ನಿಧಾನಗತಿಯ ಓವರ್: 2ನೇ ಬಾರಿ ರಾಹುಲ್ಗೆ ದಂಡ: ಎಷ್ಟು ಗೊತ್ತಾ?
ಮುಂಬೈ: ಏಪ್ರಿಲ್ 25: ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ನ ಭಾನುವಾರ ಮುಂಬೈ ಇಂಡಿಯನ್ಸ್ ಅನ್ನು 36 ರನ್ಗಳಿಂದ ಸೋಲಿಸುವ ಮೂಲಕ ಐದನೇ ಬಾರಿಗೆ ಜಯ ಸಾಧಿಸಿತು. ಆದರೆ, ಈ ಗೆಲುವಿನ ಹೊರತಾಗಿಯೂ ಲಕ್ನೋ ತಂಡ ಭಾರಿ ಹಿನ್ನಡೆ ಅನುಭವಿಸಿದ್ದು, ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತ (ಸ್ಲೋ ಓವರ್ ರೇಟ್) ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ನಾಯಕ ಕೆಎಲ್ ರಾಹುಲ್ ಗೆ ದಂಡ ವಿಧಿಸಲಾಗಿದೆ.
ಸ್ಲೋ ಓವರ್ ರೇಟ್ಗೆ ಸಂಬಂಧಿಸಿದಂತೆ ಈ ಸೀಜನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ನ ಎರಡನೇ ತಪ್ಪು ಇದಾಗಿದೆ. ಇದಕ್ಕಾಗಿ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಆಡುವ ಇಲೆವೆನ್ನಲ್ಲಿರುವ ಉಳಿದ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.25ರಷ್ಟು ಯಾವುದು ಕಡಿಮೆಯೋ ಅದನ್ನು ದಂಡ ವಿಧಿಸಲಾಗಿದೆ. ಈ ಋತುವಿನಲ್ಲಿ ಎರಡನೇ ಬಾರಿಗೆ ದಂಡ ವಿಧಿಸಿದ ರಾಹುಲ್ ಇದೀಗ ನಿಷೇಧದ ಭೀತಿಯಲ್ಲಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ 103 ರನ್ಗಳ ಅಜೇಯ ಶತಕ ಸಿಡಿಸಿದ್ದರು. ಮೂರನೇ ಬಾರಿಯೂ ಇದೇ ತಪ್ಪು ಮಾಡಿದರೆ ನಾಯಕ ರಾಹುಲ್ ಅಥವಾ ತಂಡದ ಮೇಲೆ ದೊಡ್ಡ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ನಾಯಕನ ಮೇಲೆ ಒಂದು ಪಂದ್ಯದ ನಿಷೇಧವೂ ಆಗಬಹುದು.
ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ನ 26ನೇ ಪಂದ್ಯದ ನಂತರವೇ ಲಕ್ನೋ ತಂಡಕ್ಕೆ ಈ ಹಿಂದೆ ದಂಡ ವಿಧಿಸಲಾಗಿತ್ತು. ಆ ಪಂದ್ಯದಲ್ಲೂ ರಾಹುಲ್ ಸ್ಲೋ ಓವರ್ ರೇಟ್ ಗೆ 12 ಲಕ್ಷ ರೂ. ಐಪಿಎಲ್ 2022ರ ಸೀಸನ್ನಲ್ಲಿ ಲಕ್ನೋ ಮೊದಲ ಬಾರಿಗೆ ಈ ತಪ್ಪು ಮಾಡಿ ದಂಡಕ್ಕೆ ತುತ್ತಾಗಿತ್ತು. ಅದಕ್ಕಾಗಿಯೇ ನಾಯಕನಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಆದರೆ ಇದೀಗ 37 ನೇ ಪಂದ್ಯದಲ್ಲಿ ಎರಡನೇ ಬಾರಿ IPL ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಹುಲ್ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.