ತಾಳಿಕೋಟಿ

ಸಮಾಜ ಸೇವಕ ಆನಂದಗೌಡಗೆ ರಜತ ಸಾಧಕರು ಪ್ರಶಸ್ತಿ

ಸಮಾಜ ಸೇವಕ ಆನಂದಗೌಡಗೆ ರಜತ ಸಾಧಕರು ಪ್ರಶಸ್ತಿ

ತಾಳಿಕೋಟಿ : ಸಮಾಜ ಸೇವಕ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಯಶಸ್ವಿ ಉದ್ಯಮಿ ಯುವ ಸಮುದಾಯದ ಭವಿಷ್ಯದ ಆಶಾಕಿರಣವಾಗಿರುವ ಆನಂದಗೌಡ ಭೀಮನಗೌಡ ದೊಡ್ಡಮನಿ ಇವರನ್ನು ಕನ್ನಡ ಪ್ರಭ ಮತ್ತು ಏಷ್ಯಾ ನೆಟ್ ನ್ಯೂಸ್ ಸಂಸ್ಥೆ 2022-23ನೇ ಸಾಲಿನ ರಾಜಕೀಯ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ ರಜತ ಸಾಧಕರು ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ತಾಳಿಕೋಟಿ ತಾಲೂಕಿನ ಬ.ಸಾಲವಾಡಗಿ ಗ್ರಾಮದವರಾಗಿರುವ ಆನಂದಗೌಡ ದೊಡ್ಡಮನಿ ಅವರು ಸರಳ ಸ್ವಭಾವದ ಸಜ್ಜನ ವ್ಯಕ್ತಿ, ಮಿತಭಾಷಿಯಾಗಿರುವ ಅವರು ಮಾತಿಗಿಂತಲೂ ಕೃತಿಗೆ ಮಹತ್ವ ನೀಡಿದವರು. ಸದಾ ಸಮಾಜದಲ್ಲಿರುವ ಬಡವರ ಕುರಿತು ಚಿಂತಿಸುವ ಅವರಿಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಸಾಮಾಜಿಕ ಬದ್ಧತೆ ಹೊಂದಿದ ನಾಯಕ.

ಈ ಉದ್ದೇಶಕ್ಕಾಗಿ ಸೇವಾ ಮನೋಭಾವದಿಂದ ದೇ.ಹಿಪ್ಪರಗಿ ಮತಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕಳೆದ 10 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಘಟನೆ ಸಂಭವಿಸಲಿ ಅಲ್ಲಿಗೆ ಧಾವಿಸಿ ತನ್ನ ಕೈಲಾದಷ್ಟು ಸಹಾಯ ಮಾಡುವ ವ್ಯಕ್ತಿ. ಇಂದು ಆನಂದಗೌಡರು ಕ್ಷೇತ್ರದ ಯುವಕರ ಭವಿಷ್ಯದ ಆಶಾಕಿರಣವಾಗಿದ್ದಾರೆ. ಸಮಾಜಮುಖಿಯಾಗಿರುವ ನೂರಾರು ಕಾರ್ಯಗಳನ್ನು ಮಾಡುತ್ತಿದ್ದಾರೆ.

ಅವರ ಈ ಎಲ್ಲ ಸೇವಾ ಚಟುವಟಿಕೆಗಳನ್ನು ಗುರುತಿಸಿದ ಕನ್ನಡ ಪ್ರಭ ಮತ್ತು ಏಷ್ಯಾ ನೆಟ್ ನ್ಯೂಸ್ ಸಂಸ್ಥೆ ಕನ್ನಡ ಪ್ರಭ ಬೆಳಗಾವಿ ಆವೃತ್ತಿ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆನಂದಗೌಡರಿಗೆ ರಜತ ಸಾಧಕರು ಪ್ರಶಸ್ತಿಯನ್ನು ನ.21.2022 ರಂದು ಬೆಂಗಳೂರಿನ ಪಂಚತಾರಾ ಹೊಟೇಲ್ ಫೋರ ಸೀಸನ್ಸ್ ದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದೆಂದು ಜಾಹೀರಾತು ವಿಭಾಗದ ಎ.ವಿ.ಪಿ. ರಾಘವೇಂದ್ರ ಬಿ.ಸಿ. ತಿಳಿಸಿದ್ದಾರೆ 

ಸುದ್ದಿ ಓದಿ