ತಾಳಿಕೋಟಿ

ಮಾನವೀಯತೆ ಮೆರೆದ ಶಾಸಕ ಸೋಮನಗೌಡ ಪಾಟೀಲ

ಮಾನವೀಯತೆ ಮೆರೆದ ಶಾಸಕ ಸೋಮನಗೌಡ ಪಾಟೀಲ

ತಾಳಿಕೋಟಿ 28: ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ನೀರಲಗಿ ಗ್ರಾಮದ ದಲಿತ ಯುವಕರಿಬ್ಬರು ಅಪಘಾತದಲ್ಲಿ ಮೃತರಾಗಿದ್ದು ಹಾಗೂ ಬೆಕಿನಾಳ ಗ್ರಾಮದ ಬಡರೈತನಾದ ಕರಿಯಪ್ಪ ಗೊಲ್ಲಾಳಪ್ಪ ಕಟ್ಟಿಮನಿ ಆತ್ಮಹತ್ಯೆಗೆ ಶರಣಾಗಿ ಮೃತನಾದ ಹಿನ್ನೆಲೆಯಲ್ಲಿ ಶಾಸಕ ಸೋಮನಗೌಡ ಪಾಟೀಲರು ಅವರ ಮನೆಗೆ ಭೇಟಿ ನೀಡಿ ನೊಂದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಇತ್ತೀಚೆಗೆ ದೇವರಹಿಪ್ಪರಗಿ ಮತಕ್ಷೇತ್ರದ ನೀರಲಗಿ ಹಾಗೂ ಬೆಳಕಿನಾಳ ಗ್ರಾಮದಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಮೃತರಾದ ಬಡಕುಟುಂಬದ ವ್ಯಕ್ತಿಗಳ ಮನೆಗಳಿಗೆ ಭೇಟಿನೀಡಿದ ಶಾಸಕ ಸೋಮನಗೌಡರು ಕುಟುಂಬದ ಸದಸ್ಯರರಿಗೆ ಸಾಂತ್ವನ ತಿಳಿಸಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.

ನಂತರ ಮಾತನಾಡಿದ ಅವರು ಈ ಎರಡೂ ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಮೃತರಾದವರು ಬಡಕುಟುಂಬದ ವ್ಯಕ್ತಿಗಳು ಆತ್ಮಹತ್ಯೆಗೆ ಯಾವ ರೈತನು ಶರಣಾಗಬಾರದು. ಆತ್ಮಹತ್ಯೆವೆಂಬುದು ಯಾವುದೇ ಸಮಸ್ಯೆಯ ಪರಿಹಾರ ಅಲ್ಲ. ಜೀವ ಅಮೂಲ್ಯವಾಗಿದೆ. ಇದನ್ನು ನಮ್ಮ ರೈತಬಾಂಧವರು ತಿಳಿದುಕೊಳ್ಳಬೇಕು. ಇಂದು ನಾನು ವೈಯಕ್ತಿಕವಾದ ಸಹಾಯ ನೀಡಿದ್ದೇನೆ. ಸರಕಾರದಿಂದಲೂ ಅವರಿಗೆ ಪರಿಹಾರ ಮಾಡುತ್ತೇನೆ ಎಂದರು.

ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ, (ಅಸ್ಕಿ), ಪಪಂ ಸದಸ್ಯರ ರಮೇಸ ಮಸಿಬನಾಳ, ಜಿಲ್ಲ ರೈತ ಮೋರ್ಚಾ  ಆ ಪ್ರಧಾನ ಕಾರ್ಯದರ್ಶಿ  ಸಿದ್ದು ಬುಳ್ಳಾ ರಾಯನಗೌಡ ನೀರಲಗಿ ಸಂತ್ರಸ್ತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. 

ಸುದ್ದಿ ಓದಿ