ಬಳ್ಳಾರಿ

ವಿಶೇಷ ಸುಕೋ ಬ್ಯಾಂಕ್ ಸಾಲ ಯೋಜನೆ

ವಿಶೇಷ ಸುಕೋ ಬ್ಯಾಂಕ್ ಸಾಲ ಯೋಜನೆ

ಬಳ್ಳಾರಿ, ಜ. 18:ರಾಜ್ಯದ ಮುಂಚೂಣಿ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್, ಮೂರು ವಿಶೇಷ ಸ್ಟಾರ್ಟ್‍ಅಪ್ ಕಂಪನಿಗಳ ಜೊತೆ ಫ್ರಾಂಚೈಸಿ (ಸ್ಥಳೀಯ ರಿಟೇಲ್ ವ್ಯಾಪಾರ) ತೆರೆಯಲು ನವ ಉದ್ಯಮಿಗಳಿಗೆ ಅವಕಾಶ ಕಲ್ಪಿಸಲಿಕ್ಕಾಗಿ `ಸ್ಟಾರ್ಟ್ ಅಪ್‍ಟು ಸೆಲ್ಫ್ ಎಂಪ್ಲಾಯ್ಮೆಂಟ್' ಎಂಬ ವಿಶೇಷ ಸಾಲ ಯೋಜನೆಯನ್ನು ರೂಪಿಸಿ, ಪ್ರಕಟಿಸಿದೆ. 

ಸುಕೋ ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಉತ್ತರ ಕರ್ನಾಟಕದ  ಅನೇಕರು ಉದ್ಯೋಗ ಹುಡುಕಿಕೊಂಡು ಮೆಟ್ರೋ ಸಿಟಿಗಳಿಗೆ ವಲಸೆ ಹೋಗಿದ್ದರು. ಆದರೆ, `ಕೋವಿಡ್ -19'ನಂತರ ಅನೇಕರು ವಿವಿಧ ಕಾರಣಗಳಿಗಾಗಿ ಸ್ವಗ್ರಾಮಗಳಿಗೆ ಮರಳಿ, ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಉದ್ಯಮಗಳತ್ತ ಗಮನ ನೀಡಿ ನವ್ಯೋದ್ಯಮಗಳನ್ನು  ಹುಡುಕಾಡುತ್ತಿರುವುದು  ವಿಶೇಷವಾಗಿದೆ.

ಈ ವಿಶೇಷ ವ್ಯಾಪಾರದ ಸ್ಟಾರ್ಟ್‍ಅಪ್ ಕಂಪನಿಗಳು ವಿನೂತನವಾದ ಉತ್ಪನ್ನಗಳನ್ನು ಹೊಂದಿವೆ. ಈ ಉತ್ಪನ್ನಗಳಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವುದೇ ಪರ್ಯಾಯಗಳ ಸ್ಪರ್ಧೆ ಇಲ್ಲ. ನವ್ಯೋದ್ಯಮಗಳನ್ನು ಪ್ರಾರಂಭಿಸಲು ಆಸಕ್ತರು ವಿನೂತನ ಉತ್ಪನ್ನಗಳ ಫ್ರಾಂಚೈಸಿಯನ್ನು ಪಡೆದು ಉದ್ಯಮಪತಿಗಳಾಗಳು ಮುಕ್ತ ಅವಕಾಶಗಳಿವೆ.

ಸುಕೋ ಬ್ಯಾಂಕ್ 15 ಕೋಟಿರೂಪಾಯಿ ಸಾಲ ವಿತರಣೆಯಗುರಿಯೊಂದಿಗೆ 500 ಕ್ಕೂ ಹೆಚ್ಚಿನ ಉದ್ಯಮಿಗಳ ಸ್ವಾವಲಂಬನೆಯ ಬದುಕಿಗೆ ನೆರವಾಗಲು `ಸ್ವಉದ್ಯೋಗಕ್ಕಾಗಿ ಸ್ಟಾರ್ಟ್‍ಅಪ್' ಯೋಜನೆಯನ್ನು ರೂಪಿಸಿಹೊಸತನದ ನಿರೀಕ್ಷೆಯಲ್ಲಿ ಇರುವವರಿಗೆ `ಸ್ಟಾರ್ಟ್ ಅಪ್‍ಟು ಸೆಲ್ಫ್‍ಎಂಪ್ಲಾಯ್ಮೆಂಟ್' ವಿಶೇಷ ಸಾಲ ಯೋಜನೆ ನೆರವಾಗಲಿದೆ.

ಈ ಉದ್ದಿಮೆ ಕೇಂದ್ರಗಳನ್ನು ಪ್ರಾರಂಭಿಸಲು ಆಸಕ್ತರು ಸುಕೋ ಬ್ಯಾಂಕಿನಜಾಲತಾಣತಿತಿತಿ.suಛಿobಚಿಟಿಞ.ಛಿom ಅಥವಾ ಹತ್ತಿರದ ಸುಕೋ ಬ್ಯಾಂಕ ಶಾಖೆಗಳಿಗೆ ಭೇಟಿ ನೀಡಿರಿ.ಅಥವಾ ಬ್ಯಾಂಕ್‍ನಕಾಲ್ ಸೆಂಅಟರ್ 18001215560 ಗೆಕರೆ ಮಾಡಿ ಅಥವಾ 8197944402 ಗೆ  ವಾಟ್ಸಾಪ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜ. 30 ಕೊನೆಯ ದಿನವಾಗಿದೆ

ಈ ಮೂರು ಯೋಜನೆಗಳು ರೂಪಾಯಿ 3 ರಿಂ 5 ಲಕ್ಷದ ಒಳಗಿನ ಬಂಡವಾಳ ಹೊಂದಿದ್ದು, ಪ್ರತೀ ತಿಂಗಳು ಕನಿಷ್ಠ 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಆದಾಯ ಗಳಿಸುವ ಅವಕಾಶಗಳನ್ನು  ಹೊಂದಿವೆ. ಈ ಬಗ್ಗೆ ಎಸ್2ಎಸ್‍ಇ ಯೋಜನೆ ಸ್ಟಾರ್ಟ್ ಅಪ್‍ಗಳ ವಿನೂತನ ಆವಿಷ್ಕಾರಗಳನ್ನು ರಾಜ್ಯದಜನತೆಗೆ ಉದ್ದಿಮೆ ಹಾಗು ವ್ಯಾಪಾರದ ಅವಕಾಶಗಳಾಗಿ ಪರಿವರ್ತಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ಮೋಹಿತ ಮಸ್ಕಿ, ಅಧ್ಯಕ್ಷರು, ಸುಕೋ ಬ್ಯಾಂಕ್ ತಿಳಿಸಿದ್ದಾರೆ.

ಸುದ್ದಿ ಓದಿ