ಕುಮಾರಸ್ವಾಮಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯಸ್ವಾಮಿ ವಿಶೇಷಾಲಂಕಾರ
ಲೋಕದರ್ಶನ ವರದಿ
ಬಳ್ಳಾರಿ 23: ನಗರದ ದೇವಿನಗರ ಮುಖ್ಯರಸ್ತೆಯಲ್ಲಿರುವ ಕುಮಾರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಕೃತಿಕಾ ನಕ್ಷತ್ರ ಪ್ರಯುಕ್ತ ಸುಬ್ರಹ್ಮಣ್ಯಸ್ವಾಮಿಗೆ ಆಡಿ ಕೃತಿಕವನ್ನು ಭಕ್ತಿಯಿಂದ ನೆರವೇರಿಸಲಾಯಿತು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಿ ವಿಜಯ ಕುಮಾರ್ರವರು ತಿಳಿಸಿದರು.
ದೇವಸ್ಥಾನದ ಮುಖ್ಯ ಅರ್ಚಕ ಬೀರಂ ವೆಂಕಟಸುಬ್ಬಾರೆಡ್ಡಿ, ನಾಗರಾಜಸ್ವಾಮಿ ಮತ್ತು ಮಲ್ಲಿಕಾರ್ಜುನಸ್ವಾಮಿ ಇವರಿಂದ ಪಂಚಾಮೃತ ಅಭಿಷೇಕ ಸುಬ್ರಮಹ್ಮಣ್ಯಂ ಸ್ವಾಮಿಗೆ ವಿಶೇಷಾಲಂಕಾರ ಮಾಡಿ ಗಣಪತಿ ಪೂಜೆ, ದೇವಸೇನೆ, ನವಗ್ರಹ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ಎಲ್ಲಾ ಭಕ್ತಾಧಿಗಳಿಗೆ ದರ್ಶನ ಸೇರಿದಂತೆ ಪ್ರಸಾದ ವಿತರಣೆಯನ್ನು ನಡೆಸಲಾಯಿತು.
ಇಂದು ಸಂಜೆ ಸುಬ್ರಹ್ಮಣ್ಯಂಸ್ವಾಮಿಯವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನದಿಂದ ಎಸ್.ಪಿ ಸರ್ಕಲ್, ಬಸವನಕುಂಟೆ, ದೇವಿನಗರ, ಅಗ್ನಿಶಾಮಕ ಕಛೇರಿಯ ದೇವಸ್ಥಾನದವರೆಗೆ ಭಕ್ತರು ಭಜನೆ, ಭಕ್ತಿಗೀತೆಗಳ ಮೂಲಕ ನಡೆಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳಾದ ಪವನ್ಕುಮಾರ್ ಮಾಲಪಾಟಿ, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಎಂ ಎಚ್ ಪ್ರಕಾಶ್ರಾವ್ ಮತ್ತು ಕಾರ್ಯನಿರ್ವಾಹಣಾಧಿಕಾರಿ ಹನುಮಂತು, ಜಿಲ್ಲಾಧಿಕಾರಿಗಳ ಸಹಾಯಕ ಸಿಬ್ಬಂದಿ ಮಂಜುನಾಥ, ದೇವಸ್ಥಾನದ ಸದಸ್ಯರಾದ ಬಿ ಪ್ರಕಾಶ್, ಎಂ ಕೃಷ್ಣಮೂರ್ತಿ, ಸುಧಾಕರ್ ಇನ್ನಿತರರಿದ್ದರು.