ಮನರಂಜನೆ

ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ: ಶ್ರುತಿ ಹಾಸನ್

ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ: ಶ್ರುತಿ ಹಾಸನ್

ಚೆನ್ನೈ, ಏಪ್ರಿಲ್ 16: ಖ್ಯಾತ ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ಕೂಡ ತಂದೆಯಂತೆಯೇ ರಾಜಕೀಯ ಪ್ರವೇಶಿಸುತ್ತಾರಾ ಎಂಬ ಪ್ರಶ್ನೆಯನ್ನು ಆಗಾಗ ಅವರ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ.   ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ರುತಿ  ಕೆಲವೊಮ್ಮೆ  ತಮ್ಮ ಅಭಿಮಾನಿಗಳ ಜೊತೆ ಸಂವಹನ ನಡೆಸುತ್ತಾ ಇಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ.

ಅಂತೆಯೇ ಅಭಿಮಾನಿಗಳು ನಟಿಯ ಬಳಿ ತಂದೆಯಂತೆ ನೀವು ರಾಜಕೀಯ ಪ್ರವೇಶಿಸುವ ಯೋಚನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವದ ನಟಿ ಶ್ರುತಿ ಹಾಸನ್ ಅವರು, ‘ನನಗೆ ತಂದೆಯಂತೆ ರಾಜಕೀಯ ಪ್ರವೆಶಿಸುವ ಆಸಕ್ತಿ ಇಲ್ಲ. ಈ ಬಗ್ಗೆ ಯೋಚನೆಯೂ ಇಲ್ಲ. ಆದರೆ ರಾಜಕೀಯ ವಿಚಾರದಲ್ಲಿ ತಂದೆಯನ್ನು ಬೆಂಬಲಿಸಲು ತುಂಬಾ ಸಂತೋಷವಾಗುತ್ತದೆ’ ಎಂದು ತಿಳಿಸಿದ್ದಾರೆ.

ಸುದ್ದಿ ಓದಿ