ಬಳ್ಳಾರಿ

ನೂತನ ಕಾರ್ಯದರ್ಶಿಯಾಗಿ ಸಿರಿಗೇರಿ ಪನ್ನರಾಜ್.ಎಸ್ ಆಯ್ಕೆ

ನೂತನ ಕಾರ್ಯದರ್ಶಿಯಾಗಿ ಸಿರಿಗೇರಿ ಪನ್ನರಾಜ್.ಎಸ್ ಆಯ್ಕೆ

ಬಳ್ಳಾರಿ, ಫೆ.24: ಅಖಿಲ ಭಾರತೀಯ ಚಾರ್ಟೇಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಕಾರ್ಯದರ್ಶಿಯಾಗಿ ನಗರದ ಹಿರಿಯ ಲೆಕ್ಕ ಪರಿಶೋಧಕ  ಸಿರಿಗೇರಿ ಪನ್ನರಾಜ್ .ಎಸ್ ಅವರು ಆಯ್ಕೆಯಾಗಿದ್ದಾರೆ. 

ಸಂಸ್ಥೆಯ ಪ್ರಾಂತೀಯ ಕಛೇರಿ ಚೆನ್ನೈನಲ್ಲಿ ಇಂದು ನಡೆದ ಸಂಸ್ಥೆಯ ಸಭೆಯಲ್ಲಿ 2021-22ನೇ ಸಾಲಿಗೆ ಕಾರ್ಯದರ್ಶಿಯನ್ನಾಗಿ ಅವರನ್ನು ಅಧ್ಯಕ್ಷರನ್ನಾಗಿ ಕೊಯಮತ್ತೂರಿನ ಕೆ.ಜಲಪತಿ, ಉಪಾಧ್ಯಕ್ಷರಾಗಿ ಚಿನ್ನ ಮಸ್ತಾನ್, ಖಜಾಂಚಿಯಾಗಿ ಚೆನ್ನೈನ ರೇವತಿ ರಘುನಾಥ್ ಆಯ್ಕೆಯಾಗಿದ್ದಾರೆ.  ಈ ವರೆಗೆ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಪನ್ನರಾಜ್, ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು ಬಳ್ಳಾರಿಯಂತಹ ಸಣ್ಣ ಶಾಖೆಯಿಂದ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲಿಗರಾಗಿದ್ದಾರೆಂದರೆ ತಪ್ಪಾಗಲಾರದು.  ಬಳ್ಳಾರಿ ಶಾಖೆಯ ಅಧ್ಯಕ್ಷ ಹೆಚ್.ಎಸ್.ಪ್ರಸನ್ನಕುಮಾರ್ ಪಾಟೀಲ್, ಉಪಾಧ್ಯಕ್ಷರಾದ ವಿನೋದ್ ಕುಮಾರ್, ಕಾರ್ಯದರ್ಶಿಯಾದ ಕೆ. ಹೊನ್ನೂರ್‍ಸ್ವಾಮಿ, ಖಜಾಂಚಿಯಾದ ವೆಂಕಟ್‍ನಾರಾಯಣ ಸಿ, ಮತ್ತು ವಿಧ್ಯಾರ್ಥಿ ವಿಭಾಗದ ಅಧ್ಯಕ್ಷರಾದ ಕಿರಣ್ ಕುಮಾರ್ ಜೈನ್ ಹಾಗೂ ಶಾಖೆಯ ಎಲ್ಲಾ ಸದಸ್ಯರುಗಳು ಶುಭಕೋರಿದ್ದಾರೆ.

ಸುದ್ದಿ ಓದಿ