ಬಳ್ಳಾರಿ

ಐದು ಸಾವಿರ ಬೀಜದ ಉಂಡೆ ಬಿತ್ತನೆ: ಪ್ರೊ. ಸಿದ್ದು ಅಲಗೂರು

ಐದು ಸಾವಿರ ಬೀಜದ ಉಂಡೆ ಬಿತ್ತನೆ: ಪ್ರೊ. ಸಿದ್ದು ಅಲಗೂರು

ಬಳ್ಳಾರಿ 18: ಸಮಾಜದಲ್ಲಿ ಸುಸ್ತಿರ ಪರಿಸರ ಬೇಳವಣಿಗೆ ಅಗತ್ಯವಾಗಿದ್ದು ಕೋವಿಡ್ ನ ಸಂದರ್ಭದಲ್ಲಿ ಇಡೀ ರಾಜ್ಯಾಂದ್ಯಂತ ಆಕ್ಸಿಜೆನ್ ಚಾಲೆಂಜ್ ಕಾರ್ಯಕ್ರಮವನ್ನು ಎಸ್‌.ಎಫ್‌.ಡಿ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ. ಅಲಗೂರು ಹೇಳಿದರು. 

ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ  ದಿ. 18ರಂದು ಅಂತರಾಷ್ಟ್ರೀಯ ಪರಿಸರ ದಿನ ಜೂನ್ 5, 2021ರಿಂದ ಸ್ಟೂಡೆಂಟ್ಸ್‌ ಫಾರ್ ಡೆವಲಪ್ಮೆಂಟ್ (ಎಸ್‌.ಎಫ್‌.ಡಿ.) ಆಯಾಮವು ರಾಜ್ಯಾಂದ್ಯಂತ ಹಮ್ಮಿಕೊಂಡಿರುವ ಆಕ್ಸಿಜೆನ್ ಚಾಲೆಂಜ್ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಕಾರದೊಂದಿಗೆ ಗಿಡ ನೆಡುವ ಮತ್ತು ಐದು ಸಾವಿರ ಬೀಜದ ಉಂಡೆ  ಬಿತ್ತನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

ಇಡೀ ರಾಜ್ಯದಲ್ಲಿ ಹತ್ತು ಲಕ್ಷ ಗಿಡಗಳು ಹತ್ತು ಲಕ್ಷ ಬೀಜದ ಉಂಡೆ  ಬಿತ್ತನೆ ಕಾರ್ಯಕ್ರಮ ತುಂಬಾ ಯಶಸ್ವಿಯಾಗಲೆಂದು ಹಾರೈಸಿದರು.  

ಕುಲಸಚಿವ ಪ್ರೊ.ಶಶಿಕಾಂತ್ ಉಡಕೇರಿರವರು ಹಾಗೂ ಸಿಂಡಿಕೇಟ್ ಸದಸ್ಯ ಡಾ. ಮರ್ಚೆಡ್ ಮಲ್ಲಿಕಾರ್ಜುನ್ ಮಾಜಿ ಸಿಂಡಿಕೇಟ್ ಸದಸ್ಯ ಡಾ.ದೊಡ್ಡಬಸವನಗೌಡ ಎ.ಬಿ.ವಿ.ಪಿ.ವಿಭಾಗ ಸಂಘಟನಾ ಕಾರ್ಯದರ್ಶಿ ಯುವರಾಜ್ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಗೌರಿ ಮಾಣಿಕ್ ಮಾನಸ, ಸ್ಕೌಟ್ ಎಂಡ್ ಗೈಡ್ ಮಂಗಳ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಎ.ಬಿ.ವಿ.ಪಿ.ಕಾರ್ಯಕತರು ಸಸಿನೆಡುವ ಮತ್ತು ತಬುಬಿಯಾ ರೋಸ್, ಬಹುನೀಯಾ ಮತ್ತು ಗುಮಾರ್ ಸೀಡ್ ಬಾಲ್ ಬಿತ್ತನೆ ಮಾಡುವ ಮೂಲಕ ಭಾಗವಹಿಸಿದ್ದರು. 


ಸುದ್ದಿ ಓದಿ