ಮುಂದಗೋಡ

ಶ್ರೀಗೋವಿಂದ-ಶ್ರೀಶರೀಫರ ಶಿವಯೋಗ ಮಂದಿರದಲ್ಲಿ ವಿಶೇಷ ಪೂಜೆ, ಅನ್ನ ಸಂತರೆ​‍್ಣ

ಶ್ರೀಗೋವಿಂದ-ಶ್ರೀಶರೀಫರ ಶಿವಯೋಗ ಮಂದಿರದಲ್ಲಿ ವಿಶೇಷ ಪೂಜೆ, ಅನ್ನ ಸಂತರೆ​‍್ಣ

 ಮುಂಡಗೋಡ:ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿರುವ ಶ್ರೀಗುರು ಗೋವಿಂದ ಮತ್ತು ಶ್ರೀಸಂತ ಶಿಶುನಾಳ ಶರೀಫರ ಶಿವಯೋಗ ಮಂದಿರದಲ್ಲಿ ಅಮಾವಾಸ್ಯೆ ನಿಮಿತ್ತ ಬುಧವಾರ ವಿಶೇಷ ಪೂಜೆ ಮತ್ತು ಅನ್ನ ಸಂತರೆ​‍್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಮಂದಿರದ ನಿರ್ಮಾಣವಾಗಿ 11 ವರ್ಷಗಳಾದವು. ಪ್ರತಿ ವರ್ಷ ಜಾತ್ರೆ ಜರುಗುತ್ತಿತ್ತು. ಪ್ರತಿ ಅಮಾವಾಸ್ಯೆಗೆ ಅನ್ನ ಸಂತರೆ​‍್ಣ ಕಾರ್ಯಕ್ರಮ ನಡೆಯುತ್ತಿತ್ತು. ಕರೊನಾ ಕಾರಣದಿಂದ ಕಳೆದ 3 ವರ್ಷಗಳಿಂದ ಉತ್ಸವ ಹಾಗೂ ಅನ್ನ ಸಂತರೆ​‍್ಣ ರದ್ದು ಮಾಡಲಾಗಿತ್ತು. ಈಗ ಮತ್ತೆ ಈ ಛಟ್ಟಿ ಅಮಾವಾಸ್ಯೆಯಿಂದ ಸಾರ್ವಜನಿಕರಿಗೆ ಅನ್ನ ಸಂತರೆ​‍್ಣ ಆರಂಭಿಸಲಾಗಿದ್ದು ಇನ್ನು ಮುಂದೆ ಪ್ರತಿ ಅಮಾವಾಸ್ಯೆ ದಿನದಂದು ಅನ್ನ ಸಂತರೆ​‍್ಣ ಸೇವೆ ಮಾಡಲಾಗುವುದು ಮತ್ತು ಪ್ರತಿ ವರ್ಷ ಜಾತ್ರಾ ಮಹೋತ್ಸವ ಜರುಗುವುದು ಎಂದು ಶ್ರೀಸಂತ ಶಿಶುನಾಳ ಶರೀಫರ ಶಿವಯೋಗ ಮಂದಿರದ ಟ್ರಸ್ಟ್‌ನ ಅಧ್ಯಕ್ಷ ಚಿದಾನಂದ ಹರಿಜನ ತಿಳಿಸಿದರು. 


ಸುದ್ದಿ ಓದಿ