ಬಿಜೆಪಿ ಪಕ್ಷದಿಂದ ಸಾಮಾಜಿಕ ನ್ಯಾಯ: ನಡಹಳ್ಳಿ
ತಾಳಿಕೋಟೆ20: ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಹಿಂದೆ ಅಧಿಕಾರ ನಡೆಸಿದ ಎಲ್ಲ ಪಕ್ಷಗಳು ಹಿಂದುಳಿದ ವರ್ಗಗಳನ್ನು ಕೇವಲ ವೋಟ್ ಬ್ಯಾಂಕಗಾಗಿ ಮಾತ್ರ ಬಳಿಸಿಕೊಂಡಿವೆ. ಆದರೆ ನಮ್ಮ ಸರಕಾರ ಈ ವರ್ಗದ ಜನರಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಾತಿ ಕೊಟ್ಟು ಹಿದುಳಿದ ವರ್ಗಗಳ ನೈಜ ಹಿತ ಚಿಂತಕ ಎಂದು ಸಾಬಿತು ಪಡಿಸಿದೆ ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಳವಾರ ಮತ್ತು ಪರಿವಾರ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ವಿತರಿಸಿದ ಮಾತನಾಡಿದರು.
ಕೇಲವರು ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಅವರಿಗೆ ಕೇವಲ ವೋಟ್ ಬ್ಯಾಂಕಿಗಾಗಿ ಹಿಂದುಳಿದ ವರ್ಗ ಬೇಕು. ಮೀಸಲಾತಿ ನೀಡುವದು ಬೇಡ. ನಮ್ಮ ಸರಕಾರ ಎಲ್ಲ ಹಿಂದುಳಿದ ವರ್ಗಗಳ ಅಬಿವೃದ್ದಿಗೆ ವಿಶೇಷ ಪ್ರಾಧ್ಯಾನತೆ ನೀಡಿದೆ. ತಳವಾರ ಪರಿವಾರ ಸಮಾಜಗಳ ಬಹು ದಿನಗಳ ಬೇಡಿಕೆಯಾದ ಎಸ್ಟಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಿದೆ ಎಂದರು.
ಪ್ರಮಾಣ ಪತ್ರಗಳ ವಿತರಣೆಯಲ್ಲಿ ಗೊಂದಲ ಉಂಟಾಗುತ್ತಿದೆ. ದಿನಕ್ಕೊಂದು ದಾಖಲಾತಿಗಳನ್ನು ಕೇಳುತ್ತಿದ್ದಾರೆ. ಅಧಿಕಾರಿಗಳಿಗೆ ಯಾವುದೇ ಗೊಂದಲವನ್ನು ಉಂಟು ಮಾಡದೇ ಪ್ರಮಾಣ ಪತ್ರಗಳನ್ನು ವಿತರಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ನಡಹಳ್ಳಿ, ಪ್ರಮಾಣ ಪತ್ರಗಳ ವಿತರಣೆಗೆ ಯವುದೇ ಅಡೆತಡೆಗಳನ್ನು ಮಾಡಬಾರದು. ವಿತರಿಸಲು ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿ ಯಾವುದೇ ಗೊಂದಲವಾಗದ ರೀತಿಯಲ್ಲಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಬೇಕು ಎಂದು ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ತಿಳಿಸಿದರು. ತಳವಾರ ಸಮಾದ ಪರವಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ತಳವಾರ ಸಮಾಜದ ತಾಲೂಕು ಅಧ್ಯಕ್ಷ ಪರಶುರಾಮ ತಂಗಡಗಿ, ನಗರ ಘಟಕದ ಅದ್ಯಕ್ಷ ರಮೇಶ ಮೂಕಿಹಾಳ, ಪರ್ತಕರ್ತರಾದ ಶ್ರೀಶೈಲ ಬಿರಾದಾರ, ಸುನೀಲ ತಳವಾರ, ಮಲ್ಲು ನಾಯ್ಕೋಡಿ, ಶಶಿಕಾಂತ ಮೂಕಿಹಾಳ, ತಿರುಪತಿ ಬಾಕಲಿ, ಅಭಿಲಾಷ ಹಗರಗುಂಡ, ವಿಶ್ವನಾಥ ತಳವಾರ, ಮಾಜಿ ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಮುದಕಪ್ಪ ಬಡಿಗೇರ, ಜಯಸಿಂಗ ಮೂಲಿಮನಿ, ಮುತ್ತಪ್ಪ ಚಮಲಾಪೂರ, ಭೀಮಣ್ಣ ಚೆಳ್ಳಗಿ, ಮಲಕಾಜಿ ಗುಡ್ನಾಳ, ಪರಮಾನಂದ ಕಲ್ಲೂರ, ಮಲ್ಲಿಕಾರ್ಜುನ ಅಸ್ಕಿ, ಮಲ್ಲಿಕಾರ್ಜುನ ನಾಟಿಕಾರ, ಚಂದ್ರಕಾಂತ ಯರಗಲ್ಲ, ಕಾಶಿನಾಥ ಮದರಿ, ಸೋಮುರಾಜ ಬಾಕಲಿ, ಪರಶುರಾಮ ಮದರಿ, ದತ್ತು ಕೋಲಕಾರ, ಪರಶುರಾಮ ಮದ್ದರಕಿ, ಬಸವರಾಜ ತಳವಾರ ಸೇರಿದಂತೆ ಇತರರು ಇದ್ದರು.