ವಿಜಯಪುರ

ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ: ಪೂರ್ವಭಾವಿ ಸಭೆ

ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ: ಪೂರ್ವಭಾವಿ ಸಭೆ


 ದೇವರಹಿಪ್ಪರಗಿ 09: ತಾಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಶಾಲೆಯ ಸಭಾಭವನದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. 

ಸಭೆಯ ಸಾನ್ನಿಧ್ಯವನ್ನು ಗುರು ಮಾಂತೇಶ್ವರ ಮಠದ ದಾರುಕಲಿಂಗ ಶಿವಾಚಾರ್ಯರು ವಹಿಸಿ ಮಾತನಾಡಿದ ಅವರು, ನಾ ಭೂತೊ.. ನಾ ಭವಿಷ್ಯ.. ಅನ್ನುವ ಹಾಗೆ ಎಲ್ಲರೂ ಸೇರಿ ನಮ್ಮ ಕಾರ್ಯಕ್ರಮ ಎಂದು ತನುಮನ ಧನದೊಂದಿಗೆ ಕಾರ್ಯಗಳನ್ನು ಮಾಡಿದಾಗ ಮಾತ್ರ ಯಶಸ್ವಿ ಆಗಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು. 

ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಶಹಾಪೂರ ಸಿಪಿಐ ಶರಣಗೌಡ ನ್ಯಾಮಣ್ಣವರ ಅವರು ಮಾತನಾಡಿ, ಉತ್ತಮವಾದ ಕಾರ್ಯ ಯೋಜನೆಗಳನ್ನು ರೂಪಿಸಿಕೊಳ್ಳಿ ಎಷ್ಟೇ ಒತ್ತಡವಿದ್ದರೂ ನಾವು ನಿಮ್ಮ ಜೊತೆ ಸೇರಿ ಸಹಕರಿಸುತ್ತೇನೆ. ಎಲ್ಲರನ್ನೂ ಒಟ್ಟುಗೂಡಿಸುವಾಗ ಕಾರ್ಯ ಬೇಗ ಆಗಲಿ ಎಂದು ಹೇಳಿದರು. 

ಇನ್ನೋರ್ವ ಹಳೆ ವಿದ್ಯಾರ್ಥಿ ಹಾಗೂ ಸಿಪಿಐ ಆದ ಸುನೀಲ ಮೂಲಿಮನಿ ಅವರು ಮಾತನಾಡಿ, ಎಲ್ಲಾ ಕಾರ್ಯಗಳಿಗಿಂತಲೂ ನಾನು ಕಲಿತ ಶಾಲೆಯ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಅದರಲ್ಲಿ ಭಾಗಿಯಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು. 

ಸಭೆಯ ನೇತೃತ್ವ ವಹಿಸಿದ ಹಳೆಯ ವಿದ್ಯಾರ್ಥಿ ಪ್ರವಚನಕಾರ ಬಸಯ್ಯ ಸ್ವಾಮಿಗಳು ಮಾತನಾಡಿ, ತಾಯಿಯ ಋಣ, ಭೂಮಿಯ ಋಣ ಹಾಗೂ ಗುರುವಿನ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯ, ಅಕ್ಷರ ಕಲಿತ ಶಾಲೆ ಜೀವಂತ ದೇವಾಲಯ. ಸುವರ್ಣ ಮಹೋತ್ಸವದ ಜೊತೆ ಜೊತೆಗೆ ಹೈಟೆಕ್ ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಶೌಚಾಲಯ ಹಾಗೂ ಹೈಟೆಕ್ ಸ್ಮಾರ್ಟ್‌ ಕ್ಲಾಸ್ ಆಗಿ ಜಿಲ್ಲೆಗೆ ಮಾದರಿ ಶಾಲೆಯಾಗಲಿ ಎಂದು ಶುಭ ಹಾರೈಸಿದರು. 

ಸಂಸ್ಥೆಯ ಅಧ್ಯಕ್ಷ ರಾಜುಗೌಡ ಸಂ,ನಾಡಗೌಡ್ರ, ಬಿ.ಆರ್‌. ಪಾಟೀಲ, ಆರ್‌.ಎಸ್‌. ಪಾಟೀಲ, ಅರವಿಂದ ನಾಗರಾಳ, ಭೀಮನಗೌಡ ಗುಂಡಕನಾಳ,ಡಾ. ಸಮೀರ್ ಕಾಚೂರ, ಶಾಂತಗೌಡ ನಾಗರಾಳ, ಹುಮಾಯನ್ ಅತ್ತಾರ ಸೇರಿದಂತೆ ನೂರಾರು ಜನ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಎಚ್‌.ಪಿ.ಕರಡಿ ಸ್ವಾಗತಿಸಿದರು, ಶಿಕ್ಷಕರಾದ ಎಸ್‌.ಎನ್‌.ಥಬ್ಬಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ವೈ. ಬಂಟನೂರ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ