ಬಳ್ಳಾರಿ

ಸಿರುಗುಪ್ಪ: ಭಾರತ್ ಬಂದ್ ಯಶಸ್ವಿ

ಸಿರುಗುಪ್ಪ: ಭಾರತ್ ಬಂದ್ ಯಶಸ್ವಿ

ಲೋಕದರ್ಶನ ವರದಿ 

ಸಿರುಗುಪ್ಪ 27: ಕೇಂದ್ರ ಸರ್ಕಾರ ಜಾರಿಗೆ   ತಂದಿರುವ ರೈತರಿಗೆ ಮಾರಕವಾಗಿರುವ  ಕೃಷಿ ಕಾಯ್ದೆ ತಿದ್ದುಪಡಿ ಜಾರಿ ಕಾರ್ಮಿಕ ವಿರೋಧಿ ಕಾಯಿದೆಗಳ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮಾಜಿ ಶಾಸಕ ಬಿ. ಎಂ. ನಾಗರಾಜ್ ಅವರು ನಗರದ ವಿವಿಧ ರಸ್ತೆಗಳಿಂದ ರೈತ ಸಂಘ ವಿವಿಧ ಸಂಘಗಳು ಮತ್ತು ಸಂಸ್ಥೆಗಳ ಪದಾಧಿಕಾರಿಗಳು ಭಾರತ್ ಬಂದ್ ಯಶಸ್ವಿಗೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಬೆಂಬಲಿಸಿದರು.  


ಸಂಯುಕ್ತಾ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಗೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರದರ್ಶನ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾರತ್ ಬಂದ್‌ಗೆ ಸಾರ್ವಜನಿಕರು ವ್ಯಾಪಾರಸ್ಥರು ಬೆಂಬಲ ನೀಡಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರೊ ನಂಜುಂಡಸ್ವಾಮಿ ಬಣ ರಾಜ್ಯ ಕಾರ್ಯಾಧ್ಯಕ್ಷ ಆರ್‌. ಮಾಧವರೆಡ್ಡಿ ಬೃಹತ್ ರೈತರು ಭಾಗವಹಿಸಿ ಭಾರತ್ ಬಂದ್‌ಗೆ ಘೋಷಣೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 


ಸುದ್ದಿ ಓದಿ