮಾಧ್ಯಮದಲ್ಲಿ ದೃಶ್ಯಗಳನ್ನು ಸೃಜನಾತ್ಮಕವಾಗಿ ಸಂಕಲನ ಮಾಡುವ ಮೂಲಕ ಸುದ್ದಿ, ವಿಶೇಷ ವರದಿ, ಸಾಕ್ಷ್ಯಚಿತ್ರ, ಸಿನಿಮಾ, ಧಾರಾವಾಹಿಗಳು, ಜಾಹೀರಾತುಗಳು ಮತ್ತು ಕಿರುಚಿತ್ರಗಳನ್ನು ತೆರೆಯ ಮೇಲೆಪರಿಣಾಮಕಾರಿಯಾಗಿ ಮೂಡಿಸುವ ಪ್ರಯತ್ನವನ್ನು ಸಂಕಲಕಾರರನ್ನು ಮಾಡುತ್ತಾರೆ ಎಂದು ವೃತ್ತಿಪರ ವಿಡಿಯೋ ಸಂಕಲನಕಾರ ಶ್ರೀಧರ್ ಹೇಳಿದರು. 

ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೃಶ್ಯ ಮಾಧ್ಯಮದಲ್ಲಿ ಸಂಕಲನದ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದಾಗ ಮಾತ್ರ ಸೃಜನಾತ್ಮಕವಾಗಿ ಸಂಕಲನ ಮಾಡುವ ಅವಕಾಶಗಳು ದೊರೆಯುತ್ತವೆ. ದೃಶ್ಯ ಮಾಧ್ಯಮದಲ್ಲಿ ಇಂದು ನುರಿತ ಸಂಕಲನಕಾರರಿಗೆ ತುಂಬಾ ಬೇಡಿಕೆ ಇದ್ದು, ವಿದ್ಯಾರ್ಥಿಗಳು ಸಂಕಲನ ಕಾರ್ಯದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹದು ಎಂದು ಹೇಳಿದರು.ವಿಡಿಯೋ ಸಂಕಲನದ ತಂತ್ರಜ್ಞಾನ ಮತ್ತು ಬಳಕೆಯ ಬಗ್ಗೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಅಧ್ಯಯನ ಮಾಡಬೇಕು. ದೃಶ್ಯ ಮಾಧ್ಯಮದಲ್ಲಿ ಪರದೆಯ ಮೇಲೆ ಪರಿಣಾಮಕಾರಿ ದೃಶ್ಯ ಪ್ರಸಾರದಲ್ಲಿ ಸಂಕಲನಕಾರರ ಪಾತ್ರ ತುಂಬಾ ಮುಖ್ಯವಾಗಿರುತ್ತದೆ ಎಂದು ವಿಭಾಗದ ಸಂಯೋಜಕರಾದ ರಾಕೇಶ ತಾಳಿಕೋಟಿ ಹೇಳಿದರು.ವಿಶೇಷ ಉಪನ್ಯಾಸದ ಜೊತೆಗೆ ವಿಡಿಯೋ ಸಂಕಲನದ ಸಾಫ್ಟ್‍ವೇರ್‍ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕರಾದ ರಾಕೇಶ್ ತಾಳಿಕೋಟಿ, ಅತಿಥಿ ಉಪನ್ಯಾಸಕರಾದ ವಾಯ್.ವಿ. ಕುಲಕರ್ಣಿ, ಗಿರೀಶ್ ಕುಮಾರ್ ಗೌಡ ಮತ್ತು ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. 

ಸುದ್ದಿ ಓದಿ