ಸಫಾಯಿ ಕರ್ಮಚಾರಿ ಮಕ್ಕಳಿಗೆ ಸ್ಮಾರ್ಟ್ ಫೋನ್ ವಿತರಣೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 09: ರಾಜ್ಯದ ಸಫಾಯಿ ಕರ್ಮಚಾರಿ ಮಕ್ಕಳಿಗೆ 15ದಿನಗಳಲ್ಲಿ ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಹೆಚ್.ಹನುಮಂತಪ್ಪ ಹೇಳಿದರು.
ಪಟ್ಟಣದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಗಮ ನಿಯಮದ ಪ್ರಕಾರ ಸಫಾಯಿ ಕರ್ಮಚಾರಿಗಳೆಂದರೆ ಪುರಸಭೆ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲಿಸುತ್ತಿರುವ ನೌಕರರಾಗಿದ್ದಾರೆ, ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಷ್ಟೇ ಸೇರಿದ್ದು ಸರಕಾರಿ, ಖಾಸಗಿ ಆಸ್ಪತ್ರೆ, ರೆಸ್ಟೊರೆಂಟ್, ಲಾಡ್ಜ್, ಬಸ್ನಿಲ್ದಾಣ, ಶಾಲಾ ಕಾಲೇಜು, ಕಚೇರಿ, ಮಲ್ಟಿಸ್ಟೋರ್ ಬಿಲ್ಡಿಂಗ್ಗಳಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳನ್ನು ನಿಗಮ ಮಂಡಳಿ ವ್ಯಾಪ್ತಿಯಲ್ಲಿ ಬರುವಂತೆ ಮಾಡುವ ಕಾರ್ಯ ನಡೆಯಬೇಕಿದ್ದು ಇದಕ್ಕೆ ಮರುಸಮೀಕ್ಷೆ ಮಾಡುವಂತೆ ರಾಜ್ಯ ಮಟ್ಟದ ಅಧಿಕಾರಿಗಳ ಭಾಗಿತ್ವದಲ್ಲಿ ಸಭೆಗಳಾಗಿವೆ. ಸುಮಾರು 3ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಅಧಿನದಲ್ಲಿ ಮರು ಸಮೀಕ್ಷೆ ಮಾಡುವಂತೆ ಜವಾಬ್ದಾರಿ ನೀಡಲಾಗಿದೆ ಇದಕ್ಕೆ ಪ್ರಥಮವಾಗಿ ಬಳ್ಳಾರಿ, ವಿಜಯನಗರ ಮತ್ತು ಮೈಸೂರು ಜಿಲ್ಲೆಗಳನ್ನುಆಯ್ಕೆ ಮಾಡಿಕೊಳ್ಳಲಾಗಿದೆ ಸಮೀಕ್ಷೆಯು ಪ್ರಾರಂಭವಾಗಿದೆ, ನೂರಕ್ಕೆ ನೂರರಷ್ಟು ಸಫಲತೆ ಕಾಣುತ್ತದೆ ಎಂದರು.ಲೇಬರ್, ಬೆಗ್ಗರ್, ಎಜುಕೇಶನ್ ಸೆಸ್ ಇದೆ ಇಂದು ಯಾರು ಮಾಡದ ಕೆಲಸವನ್ನು ಮಾಡುತ್ತಿರುವ ಈ ಸಫಾಯಿ ಕರ್ಮಚಾರಿ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ತೆರಿಗೆಯಿಂದ ಸೆಸ್ ನೀಡುವಂತೆ ಪ್ರಸ್ತಾವನೆ ನಿಡಲಾಗಿದೆ, ಈ ವಿಷಯವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಸೇರಿದಂತೆ ಮುಖ್ಯಮಂತ್ರಿಗಳಲ್ಲಿ ಒಂದು ಸುತ್ತಿನ ಮಾತುಕತೆಯಾಗಿದೆ, ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಕಾಯುತ್ತಿದ್ದೆವೆ.ಸೆಸ್ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳ ಏಳ್ಗೆಗಾಗಿ ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಎಲ್ಲಾ ಜಿಲ್ಲೆಗಳ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ 500ಕೋಟಿ ಅನುದಾನವನ್ನು ಕೇಳಿದ್ದು ,ಸದ್ಯದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದ್ದು ಅನುದಾನ ಕಡಿಮೆ ನೀಡಿದ್ದು ಮೂಂದಿನ ದಿನಗಳಲ್ಲಿ ಇದೇ ಸಮುದಾಯದ ಕೇಂದ್ರ ಮಂತ್ರಿಗಳ ಮುಖೇನ ಅನುದಾನದ ಭರವಸೆಯನ್ನು ನೀಡಿದರು.ಮಹಾನಗರ ಪಾಲಿಕೆಯ ಸಾಲಿಗೆ ಬರುವ 10 ಪಾಲಿಕೆಗಳಲ್ಲಿನ ಮಹಿಳೆಯರಿಗೆ 1ಲಕ್ಷದ ವೆಚ್ಚದ 400 ಬೈಕ್ಗಳನ್ನು ಉಚಿತವಾಗಿ ನೀಡಲಾಗುವುದೆಂದರು.ಸಫಾಯಿ ಕರ್ಮಚಾರಿ ಸಮುದಾಯಕ್ಕೆ ಪ್ರತ್ಯೇಕ ಕಾಲೋನಿ ನಿರ್ಮಿಸಿ ಸ್ವಂತ ಮನೆ ನಿರ್ಮಾಣ ಮಾಡುವ ಕೆಲಸ ಶೀಘ್ರದಲ್ಲಿ ಆಗಲಿದೆ ಎಂದರು.
ಸಫಾಯಿ ಸಮುದಾಯದವರು ಒಂದೆಡೆ ಇದ್ದರೆ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಬಳ್ಳಾರಿಗೆ 2ಕೋಟಿ, ಹೂವಿನ ಹಡಗಲಿಗೆ 2.5ಕೋಟಿ, ಹಗರಿಬೊಮ್ಮನಹಳ್ಳಿಗೆ 1ಕೋಟಿ, ಕೂಡ್ಲಗಿಗೆ 50ಲಕ್ಷ ಅನುದಾನದಲ್ಲಿ ಚರಂಡಿ ಮತ್ತು ರಸ್ತೆ ಹೈಮಾಸ್ ಅಳವಡಿಕೆಗೆ ಆದೇಶ ಹೊರಡಿಸಲಾಗಿದೆ ಮುಂದಿನ ವಾರದಲ್ಲೆ ಈ ಎಲ್ಲಾ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಲಿದೆ, ಐರಾವತ ಯೋಜನಯಡಿಯಲ್ಲಿ ಫಲಾನುಭವಿಗಳಿಗೆ ಕಾರ್ ಸೌಲಭ್ಯ ನಿಡಲಾಗಿದೆ ಎಂದು ತಿಳಿಸಿದರು.
ಶೇಕಡ 25 ರಷ್ಟು ಕಾಯಂ ನೌಕರರು : ಸಫಾಯಿ ಕರ್ಮಚಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಕೇವಲ 25ಅ ಕಾಯಂ ನೌಕರರಾಗಿದ್ದು ಉಳಿದ75ಅರಷ್ಟು ಕಾರ್ಮಿಕರು ಗುತ್ತಿಗೆ, ನೇರ ಪಾವತಿ ಪದ್ದತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇವರೆನ್ನೆಲ್ಲಾ ಕಾಯಂ ನೌಕರರನ್ನಾಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ,ಸೆಸ್, ಕಾಯಂ ನೌಕರಿ,ಮರು ಸಮೀಕ್ಷೆ ಈ ಮೂರು ಕಾರ್ಯಗಳನ್ನು ನನ್ನ ಕಾರ್ಯಾವಧಿಯೊಳಗೆ ಮಾಡುವುದು ಖಚಿತ ಎಂಬ ಭರವಸೆಯನ್ನು ನೀಡಿದರು.ಪ್ರತ್ಯೇಕ ಕಾಲೂನಿ ಮಾಡುವ ಚಿಂತನೆಯನ್ನು ವ್ಯೆಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯ್ಕ್, ಆರಾಧನ ಸಮಿತಿಯ ಸದಸ್ಯ ಚಿಮ್ಮನಹಳ್ಳಿ ಸಿದ್ದಪ್ಪ, ಕಿನ್ನಾಳ ಸುಭಾಸ್, ಕಿತ್ನೂರು ದುರುಗಪ್ಪ, ಹೇಮಣ್ಣ, ಅಂಕಸಮುದ್ರ ಮಲ್ಲಿಕಾರ್ಜುನ, ಹೆಗ್ಡಾಳ ರವಿಕುಮಾರ ಸೇರಿದಂತೆ ಇನ್ನಿತರರು ಇದ್ದರು.