ಮುಂಡರಗಿ

ಸರ್ ಸಿದ್ದಪ್ಪ ಕಂಬಳಿ ಅವರ ಪುತ್ಥಳಿ ಸಪ್ಟಂಬರ 21 ರಂದು ಅನಾವರಣ

ಸರ್ ಸಿದ್ದಪ್ಪ ಕಂಬಳಿ ಅವರ ಪುತ್ಥಳಿ ಸಪ್ಟಂಬರ 21 ರಂದು ಅನಾವರಣ

ಮುಂಡರಗಿ,02 : ಮುಂಡರಗಿಯ ಕೋಟೆ ಬಾಗಿಲ ಹತ್ತಿರವಿರುವ ವರ್ತುಲದಲ್ಲಿ ಮರು ಸ್ಥಾಪಿಸಲಾದ ಸರ್ ಸಿದ್ದಪ್ಪ ಕಂಬಳಿ ಅವರ ಕಂಚಿನ ಪುತ್ಥಳಿಯನ್ನು ಸೆ.21ರಂದು   ಅನಾವರಣ ಗೊಳಿಸಲಾಗುವುದು ಎಂದು  ಊರಿನ ಪ್ರಮುಖರ ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಅನ್ನದಾನೀಶ್ವರ ಮಹಾ ಶಿವಯೋಗಿಗಳು ಸಾನಿಧ್ಯ ವಹಿಸುವರು. ಹಾಗೂ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ರೋಣ ಶಾಸಕ ಜಿ.ಎಸ್‌.ಪಾಟೀಲ, ಮೂರ್ತಿ ದಾಸೋಹಿ ಮಾಜಿ ಶಾಸಕ ಕಳಕಪ್ಪ ಬಂಡಿ, ಪುರಸಭೆ ಮಾಜಿ ಅಧ್ಯಕ್ಷ  ವಾಯ್‌.ಎನ್‌.ಗೌಡರ ಹಾಗೂ ಇತರ ಪ್ರಮುಖರನ್ನು  ಆಹ್ವಾನಿಸಲು ನಿರ್ಧರಿಸಲಾಯಿತು. 

ಸಭೆಯ ನಂತರ  ಪಟ್ಟಣದಲ್ಲಿರುವ ಸರ್ ಸಿದ್ದಪ್ಪ ಕಂಬಳಿ ವೃತ್ತ ಪರೀಶೀಲಿಸಲಾಯಿತು. ಸಭೆಯಲ್ಲಿ ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಗೌರವಾಧ್ಯಕ್ಷ ಶಂಕರ ಕುಂಬಿ, ಕಾರ್ಯದರ್ಶಿ ಶಿವಶರಣ ಕಲಬಶೇಟ್ಟರ, ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಪುರಸಭೆಯ ವಿರೋಧ ಪಕ್ಷದ ನಾಯಕ ನಾಗರಾಜ ಹೊಂಬಳಗಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಕೆ.ಎಂ.ಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಸಾಹಿತಿ ಆರ್‌.ಎಲ್‌.ಪೊಲೀಸ್ ಪಾಟೀಲ, ಎಂ.ಜಿ.ಗಚ್ಚಣ್ಣವರ, ಡಾ.ನಿಂಗು ಸೋಲಗಿ, ಮಂಜುನಾಥ ಇಟಗಿ, ಎ.ವಾಯ್‌.ನವಲಗುಂದ, ನಾಗರಾಜ ಕೊರ್ಲಹಳ್ಳಿ, ಮಂಜುನಾಥ ಮುಧೋಳ ಇತರರು ಇದ್ದರು. 


ಸುದ್ದಿ ಓದಿ