ಕಾಂಗ್ರೆಸ್ ಟಿಕೆಟ್ ಲಭಿಸಿ ಕ್ಷೇತ್ರದ ಶಾಸಕರಾಗಲಿ ಎಂದು ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ವಿಶೇಷ ಪೂಜೆ
ತಾಳಿಕೋಟೆ05: ಸಮಾಜ ಸೇವಕ ಆನಂದ ದೊಡಮನಿ ಅವರಿಗೆ ದೇವರಹಿಪ್ಪರಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಭಿ ಪಾರಂ ಸಿಕ್ಕು ಮತಕ್ಷೇತ್ರ ಶಾಸಕರಾಗಿ ಆಯ್ಕೆಯಾಗಲಿ ಎಂದು ಹರಕೆ ಹೊತ್ತು ತಾಲೂಕಿನ ಬೂದಿಹಾಳ.ಪಿ.ಟಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ತಾಲೂಕಿನ ಬೂದಿಹಾಳ.ಪಿ.ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಆನಂದ ದೊಡಮನಿ ಅಭಿಮಾನಿಗಳಾದ ಪರಶುರಾಮ ಪೂಜಾರಿ, ರಾಮಣ್ಣ ನಾಯ್ಕಲ, ಶರಣಪ್ಪ ಹಯ್ಯಾಳ, ಶಣ್ಮುಕಪ್ಪ ನಾಯ್ಕಲ, ಪರಮಣ್ಣ ಲಿಂಗದಳ್ಳಿ, ಹಣಮಂತ ಮಾದರ, ಮಲ್ಲಿಕಾರ್ಜುನ ನಾಯ್ಕಲ ಹರಕೆಯನ್ನು ಹೊತ್ತುಕೊಂಡು ಸವದತ್ತಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಬೂದಿಹಾಳ ಗ್ರಾಮದಿಂದ ವಾಹನಕ್ಕೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ಕಟ್ಟಿಕೊಂಡು, ಆನಂದ ದೊಡಮನಿ ಅವರ ಭಾವಚಿತ್ರ ಸಮೇತ ಪ್ರಯಾಣ ಬೆಳೆಸಿದ ಅವರು ದೇವಸ್ಥಾನದಲ್ಲಿ ಭಾವಚಿತ್ರವಿರುವ ದೊಡ್ಡ ಬ್ಯಾನರ ಸಹಿತ ಪೂಜೆಯನ್ನು ಸಲ್ಲಿಸಿದ್ದಾರೆ.
ಮಾತನಾಡಿದ ಪರಶುರಾಮ ಪೂಜಾರಿ, ದೇವರ ಹಿಪ್ಪರಗಿ ಮತಕ್ಷೇತ್ರ ಕಾಂಗ್ರೇಸ್ ಪಕ್ಷದ ಭದ್ರಕೋಟೆಯಂತಿದೆ. ಅಸಂಖ್ಯಾತ ಕಾರ್ಯಕರ್ತರಿದ್ದಾರೆ. ನಾಯಕರು ಒಗ್ಗಟ್ಟಿನ ಕೊರೆತೆಯಿಂದಾಗಿ ಕಳೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಮುಖಂಡ ಆನಂದ ದೊಡಮನಿ ಮತಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕಾರ್ಯಕರ್ತರ ನೋವು ನಲಿವು, ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಕಾರ್ಯಕರ್ತರ ದೊಡ್ಡ ದಂಡೆ ಅವರ ಹಿಂದೆ ಇದೆ. ಆನಂದ ದೊಡಮನಿ ಅವರಿಗೆ ಕಾಂಗ್ರೆಸ್ ಟಿಕೇಟ್ ಸಿಕ್ಕರೆ ಗೆಲುವು ಸಾಧ್ಯವಾಗಲಿದೆ. ಹೀಗಾಗಿ ನಾವೆಲ್ಲಾ ಉತ್ತರ ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ಹರಕೆಯನ್ನು ಹೊಒತ್ತುಕೊಂಡು ಪೂಜೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.