ಸಿದ್ದಾರ್ಥ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ.
ಮುದ್ದೇಬಿಹಾಳ: ತಾಲೂಕಿನ ಕೇಸಾಪೂರ ಗ್ರಾಮದಲ್ಲಿರುವ ಸಿದ್ದಾರ್ಥ ಪಬ್ಲೀಕ್ ಶಾಲೆ ತನ್ನ ಪ್ರಥಮ ವಾರ್ಷಿಕೋತ್ಸವ ಮತ್ತು ಸಂಸ್ಕತಿ ಉತ್ಸವ ಆಚರಿಸಲು ಮೆದುವಣಗಿತ್ತಿಯಂತೆ ಸಜ್ಜಾಗಿ ನಿಂತಿದೆ, ಸುಸಜ್ಜಿತವಾದ ವಾತವರಣ, ನುರಿತ ಶಿಕ್ಷಕರಿಂದ ಉತ್ತಮ ಬೋಧನೆ , ಉತ್ತಮವಾದ ಶಾಲಾ ಆವರಣವನ್ನು ಹೊಂದಿರುವ ಈ ಶಾಲೆ ಇಂದು ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿಕೋಳ್ಳುತ್ತಿದೆ.
ಈ ಕಾರ್ಯಕ್ರಮಕ್ಕೆ ಖ್ಯಾತ ಶಿಕ್ಷಣ ತಜ್ಞ ಡಾ, ಗುರುರಾಜ ಕರ್ಜಗಿ ಶಾಲೆಯ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಶಿಕ್ಷಕರಿಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಸ್ಥಳೀಯ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ, ಸಿದ್ದಾರ್ಥ ಶಿಕ್ಷಣ ಸಂಸ್ಥೇಯ ಅದ್ಯಕ್ಷರಾದ ಸರಸ್ವತಿ ಆರ್ ಖಾನಾಪೂರ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಲಿದ್ದಾರೆ. ಗುರುನಾಥ ದೇಸಮುಖ ್ಲಜೀಮಿನ್ದಾರ್ವ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜೆ ನಾಯಕ, ಕಾರ್ಯಕ್ರಮದಲ್ಲಿ ಅಥಿತಿಯಾಗಿ ಆಗಮಿಸಲಿದ್ದಾರೆ. ಆದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಪಾಲಕರು ಶಾಲಾ ವಾರ್ಷಿಕೋತ್ಸವ ಹಾಗೂ ಸಂಸ್ಕೃತಿ ಉತ್ಸವವಕ್ಕೆ ಆಗಮಿಸಬೇಕೆಂದು ಶಾಲಾ ಸಮಿತಿಯ ಪರವಾಗಿ ಕಾರ್ಯಧರ್ಶಿ ರಾಮಣ್ಣ ಬಿ ಖಾನಾಪೂರ ಮನವಿಯನ್ನು ಮಾಡಿಕೊಂಡಿದ್ದಾರೆ.