ತಾಳಿಕೋಟಿ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಸೋಮನಗೌಡ

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಸೋಮನಗೌಡ

ತಾಳಿಕೋಟಿ : ದೇ.ಹಿಪ್ಪರಗಿ ಮತಕ್ಷೇತ್ರದ 120 ಗ್ರಾಮಗಳು ಹಾಗೂ 27 ತಾಂಡಾಗಳ ಅಭಿವೃದ್ಧಿಗಾಗಿ ಅನುದಾನವನ್ನು ತಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೆಳಿದರು. 

ಮತಕ್ಷೇತ್ರದ ವ್ಯಾಪ್ತಿಗೆ ಬರುವ ಗಡಿ ಸೋಮನಾಳ, ಬ.ಸಾಲವಾಡಗಿ, ಮಟಕದೇವನಹಳ್ಳಿ, ಬ.ಸಾಲವಾಡಗಿ ತಾಂಡಾ, ಹೀಗೆ ಸುಮಾರು ರೂ.6 ಕೋಟಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಬ.ಸಾಲವಾಡಗಿ ಜಿ.ಪಂ ವ್ಯಾಪ್ತಿಯ ಸುಮಾರು ಎಲ್ಲಾ ಗ್ರಾಮಗಳಿಗೆ ಈಗಾಗಲೇ ಮುಖ್ಯ ರಸ್ತೆಗಳಾಗಿವೆ ಇನ್ನೂ ಮೂರಾ​‍್ನಲ್ಕು ರಸ್ತೆಗಳಾದರೆ ಈ ಭಾಗದ ಎಲ್ಲಾ ರಸ್ತೆಗಳು ಪೂರ್ಣಗೊಳ್ಳುತ್ತವೆ. ಮಸ್ಕಾನಾಳ, ಲಕ್ಕುಂಡಿ, ಗ್ರಾಮಗಳ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆದಿದ್ದು ಶಿಘ್ರದಲ್ಲಿಯೆ ಅವುಗಳ ಪೂಜೆ ನೆರವೇರಿಸುತ್ತೇನೆ. ಬಿಳೇಭಾವಿ, ಗ್ರಾಮದ ರಸ್ತೆ ಕಾಮಗಾರಿಯ ಟೆಂಡರೆ ಮುಗಿದಿದೆ. ಈ ಭಾಗದ ಅಭಿವೃದ್ಧಿಗಾಗಿ ಮತ್ತೇ 10ಕೋಟಿ ಅನುದಾನ ತಂದಿದ್ದೇನೆ.  

ಪೀರಾಪೂರ-ಬೂದಿಹಾಳ ನೀರಾವರಿ ಯೋಜನೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಸಂಕ್ರಮಣಕ್ಕೆ ರೈತರ ಭೂಮಿಗೆ ನೀರು ಹರಿಯಲಿದೆ. ರೈತರಿಗೆ ನೀರಾವರಿ ಅನುಕೂಲಕ್ಕಾಗಿ ಎರಡು 110/ಕೆ.ವಿ. ವಿದ್ಯುತ ಘಟಕಗಳನ್ನು ದಿಂಡವಾರ ಕಣಕಲದಲ್ಲಿ ಸ್ಥಾಪಿಸಲಾಗುವುದು. ವಿಜಯಪೂರ ಮುಖ್ಯ ಕಾಲುವೆಗಾಗಿ ರೂ.800 ಕೋಟಿ ಮಂಜುರಾತಿ ಸಿಕ್ಕಿದೆ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಕ್ಷೇತ್ರದ 30 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇನೆ.  ನನ್ನ ಈ ಎಲ್ಲಾ ಕಾರ್ಯಗಳಲ್ಲಿ ಗ್ರಾಮಸ್ಥರು ಹಾಗೂ ಪಂಚಾಯತ ಮುಖ್ಯಸ್ಥರು ಸಹಕರಿಸಬೇಕು ಎಂದರು.  

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಅಸ್ಕಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಹೆಗರಡ್ಡಿ, ನಿಂಗನಗೌಡ ಬಿರಾದಾರ(ಗಡಿ ಸೋಮನಾಳ), ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಪ್ರಶಾಂತ ಹಾವರಗಿ, ಶೇಖರಗೌಡ ತಂಗಡಗಿ, ಸಿದ್ದು ಬುಳ್ಳಾ, ರಮೇಶ ಮಸಬಿನಾಳ, ಭೀಮನಗೌಡ ಸಿದರಡ್ಡಿ, ಬ.ಸಾಲವಾಡಗಿ ಗ್ರಾ.ಪಂ. ಅಧ್ಯಕ್ಷ ಮಲ್ಲನಗೌಡ ಗುಂಡಕನಾಳ, ಗುತ್ತಿಗೆದಾರರಾದ ಆರ್ ಬಿ ಅಸ್ಕಿ, ಮುತ್ತುರಾಜ ಜಾಗೀರದಾರ, ಗುರಣ್ಣಗೌಡ ಬಿರಾದಾರ,  ಪಿಡಿಓ ನಿಂಗನಗೌಡ ದೊಡಮನಿ, ಎಇಇ ಆನಂದ ಸ್ವಾಮಿ, ಜೆಇ ಕಲಬುರ್ಗಿ, ಹನಮಂತ ಢವಳಗಿ ಇದ್ದರು. 


ಸುದ್ದಿ ಓದಿ