ಸಮಾಜ ಸೇವೆ ನನ್ನ ಜೀವನದ ಮುಖ್ಯ ಉದ್ದೇಶ: ಮದರಿ
ತಾಳಿಕೋಟಿ 06: ನನ್ನ ಕೊನೆಯುಸಿರು ಇರುವ ತನಕ ನಾನು ನನ್ನ ಕೈಯಿಂದಾಗುವಷ್ಟು ಬಡ ಹಾಗೂ ದುರ್ಬಲ ವರ್ಗದ ಜನರ ಸೇವೆಯನ್ನು ಮಾಡುತ್ತೇನೆ ಎಂದು ಸಮಾಜ ಸೇವಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ, ಶಿಕ್ಷಣ ಪ್ರೇಮಿ ಎಂ.ಎಸ್. ಮದರಿ ತಿಳಿಸಿದರು.
ತಮ್ಮ 45ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಹಾಗೂ ಹಿತೈಷಿಗಳು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ನನ್ನ ಈ ಶಿಕ್ಷಣ ಸಂಸ್ಥೆ ಕೇವಲ ಒಂದು ವ್ಯಾಪಾರಿ ಸಂಸ್ಥೆಯಾಗಿರದೆ ಒಂದು ಸೇವಾ ಸಂಸ್ಥೆಯಾಗಿದೆ. ಸಮಾಜದಲ್ಲಿರುವ ಪ್ರತಿಭಾವಂತ ಬಡ ಮಕ್ಕಳು ಯಾವ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದೆಂಬುದು ನನ್ನ ಕಳಕಳಿಯಾಗಿದೆ. ಈ ಕಾರಣದಿಂದಾಗಿಯೆ ನಾನು ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಸುಮಾರು 2000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯ್ನ್ನು ಮಾಡಿದ್ದೆ. ನನ್ನ ಈ ಎಲ್ಲ ಕಾರ್ಯಗಳಿಗೆ ನಿಮ್ಮಂಥಹ ಹಿತೈಷಿಗಳ ಅಭಿಮಾನ ಹಾಗೂ ಪ್ರೀತಿ ವಿಶ್ವಾಸವೇ ಪ್ರೇರಣೆಯಾಗಿದೆ. ನಿಮ್ಮೆಲ್ಲರ ಅಭಿಪ್ರಾಯ ಪಡೆದುಕೊಂಡು ಸಕ್ರೀಯ ರಾಜಕಾರಣಕ್ಕೆ ಬರುತ್ತೇನೆ ಎಂದರು.
ಈ ಸಂಸರ್ಭದಲ್ಲಿ ಅವರ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.