ಚಿಕ್ಕೋಡಿ

ಸಿದ್ದೇಶ್ವರ ಜಾತ್ರೆ

ಸಿದ್ದೇಶ್ವರ ಜಾತ್ರೆ

ಮಾಂಜರಿ 10: ಸಮೀಪದ ಅಂಕಲಿ ಗ್ರಾಮದಲ್ಲಿನ ಶ್ರೀ ಸಿದ್ದೇಶ್ವರ ಜಾತ್ರೆ ಮತ್ತು ದನಗಳ ಜಾತ್ರೆಯು ದಿ. 11ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಜರುಗಲಿದೆ.

ದಿ. 11ರಂದು ಮಹಾಶಿವರಾತ್ರಿ ಏಕಾದಶಿಯೊಂದಿಗೆ ಜಾತ್ರೆ ಪ್ರಾರಂಭಗೊಳ್ಳಲಿದ್ದು, ರಾತ್ರಿ ಹರಿ ಭಜನೆ ಕಾರ್ಯಕ್ರಮ ನಡೆಯಲಿದೆ, ದಿ. 12ರಂದು ಮುಂಜಾನೆ 8 ಗಂಟೆಗೆ ದೇವರ ಕವಲು ಮತ್ತು ನುಡಿಗಳು, 11ಗಂಟೆಗೆ ಮಹಾನೈವೈದ್ಯ ಮತ್ತು ಸಾಯಂಕಾಲ 5ಗಂಟೆಗೆ ಪಲ್ಲಕ್ಕಿ ಉತ್ಸವ ಮತ್ತು ಟೆಂಗಿನಕಾಯಿ ಹಾರಿಸುವ ಕಾರ್ಯಕ್ರಮ ನಡೆಯಲಿದೆ. 

ದಿ. 13ರಂದು  ಮುಂಜಾನೆ 9 ಗಂಟೆಗೆ ಜೋಡೆತ್ತಿನಗಾಡಿ ಶರ್ಯತ್ತು, ಕುದುರೆ ಗಾಡಿ ಶರ್ಯತ್ತು ಮತ್ತು 10ಕ್ಕೆ  ಒಂದ ಎತ್ತು ಮತ್ತು ಕುದುರೆ ಶರ್ಯತ್ತು ನಡೆಯಲಿದೆ.  12ಗಂಟೆಗೆ ಮಹಾಪ್ರಸಾದ ಜರುಗಲಿದ್ದು, ದಿ. 19ರಂದು ದೇವರಗುಡಿಯ ಮುಂದೆ ಸಂತೆಯ ಮೂಲಕ ಜಾತ್ರೆ ಮುಕ್ತಾಯ ಗೊಳ್ಳಲಿದೆ ಎಂದು ಕಮಿಟಿಯವರು ತಿಳಿಸಿದ್ದಾರೆ.

ಸದಲಗಾದಲ್ಲಿ ದಿ. 11ರಂದು ಮಹಾ ಮೃತ್ಯುಂಜಯ ಹೋಮ: ಸಮೀಪದ ಸದಲಗಾ ಪಟ್ಟಣದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ದಿ. 11ರಂದು ಬೆಳಿಗ್ಗೆ 4ಕ್ಕೆ ಮಹಾ ಮೃತ್ಯುಂಜಯ ಹೋಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಡಾ, ಶೃದ್ಧಾನಂದ ಮಹಾಸ್ವಾಮಿಗಳು ಮತ್ತು ವಿಜಯಪೂರದ ಮಹಾದೇವ ಸ್ವಾಮಿಜಿಗಳು ವಹಿಸಲಿದ್ದು, ಕಮತ್ಯಾನಹಟ್ಟಿಯ ನಾನಾಗೌಡಾ ಪಾಟೀಲ ಗುರುಜಿ ಪಾಲ್ಗೊಳ್ಳಲಿದ್ದಾರೆಂದು ಮಹಾದೇವ ಪಾಟೀಲ ತಿಳಿಸಿದ್ದಾರೆ.

ಸುದ್ದಿ ಓದಿ