ಬಳ್ಳಾರಿ

ಸಿರುಗುಪ್ಪ: ಮಹಿಳೆ ಕಾಣೆ ಪ್ರಕರಣ ದಾಖಲು

ಸಿರುಗುಪ್ಪ: ಮಹಿಳೆ ಕಾಣೆ ಪ್ರಕರಣ ದಾಖಲು



ಬಳ್ಳಾರಿ 16: ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾರಾವಿ ಗ್ರಾಮದ 24 ವರ್ಷದ ಗಂಗಮ್ಮ ಎನ್ನುವ ಮಹಿಳೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಠಾಣೆಯ ಎಸ್‌ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಿಳೆಯ ಚಹರೆ ಗುರುತು: ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಕಟ್ಟು, ಕೋಲುಮುಖ, 5.1 ಅಡಿ ಎತ್ತರ, ಎಡಗೈ ಮೇಲೆ ಬಸವ ಎಂದು ಅಚ್ಚೆ ಹಾಕಿಸಿರುತ್ತದೆ. ಕನ್ನಡ ಭಾಷೆಯಲ್ಲಿ ಮಾತನಾಡುತ್ತಾಳೆ ಹಾಗೂ ಪಿಂಕ್ ಕಲರ್‌ನ ಚೂಡಿದಾರ್ ಧರಿಸಿರುತ್ತಾಳೆ. 

ಕಾಣೆಯಾದ ಮಹಿಳೆಯ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್‌.ಐ ದೂ.08396-220333, ಸಿರುಗುಪ್ಪ ವೃತ್ತದ ಸಿಪಿಐ ದೂ.08396-220003, ಬಳ್ಳಾರಿ ಗ್ರಾಮೀಣ ಡಿಎಸ್‌ಪಿ ದೂ.08392-276000 ಹಾಗೂ ಬಳ್ಳಾರಿ ಎಸ್‌ಪಿ ಅವರ ದೂ.08932-258400 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ