ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್‌ಬಾಲ್ (ಪುರುಷ) ಪಂದ್ಯಾವಳಿ
ಲೋಕದರ್ಶನ ವರದಿ
ಕಲಬುರ್ಗಿ 15 : ದಿನಾಂಕ 17/03/2026 ರಿಂದ 21/03/2026 ರವರೆಗೆ ವೆಲ್ಲೂರು ಇಸ್ಸಿಸ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್‌ಬಾಲ್ (ಪುರುಷ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ತಂಡವು ಭಾಗವಹಿಸುತ್ತಿದೆ.
ತಂಡದ ನಾಯಕ ಪ್ರಕಾಶ, ತಂಡದ ಸದಸ್ಯರು ಪ್ರಜ್ವಲ್, ಆದಿತ್ಯ, ಸೋಹಾಂ, ಸನಿಕುಮಾರ, ನೀತೀನ, ಪ್ರಜ್ವಲ್, ಆಮೋಘ ಸಿದ್ದ, ಆಷಿಫ್ ಶಹಾ, ಮಾದೇಶ, ಶಿವರಾಜ ಮತ್ತು ಕಾರ್ತಿಕ ತಂಡದ ಸದಸ್ಯರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ/ತರಬೇತುದಾರರಾಗಿ ಡಾ. ಮಧೂಸೂದನ ರೆಡ್ಡಿ ದೈಹಿಕ ಶಿಕ್ಷಣ ಬೋದಕರು ಎಂ.ಜೆ.ಪಿ. ಆರ್ಟ್ಸ ಕಾಲೇಜು ಕಲಬುರಗಿ ಇವರು ಭಾಗವಹಿಸುವರು.
ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶಶಿಕಾಂತ. ಎಸ್. ಉಡಿಕೇರಿ, ಕುಲಸಚಿವರಾದ ಪ್ರೊ. ರಮೇಶ ಲಂಡನಕರ್, ಡಾ. ಎನ್.ಜಿ. ಕಣ್ಣೂರ, ಕುಲಸಚಿವರು (ಮೌಲ್ಯಮಾಪನ) ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಡಾ. ಎಚ್.ಎಸ್. ಜಂಗೆ, ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ, ಡಾ. ಚಂದ್ರಕಾಂತ ಬಿರಾದಾರ, ಪ್ರಶಾಂತಕುಮಾರ ಡಿ, ಅರುಣಕುಮಾರ ಎಚ್. ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.