ಹುನಗುಂದ

ದುರಸ್ಥಿಗಾಗಿ ಒಂದೇ ರಸ್ತೆ ಸಂಚಾರ ತರುತ್ತಿದೆ ಜೀವಕ್ಕೆ ಸಂಚಕಾರ

ದುರಸ್ಥಿಗಾಗಿ ಒಂದೇ ರಸ್ತೆ ಸಂಚಾರ ತರುತ್ತಿದೆ ಜೀವಕ್ಕೆ ಸಂಚಕಾರ

ನಾಮಕಾವಸ್ತೆ ದುರಸ್ಥಿ ಕಾರ್ಯ| ಹೆಚ್ಚುತ್ತಿರುವ ರಸ್ತೆ ಅಪಘಾತಗಳು| ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಸವಾರರ ಸಂಚಾರ

ಹುನಗುಂದ; ಸೋಲಾಪೂರ-ಹೊಸಪೇಟಿ ರಾಷ್ಟ್ರೀಯ ಹೆದ್ದಾರಿ 50ರ ಸಂಗಮ ಕ್ರಾಸ್ ಮತ್ತು ಬೆಳಗಲ್ಲ ಕ್ರಾಸ್ ಮಧ್ಯ ಸಂಪೂರ್ಣ ಶಿಥಿಲಗೊಂಡ ರಸ್ತೆಯ ದುರಸ್ಥಿ ಕಾರ್ಯ ನಡೆದಿದೆ. ಒಂದೆ ರಸ್ತೆ ಮೇಲೆ ವಾಹನಗಳು ಚಲಿಸುವದರಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. 

ಹೌದು ಕಳೆದ 40 ವರ್ಷಗಳ ಹಿಂದೆ ನಿರ್ಮಾಣವಾದ ಈ ಸೇತುವೆ ಸಧ್ಯ ಸಂಪೂರ್ಣ ಶಿಥಿಲಗೊಂಡ ಆಗಾಗ ನಾಮಕಾವಸ್ತೆ ದುರಸ್ಥಿ ಕಾರ್ಯ ನಡೆಯುತ್ತಿದೆ. ಇದರಿಂದ ನಿತ್ಯ ಈ ಮಾರ್ಗವಾಗಿ ಸಾವಿರಾರು ಬಾರಿ ಪ್ರಮಾಣದ ವಾಹನಗಳ ಓಡಾಡುವುದರಿಂದ ಹೆದ್ದಾರಿ ಪ್ರಾಧಿಕಾರದವರು ದುರಸ್ಥಿಗೆ ಬರೀ ತೆಪೆ ಬಳಿಯುವ ನಡೆಯುತ್ರಿದೆ. ಅಪಾಯದ ಮಟ್ಟದಲ್ಲಿ ಬ್ರೀಜ್‍ನ ಮಧ್ಯ ತಗ್ಗು ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರವನ್ನುಂಟು ಮಾಡುತ್ತಿದ್ದು ಈ ರೀತಿ ಹಲವು ಬಾರಿ ದುರಸ್ಥಿಗೊಳಿಸಿದರೂ ಸಹ ಯಾವದೇ ಪ್ರಯೋಜನೆ ಆಗಿಲ್ಲ. ದುರಸ್ಥಿ ಕಾರ್ಯ ಮಾಡಿದಾಗಲೊಮ್ಮೆ ಒಂದು ಬದಿಯ ರಸ್ತೆ ಬಂದ್ ಮಾಡುತ್ತಿರು ವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತವೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ಲಘು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.                     

ಕ್ರಾಸ್ ದಾಟಲು ಏರ್ರಾಬಿರ್ರಿ ವಾಹನಗಳ ಓಡಾಟ; ಚತುಷ್ಪತ ರಸ್ತೆ ನಿರ್ಮಾಣವಾದ ಬಳಿಕ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಲಿಸುವ ಸಹಸ್ರಾರು ವಾಹನಗಳು ರಸ್ತೆ ಸಂಚಾರದ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳು ಏರ್ರಾಬಿರ್ರಿಯಾಗಿ ಓಡಾಡುತ್ತಿವೆ. ಇದರಿಂದ ಸೋಲಾಪೂರದಿಂದ ಹೊಸಪೇಟಿವರಗೆ ನೂರಾರು ಗ್ರಾಮೀಣ ರಸ್ತೆಗಳ ಕ್ರಾಸ್‍ಗಳು ಕೂಡುತ್ತಿವೆ. ಅವುಗಳನ್ನು ಲೆಕ್ಕಿಸದೇ ಬಾರಿ ಪ್ರಮಾಣದ ವಾಹನಗಳ ವೇಗದ ಓಡಾಟದಿಂದ ನಿತ್ಯ ಈ ಹೆದ್ದಾರಿಯಲ್ಲಿ ಒಂದಿಲ್ಲದ ಒಂದು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ ಅದರಲ್ಲೂ ಸಂಗಮ ಕ್ರಾಸ್ ಮತ್ತು ಬೆಳಗಲ್ಲ ಕ್ರಾಸ್ ಈ ಎರಡು ಪ್ರದೇಶದಲ್ಲಿ ಸಾಕಷ್ಟು ಅಪಘಾತ ಸಂಭವಿಸಿ ಮೃತ್ಯುಕೋಪವನ್ನೇ ಸೃಷ್ಠಿಸುವಂತಿದೆ. ಇದರಿಂದ ವಾಹನ ಸವಾರು ಜೀವ ಕೈಯಲ್ಲಿ ಹಿಡಿದುಕೊಂಡು ಕ್ರಾಸ್ ದಾಟುವ ಸ್ಥಿತಿ ನಿರ್ಮಾಣವಾಗಿದೆ. 

ಚತುಷ್ಪಥ ರಸ್ತೆ ನಿರ್ಮಾಣದ ಬಳಿಕವೂ ಅಪಘಾತ ನಿಂತಿಲ್ಲ; ಕಳೆದ 2013-14ರಲ್ಲಿ ದ್ವಿಪಥ ರಸ್ತೆಯನ್ನು ನವೀಕರಿಸಿ ಹೆದ್ದಾರಿ ಪ್ರಾಧಿಕಾರ ಚತುಷ್ಪಥ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಯಿತು. ಈ ಮೊದಲು ದ್ವಿಪಥ ರಸ್ತೆ ಇದ್ದಾಗ ಇವರಡು ಕ್ರಾಸ್‍ಗಳ ಬಳಿ ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುವುದರಿಂದ ಇದನ್ನು ಯಮನ ರಹದಾರಿ ಎಂದೇ ಕರೆಯುತ್ತಿದ್ದರು. ಆದರೆ ಅದಕ್ಕೆ ಬ್ರೇಕ್ ಹಾಕಿ ಅಪಘಾತವನ್ನು ಕಡಿಮೆ ಮಾಡಿ ಸುರಕ್ಷಿತ ಚತುಷ್ಪಥ ರಸ್ತೆ ನಿರ್ಮಿಸಿದರೂ ಸಹ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿವೆ. ಆದರೆ 3ತಿಂಗಳಿಗೆ ತಪ್ಪಿದರೆ 6ತಿಂಗಳಿಗೆ ಈ ಹಳೆಯ ಬ್ರೀಜ್ ರಿಪೇರಿ ತಪ್ಪಿದ್ದಲ್ಲ, ಅಪಘಾತಗಳಿಗೆ ಕೊನೆ ಇಲ್ಲವೆ ಎಂಬಂತಾಗಿದೆ. ಕ್ರಾಸ್‍ಗಳಲ್ಲಿ ವಿದ್ಯುತ್ ದೀಪಗಳಿಲ್ಲ; ಹೆದ್ದಾರಿಯಲ್ಲಿ ಬರುವ ಕ್ರಾಸ್‍ಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದೇ ಕತ್ತಲಿನಲ್ಲಿಯೇ ಕ್ರಾಸ್ ದಾಟಲು ಹೋಗಿ ಅದೆಷ್ಟೋ ಸಣ್ಣ ಸಣ್ಣ ವಾಹನ ಸವಾರ ಜೀವವನ್ನು ಬಲಿ ತಗೆದುಕೊಂಡ ಉದಾಹರಣೆ ಈ ಹೆದ್ದಾರಿಯಲ್ಲಿ ಸಾಕಷ್ಟಿವೆ.         

ಒನ್ ವೇ ರಸ್ತೆಯಲ್ಲಿ ಜೀವ ಭಯದಲ್ಲಿ ಸಂಚಾರ ಮಾಡುವ ಸವಾರರು; ಸೇತುವೆ ದುರಸ್ಥಿಗಾಗಿ ಚತುಷ್ಪಥ ರಸ್ತೆ ಒಂದು ಕಡೆಯ ರಸ್ತೆಯನ್ನು ಬಂದ್ ಮಾಡಿದರಿಂದ ಒನ್ ವೇ ಆಗಿ ಎಲ್ಲಿ ಅಪಘಾತವಾಗುತೋ ಎನ್ನುವ ಜೀವ ಭಯದಲ್ಲಿ ದ್ವಿಚಕ್ರ ವಾಹನ ಮತ್ತು ಲಘು ವಾಹನ ಸವಾರರು ಸಂಚಾರ ಮಾಡುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸಂಗಮ ಕ್ರಾಸ್ ಮತ್ತು ಬೆಳಗಲ್ಲ ಕ್ರಾಸ್‍ಗಳಲ್ಲಿ ಒಂದಿಲ್ಲದ ಒಂದು ಅಪಘಾತಗಳು ಸಂಭವಿಸುತ್ತಿದ್ದು.ಸಧ್ಯ ಸೇತುವೆ ದುರಸ್ಥಿಯಿಂದ ಒಂದು ಕಡೆಯ ರಸ್ತೆ ಬಂದ್ ಆಗಿ ಮತ್ತಷ್ಟು ಅಪಘಾತಕ್ಕೆ ಅಹ್ವಾನ ನೀಡುವಂತಿದ್ದು. ಅಷ್ಟೆಯಲ್ಲಾ ಸಂಜೆಯಾದರೇ ಕತ್ತಲು ಆವರಿಸಿ ಎಲ್ಲಿ ಅಪಘಾತಗಳಾಗುತ್ತವೆ ಎನ್ನುವ ಆತಂಕ ಮನೆ ಮಾಡಿದ್ದು ಈ ಕ್ರಾಸ್‍ಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಿಸಬೇಕು. ಬಸವರಾಜ ದೇಶಟ್ಟಿ ಹೂವನೂರ ಗ್ರಾಮಸ್ಥ.                                                                         

ಲಾರಿ ಪಲ್ಟಿ ಲಕ್ಷಾಂತರ ಮೌಲ್ಯದ ಏಷಿಯನ್ ಪೇಂಟ್ ಹಾನಿ; ಬೆಳಗಲ್ಲ ಕ್ರಾಸ್ ಬಳಿ ನಸುಕಿನಜಾವದಲ್ಲಿ ಏಷಿಯನ್ ಪೇಂಟ್ ತುಂಬಿದ ಲಾರಿಯೊಂದು ಒನ್ ವೇ ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಬ್ಯಾರಿಕೇಡ್ ಕಾಣದೇ ಆಯಾ ತಪ್ಪಿ ಪಲ್ಟಿ ಹೊಡೆದಿದ್ದು ಅಂದಾಜು 10/- ಲಕ್ಷ ರೂ ಮೌಲ್ಯದ ಪೇಂಟ್ ಹಾನಿಯಾಗಿರಬಹುದು. ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ಕೆಲವೊತ್ತು ಸಂಚಾರ ಸ್ಥಗಿತವಾಗಿತ್ತು.

ಸುದ್ದಿ ಓದಿ