ರಸ್ತೆ ಸುರಕ್ಷತಾ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ19: ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ಸಕಾರಾತ್ಮಕ ಧೋರಣೆ, ಸೃಜನಶೀಲತೆ, ಆತ್ಮವಿಶ್ವಾಸ, ಸಮಯದ ಸದ್ಭಳಿಕೆ, ಅಳವಡಿಸಿಕೊಳ್ಳುವುದು ಅತ್ಯಗತ್ಯ. ಆದರ್ಶ ವ್ಯಕ್ತಿತ್ವವು ಕೂಡ ಸಾಧನೆಯ ಯಶಸ್ಸಿಗೆ ಕಾರಣವಾಗುತ್ತದೆ. ಸಾಧನೆಯ ಹಾದಿಯಲ್ಲಿ ಪ್ರಯತ್ನಗಳು ನಿರಂತರವಾಗಿರಲಿ, ಸಮಸ್ಯೆಗಳಿಗೆ ವಿಚಲಿತರಾಗದಿರಿ. ಯಾವುದೇ ಒಂದು ಪ್ರಯತ್ನ ನಿರರ್ಥಕವಲ್ಲ ಅದು ಮುಂದಿನ ಒಂದು ಉತ್ತಮ ಪ್ರಯತ್ನಕ್ಕೆ ಭದ್ರವಾದ ಬುನಾದಿಯಾಗಬಲ್ಲದು ಎಂದು ಚೇತನ ಕಾಮಗೊಂಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಲ್ಪವೃಕ್ಷ ಫೌಂಡೇಶನ್, ಜಮಖಂಡಿ ಹಾಗೂ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಕಡಪಟ್ಟಿ-ಜಮಖಂಡಿ ಸಹಯೋಗದಲ್ಲಿ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಹಾಗೂ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಸ್ತೆ ಸುರಕ್ಷತಾ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಇನ್ನೋರ್ವ ಪ್ರದೀಪ ಹಂಚಿನಾಳ ಮಾತನಾಡಿ, ರಸ್ತೆ ಸುರಕ್ಷಾ ಕ್ರಮಗಳನ್ನು ವಿದ್ಯಾರ್ಥಿಗಳು ತಪ್ಪದೆ ಪಾಲಿಸಬೇಕು. ಅಜಾಗರೂಕತೆಯಿಂದ ವತರ್ಿಸದೆ ಜೀವಹಾನಿಯಾಗುವದನ್ನು ತಪ್ಪಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ರವೀಂದ್ರ ಎಸ್ ತಳ್ಳಿ ಮಾತನಾಡಿ, ಮಹಾತ್ಮರ ಆದರ್ಶ, ಸಾಧನೆ, ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಹಿರಿಯ ಶಿಕ್ಷಕ ಎಂ.ಜಿ.ಹೆಬ್ಲಿ ಕಾರ್ಯಕ್ರಮ ನಿರೂಪಿಸಿದರು.