ಬಳ್ಳಾರಿ

ವಿಶ್ವಶಾಂತಿಗಾಗಿ ಹೋಮ ಮಾಡಿದ ಶಾಸಕ ಸೋಮಶೇಖರ ರೆಡ್ಡಿ

ವಿಶ್ವಶಾಂತಿಗಾಗಿ ಹೋಮ ಮಾಡಿದ ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ.ಫೆ.14 : ನಗರದ 35ನೇ ವಾರ್ಡ್, ಸಿರುಗುಪ್ಪ ರಸ್ತೆ, ಹವಂಬಾವಿ ಆಂಜಿನೇಯ ದೇವಸ್ಥಾನದ ಹತ್ತಿರ ಇರುವ ರಾಮುಲಮ್ಮ ದೇವಿ ದೇವಸ್ಥಾನ ಪ್ರಥಮ ವಾರ್ಷಿಕ ಮಹೋತ್ಸವದ ಸಮಾರೋಪ ಪೂಜಾ ಕಾರ್ಯಕ್ರಮಗಳನ್ನು ಬಳ್ಳಾರಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿಯವರು ವಿಶ್ವ ಶಾಂತಿಹೋಮ ಮತ್ತು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. 

ಈ ಸಂದರ್ಭದಲ್ಲಿ ಅವರು ಮಾತನಾಡಿ, ವಿಶ್ವಕ್ಕೆ ಕೋರಾನದಿಂದ ಮುಕ್ತಿ ಸಿಗಲಿ, ಸರ್ವರು ಸುಖ-ಶಾಂತಿ ನೆಮ್ಮದಿಯಿಂದ ಬಾಳಲಿ ಎಂದು ರಾಮುಲಮ್ಮ ದೇವಿ ಅವರಲ್ಲಿ ಪ್ರಾರ್ಥಿಸಿ ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆಂದರೆ, 

ದೇವಿ ಮೂರ್ತಿಗೆ ಅರ್ಚಕರಿಂದ ದೇವಿಗೆ ವಿಶೇಷ ಅಲಂಕರಣ ಮಾಡಿಸಿ ಭಕ್ತಾದಿಗಳಿಗೆ ದೇವಿ ದರ್ಶನ ಮಾಡಿಸಿದರು, ಪೂಜಾ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ, ಶಾಸಕರ ಪುತ್ರ ಶ್ರವಣ್‍ಕುಮಾರ್ ರೆಡ್ಡಿ, ಬಿ.ಜೆ.ಪಿ ಮುಖಂಡ ವೀರಶೇಖರ ರೆಡ್ಡಿ, ಭಕ್ತರಾದ ಟಿ.ಧನುಂಜಯ, ಬಾಬು, ದೊಡ್ಡ ಬಸಪ್ಪ, ಹೊಟೆಲ್ ನಾಗರಾಜ್, ಕರೆಂಟ್ ನಾಗರಾಜ್, ಕೇಶವ, ಸೂರಿ, ನವೀನ್ ಶ್ಯಾಮಿಯಾನ್ ಶರಣ, ಹವಂಬಾವಿ ಪ್ರಮುಖರು ಸೇರಿದಂತೆ ಹಲವಾರು ಭಕ್ತರು ಭಾಗವಹಿಸಿದ್ದರು.

ಸುದ್ದಿ ಓದಿ