ಗೆಲುವಿಗಾಗಿ ಅಭ್ಯರ್ಥಿಗಳ ವಿಶೇಷ ಪೂಜೆ!
ಸಿಂದಗಿ, ನ 2: ಇಂದು ಸಿಂದಗಿ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಕೋಲೆಬಸವನಿಗೆ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಜಯಪುರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಭೂಸನೂರ ಮತ್ತು ಪುತ್ರಿ, ಆರತಿ ಬೆಳಗಿ, ಬಾಳೆ ಹಣ್ಣು ತಿನ್ನಿಸಿ ಕೊಲೆಬಸವನಿಗೆ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು. ಇತ್ತ ಗೆಲುವಿಗಾಗಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕುಟುಂಬಸ್ಥರ ಜತೆ ನಮಾಜ್ ಮಾಡಿ ತಮ್ಮ ಜಯಕ್ಕಾಗಿ ಪ್ರಾರ್ಥಿಸಿದರು.