ಚಿಕ್ಕೋಡಿ

ಶ್ರದ್ಧಾ ಭಕ್ತಿಯಿಂದ ಸಿದ್ಧೇಶ್ವರ ಜಾತ್ರೆ

ಶ್ರದ್ಧಾ ಭಕ್ತಿಯಿಂದ ಸಿದ್ಧೇಶ್ವರ ಜಾತ್ರೆ

ಮಾಂಜರಿ 24: ಸಮೀಪದ ಅಂಕಲಿ ಗ್ರಾಮದಲ್ಲಿನ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಸಾಯಂಕಾಲ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಗುಡಿಗೆ ಸಹಸ್ರಾರು ತೆಂಗಿನಕಾಯಿಗಳನ್ನು ಹಾರಿಸಿ ಹರಕೆ ಪೂರೈಸಿಕೊಂಡರು.ಜಾತ್ರೆಯ ಅಂಗವಾಗಿ ದೇವರಿಗೆ ಅಭಿಷೇಕ, ಮಹಾನೈವೇದ್ಯ, ಸಂಗೀತ ಕಾರ್ಯಕ್ರಮ, ದೇವರ ಕವಲು ಮತ್ತು ನುಡಿಗಳು, ಪಲ್ಲಕ್ಕಿ ಉತ್ಸವ ಮತ್ತು ಟೆಂಗಿನಕಾಯಿ ಹಾರಿಸುವ ಕಾರ್ಯಕ್ರಮ ಜರುಗಿತು. ಜಾತ್ರೆಯಲ್ಲಿ ಭಕ್ತರು ಮೈಗೆ ಭಂಡಾರ ಎರಚಿಕೊಂಡು ಕುಣಿದು ಕುಪ್ಪಳಿಸಿದರು. ಈ ಬಾರಿ ಜಾತ್ರೆಯಲ್ಲಿ ಟೆಂಗಿನಕಾಯಿ ಬೆಲೆ ದುಬಾರಿಯಾಗಿದ್ದರೂ ಸಹ ಲೆಕ್ಕಿಸದ ಭಕ್ತರು ಟೆಂಗಿನಕಾಯಿಗಳನ್ನು ಮಂದಿರದ ಮುಖ್ಯದ್ವಾರಕ್ಕೆ ಎಸೆದು ಹರಕೆ ಸಲ್ಲಿಸಿದರು. ಸಿದ್ದೇಶ್ವರನಿಗೆ ಹರಕೆ ಸಲ್ಲಿಸಲು ಚಿಕ್ಕೋಡಿ, ರಾಯಬಾಗ ತಾಲೂಕಿನ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಾಯಂಕಾಲ ಸುಮಾರು ಒಂದು ಗಂಟೆಗಳ ಕಾಲ ಭಕ್ತರು ಸತತವಾಗಿ ಟೆಂಗಿನಕಾಯಿಗಳನ್ನು ಹಾರಿಸಿದರಲ್ಲದೇ ಅರಿಶಿನ ಭಂಡಾರ, ಕೆಂಪು ಗುಲಾಲು ಹಾರಿಸಿ ಮೈಗೆ ಎರಚಿಕೊಂಡುಭಕ್ತರು ಕುಣಿದು ಕುಪ್ಪಳಿಸಿದರು. ಮುಂಜಾನೆಯಿಂದಲೇ ಜಾತ್ರೆಯಲ್ಲಿ ಪಾಲ್ಗೊಳ್ಳಲು ಜನರು ವಿವಿಧಡೆಯಿಂದ ಆಗಮಿಸುತ್ತಿದ್ದರು. ಗ್ರಾಮದಲ್ಲಿ ದೀಪಾಲಂಕಾರ ನೋಡುಗರ ಕನ್ಮಣ ಸೆಳೆದವು. ಅಂಕಲಿ ಪಿ.ಎಸ್.ಐ  ಹಾಗೂ ಪೋಲಿಸ್ ಸಿಬ್ಬಂದಿ, ಯಾತ್ರಾ ಕಮಿಟಿ ಸದಸ್ಯರು, ಗ್ರಾ.ಪಂ ಸದಸ್ಯರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ ಕೈಗೊಂಡಿದ್ದರು. ಜಾತ್ರೆಯಲ್ಲಿಎಲ್ಲವೂ ತುಟ್ಟಿಯಾಗಿದ್ದರೂ ಭಕ್ತರು ಲೆಕ್ಕಿಸದೇ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಅಂಕಲಿ ಗ್ರಾಮದಲ್ಲಿ ಶನಿವಾರ ಸಾಯಂಕಾಲ ಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಪಾಲ್ಗೊಂಡ ಅಪಾರ ಭಕ್ತರು.

ಸುದ್ದಿ ಓದಿ