ಗುರು ಗೋವಿಂದ-ಶರೀಫರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದ ಹೊರವಲಯದಲ್ಲಿರುವ ಗುರು ಗೋವಿಂದ-ಶರೀಫರ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಬುಧವಾರ ವಿಶೇಷ ಪೂಜೆ ಮತ್ತು ಸಾರ್ವಜನಿಕರಿಗೆ ಅನ್ನ ಸಂತರೆ್ಣ ಕಾರ್ಯಕ್ರಮ ಜರುಗಿತು.
2006 ಮೇ ತಿಂಗಳಿನಲ್ಲಿ ಗುರು ಗೋವಿಂದ-ಶರೀಫರ ದೇವಸ್ಥಾನದ ಉದ್ಘಾಟನೆ ಕಾರ್ಯ ನಡೆಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ತಿಂಗಳ ಆಮಾವಾಸ್ಯೆಯಂದು ವಿಶೇಷ ಪೂಜೆಯೊಂದಿಗೆ ಸಾರ್ವಜನಿಕರಿಗೆ ಅನ್ನ ಸಂತರೆ್ಣ ಕಾರ್ಯಕ್ರಮ ಮತ್ತು ವಿಶೇಷವಾಗಿ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹಗಳನ್ನು ಸುತ್ತ-ಮುತ್ತಲಿನ ಗ್ರಾಮಸ್ಥರ ಸಹಕಾರದಿಂದ ನಡಿಗೇರ ಮನೆತನದವರು ಮಾಡುತ್ತಾ ಬಂದಿದ್ದೇವೆ ಎಂದು ಗುರು ಗೋವಿಂದ-ಶರೀಫರ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಸಹದೇವಪ್ಪ ನಡಿಗೇರ ತಿಳಿಸಿದರು.