ತಾಳಿಕೋಟಿ

ಇಂದು ತಹಶೀಲ್ದಾರ ಶ್ರೀಧರ ಗೋಟೂರಗೆ ವಿಶೇಷ ಸನ್ಮಾನ

ಇಂದು ತಹಶೀಲ್ದಾರ ಶ್ರೀಧರ ಗೋಟೂರಗೆ ವಿಶೇಷ ಸನ್ಮಾನ

ತಾಳಿಕೋಟಿ: ಪಟ್ಟಣದ ಸಾಮರಸ್ಯದ ಪ್ರತೀಕವಾಗಿರುವ ಶ್ರೀ ಖಾಸ್ಗತೇಶ್ವರ ಮಠದ ವತಿಯಿಂದ ಹಮ್ಮಿಕೊಂಡಿರುವ ‘ಅಜ್ಜನ ಉತ್ಸವ 2022’ರ ವಿಶೇಷ ಪ್ರವಚನ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಸನ್ಮಾನಿಸಿ ಗೌರವ ಸಮರೆ​‍್ಣ ಸಲ್ಲಿಸಲಾಗುವುದು. 

ಖಾಸ್ಗತ ಹಾಗೂ ವಿರಕ್ತ ಮಹಾಸ್ವಾಮಿಗಳ ಹಾಗೂ ಸಮಸ್ತ ಶ್ರೀಮಠದ ಹಿಂದಿನ ಶಿವಯೋಗಿಗಳವರ ಸ್ಮರಣೆಗಾಗಿ ನ. 16 ರಿಂದ 20ರವರೆಗೆ ರಾಜವಾಡೆಯಲ್ಲಿ ಸಂಜೆ 7 ಗಂಟೆಯಿಂದ ನಡೆಯುವ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದ ಸಾಧಕರಿಗಾಗಿ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮದಲ್ಲಿ ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಸನ್ಮಾನಿಸಲಾಗುತ್ತಿದೆ. ಗೋಟೂರ ಅವರು ತಮ್ಮ ಸೇವೆಯಲ್ಲಿ ತೋರಿದ ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ವಿಶೇಷವಾಗಿ ನಾಡಿನ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಅವರಿಗಿರುವ ಕಾಳಜಿಯ ಕುರಿತು ಹಾಗೂ ಇತ್ತೀಚಿಗೆ ‘ರಾಜ್ಯೋತ್ಸವ’ ಕಾರ್ಯಕ್ರಮವನ್ನು ಐತಿಹಾಸಿಕವಾದ ರೀತಿಯಲ್ಲಿ ಯಶಸ್ವಿಗೊಳಿಸಿ ಎಲ್ಲ ಕನ್ನಡಾಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಕಾರಣಕ್ಕಾಗಿ ಅವರಿಗೆ ಈ ವಿಶೇಷ ಸನ್ಮಾನ ನೀಡಲಾಗುತ್ತಿದೆ. 


ಸುದ್ದಿ ಓದಿ