ಬಿಜೆಪಿ ಸರಕಾರದಿಂದ ಸಾಮಾಜಿಕ ನ್ಯಾಯ
ತಾಳಿಕೋಟೆ15: ಬಿಜೆಪಿ ನೇತೃತ್ವದ ಸರಕಾರದಿಂದ ಯಾವುದೇ ಜಾತಿಗಳಿಗೆ ಅನ್ಯಾಯ ಮಾಡದೇ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯದ ಜನರಿಗೆ ಪರಿಶಿಷ್ಠ ಪಂಗಡಗಳ ಜಾತಿ ಪ್ರಮಾಣದ ಪತ್ರ ವಿತರಿಸಿ ಮಾತನಾಡಿದರು.
ತಳವಾರ ಪರಿಹಾರ ಸಮಾಜದ 35 ವರ್ಷಗಳ ಹೋರಾಟವನ್ನು ಹಿಂದಿನ ಸರಕಾರ ನಿರ್ಲಕ್ಷ ಮಾಡುತ್ತಾ ಬಂದಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಳವಾರ ಪರಿವಾರ ಸಮಾಜಕ್ಕೆ ಪರಿಶಿಷ್ಠ ಪಂಗಡ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಅವರಿಗೆ ಸಾಮಾಜಿಕ ನ್ಯಾಯವನ್ನು ಸಿಗುವಂತೆ ಮಾಡಲಾಗಿದೆ. ಕಾಂಗ್ರೇಸ್ ಪಕ್ಷದಲ್ಲಿ ಹಿಂದುಳಿದ ವರ್ಗವನ್ನು ಕೇವಲ ವೋಟ ಬ್ಯಾಂಕಗಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದ ಅವರು ಕೆಲವು ತಾಂತ್ರಿಕ ಕಾರಣದಿಂದ ಕೆಲವೊಂದು ಪ್ರಮಾಣ ಪತ್ರಗಳನ್ನು ವಿತರಿಸಲು ತಡವಾಗಿದೆ. ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಳವಾರ ಸಮಾಜದ ಪರವಾಗಿ ಶಾಸಕ ಸೋಮನಗೌ ಪಾಟೀಲ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಗೋಟೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ, ತಳವಾರ ಸಮಾಜದ ತಾಲೂಕಾಧ್ಯಕ್ಷ ಪರಶುರಾಮ ತಳವಾರ, ನ್ಯಾಯವಾದಿ ಮಲ್ಲಿಕಾರ್ಜುನ ಜೂಲಿ, ಸಮಾಜದ ಮುಖಂಡರಾದ ಶಾಂತಪ್ಪ ಇಣಚಗಲ್ಲ, ಶಾಂತಗೌಡ ಪಾಟೀಲ, ಶ್ರೀಶೈಲ ಬಿರಾದಾರ, ಸಂತೋಷ ಕುಳಗೇರಿ, ವಿಶ್ವನಾಥ ತಳವಾರ, ಮಲ್ಲಪ್ಪ ತಳವಾರ, ಭೀಮು ತಳವಾರ, ಬಿಜೆಪಿ ಮುಖಂಡ ಸಂಗನಗೌಡ ಹೆಗರೆಡ್ಡಿ, ಮುತ್ತುಗೌಡ ಮಾಳಿ, ಬಸನಗೌಡ ಬಿರಾದಾರ, ಸಾಯಬಣ್ಣ ಆಲ್ಯಾಳ, ಸಿದ್ದು ಬುಳ್ಳಾ, ನಾನಾಗೌಡ ಬಿರಾದಾರ, ಶರಣಗೌಡ ಗೋಟಖಂಡ್ಕಿ ಸೇರಿದಂತೆ ಇತರರು ಇದ್ದರು.