ತಾಳಿಕೋಟಿ

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಸೋಮನಗೌಡ ಪಾಟೀಲ

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ:  ಶಾಸಕ ಸೋಮನಗೌಡ ಪಾಟೀಲ

ತಾಳಿಕೋಟಿ: ನನ್ನ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು 120 ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸಲು 3 ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನವನ್ನು ತಂದು ಕೆಲಸ ಮಾಡಿದ್ದೇನೆ. ಇದಕ್ಕೆ ನಿಮ್ಮೇಲ್ಲರ ಸಹಕಾರವೇ ಕಾರಣ ಎಂದು ದೇ. ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು. 

ಇತೀಚಿಗೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ರೂ. 1ಕೋಟಿ ಮೊತ್ತದ ಲಕ್ಕುಂಡಿ-ಗುಂಡಲಗೇರಿ ರಸ್ತೆ, 50 ಲಕ್ಷ ಮೊತ್ತದ ಸಿ.ಸಿ. ರಸ್ತೆ ಹಾಗೂ ರೂ. 50 ಲಕ್ಷ ಮೊತ್ತದ ಮನೆ-ಮನೆಗೆ ನಳ ಜೋಡಣೆ(ಜೆಜೆಎಮ್) ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಅಭಿವೈದ್ಧಿಯ ವಿಷಯದಲ್ಲಿ ನಾನೇಂದು ರಾಜಕಾರಣವನ್ನು ಮಾಡಿಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಯ ಶಶ್ವತ ಪರಿಹಾರಕ್ಕಾಗಿಯೇ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲಾಗಿದೆ. ರೂ. 870ಕೋಟಿ ವೆಚ್ಚದ ಬೂದಿಹಾಳ-ಪೀರಾಪೂರ ನೀರಾವರಿ ಯೋಜನೆ ಮುಕ್ತಾಯದ ಹಂತದಲ್ಲಿದ್ದು ಇದು ಈ ಬಾಗದ ರೈತರ ಬಾಳು ಹಸನಾಗಿಸಲಿದೆ ಎಂದರು. 

ಈ ಸಮಯದಲ್ಲಿ ಮುಖಂಡ ಸಂಗನಗೌಡ ಹೆಗರಡ್ಡಿ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಪ್ರಶಾಂತ ಹಾವರಗಿ, ಜಿ.ಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಬಸನಗೌಡ ಪಾಟೀಲ(ಲಕ್ಕುಂಡಿ), ಗುತ್ತಿಗೆದಾರ ಪ್ರಭುಗೌಡ ಪಾಟೀಲ(ಲಕ್ಕುಂಡಿ), ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಸೋಮನಗೌಡ ಹಾದಿಮನಿ, ರಾಜುಗೌಡ ನಾವದಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ಜೆ. ಪಿ. ಶೆಟ್ಟಿ, ಆನಂದಸ್ವಾಮಿ ಇದ್ದರು. 


ಸುದ್ದಿ ಓದಿ