ಶ್ರೀಮದ್ ಭಾಗವತ ಪ್ರವಚನ ಕಾರ್ಯಕ್ರಮ
ಮುಂಡರಗಿ 05: ಕನ್ನಡ ಸಾಹಿತ್ಯ ಲೋಕದಲ್ಲಿ ದಾಸ ಶ್ರೇಷ್ಠರೆಂದು ಪ್ರಸಿದ್ಧಿಯಾದ ಜಗನ್ನಾಥ ದಾಸರು ರಚಿಸಿದ ಕನ್ನಡ ಸಾಹಿತ್ಯದಲ್ಲಿ ಮೇರು ಕೃತಿಯಾಗಿರುವ ಹರಿಕಥಾಮೃತಸಾರ ಗ್ರಂಥವಾಗಿದೆ. ಹಲವಾರು ಹರಿದಾಸರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಗ್ರಂಥಗಳನ್ನು ರಚಿಸಿ, ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದು ಪಂಡಿತರಾದ ಎಂ ಫಣೀಂದ್ರ ಆಚಾರ್ಯ ಹೇಳಿದರು.
ಮುಂಡರಗಿಯ ನಂಜನಗೂಡ ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀಮದ್ ಭಾಗವತ ಪ್ರವಚನದಲ್ಲಿ ರವಿವಾರ ಜಗನ್ನಾಥದಾಸರ ಸಾಹಿತ್ಯಕೃತಿ ಕುರಿತು ಮಾತನಾಡಿದರು.
ಜಗನ್ನಾಥದಾಸ ಅನೇಕ ಕೃತಿಗಳನ್ನು ತಿಳಿಸಿದ ಅವರು, ಅವರ ಸಾಹಿತ್ಯ ಕೃತಿಗಳಿಂದ ಮನುಷ್ಯ ಸಮಾಜದ ಧಾರ್ಮಿಕದತ್ತ ನಡೆಯುತ್ತಾನೆಂದು ಹೇಳಿದರು.
ಭಾಗವತ ಶ್ರೇಷ್ಠವಾದ ಪುರಾಣ. ಭಾಗವತ ಗ್ರಂಥವಿದ್ದಲ್ಲಿ, ಕೃಷ್ಣ ಪರಮಾತ್ಮ ಬರುತ್ತಾನೆ. ಜ್ಞಾನ ಭಕ್ತಿ ವಿರಕ್ತಿ ಸಂಗಮವೇ ಭಾಗವತ ಎಂದರು. ವೇದವ್ಯಾಸರು 564 ಬ್ರಹ್ಮ ಸೂತ್ರಗಳನ್ನು ರಚಿಸಿದ್ದಾರೆ. ಬ್ರಹ್ಮಸೂತ್ರವೇ ಭಾಗವತ . ಭಾಗವತ ಜೊತೆಗೆ ನಿತ್ಯ ಗಾಯತ್ರಿ ಜಪ ಮಾಡಬೇಕು ಎಂದರು. ಭಾಗವತ ವೇದಗಳ ಗ್ರಂಥಗಳನ್ನು ಹಿಡಿದುಕೊಂಡಿದೆ. 12 ಸ್ಕಂಧಗಳಿಂದ ಕೂಡಿದ ಗ್ರಂಥವೇ ಭಾಗವತ ಎಂದು ತಿಳಿಸಿ, 364 ಅಧ್ಯಾಯಗಳಿಂದ ಹಾಗೂ 18 ಸಾವಿರ ಶ್ಲೋಕಗಳಿಂದ ಭಾಗವತ ಗ್ರಂಥ ರಚನೆಗೊಂಡಿದೆ ಎಂದರು.
ಮನುಷ್ಯನ ನೆಮ್ಮದಿ ಬದುಕಿಗೆ ಹರಿಸರ್ವೋತ್ತಮ ನಾಮಸ್ಮರಣೆ ಇರಬೇಕು. ಜೀವನಕ್ಕೆ ಶಾಸ್ತ್ರ, ಪ್ರವಚನ ಇರದಿದ್ದರೆ ಬದುಕು. ನಿರರ್ತಕವಾಗುವದು ಎಂದು ಹೇಳಿ, ದೈವಿ ಕಾಟ, ಭೌತಿಕ ಕಾಟ, ಆಧ್ಯಾತ್ಮಿಕ ಕಾಟಗಳು, ನಿವಾರಣೆಗೆ ಭಾಗವತ ಕೇಳಬೇಕು. ವೇದ ಪುರುಷರಿಂದ ಉದುರಿಸದ ಹಣ್ಣು ಭಾಗವತವಾಗಿದೆ. ಭಾಗವತದ ರಸ ಸೇವಿಸಬೇಕು. ವರ್ಷವೀಡೀ ಭಾಗವತ ಕೇಳಿದರೂ, ಬೇಸರ ಬರುವದಿಲ್ಲ, ಮನುಷ್ಯರಿಗೆ ಬರುವ ಎಲ್ಲ ರೋಗಗಳು, ನಿವಾರಣೆ ಗೊಳ್ಳಬೇಕಾದರೇ ಭಾಗವತ ಪಠಣ ಮಾಡಬೇಕು ಎಂದು ಪಂಡಿತ ಫಣೀಂದ್ರ ಆಚಾರ್ಯ ಪ್ರವಚನದಲ್ಲಿ ಹೇಳಿದರು.
ನಂಜನಗೂಡ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಗೌರವ ವಿಚಾರಣಾಕರ್ತರಾದ ನಾರಾಯಣ ಇಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದೀಲೀಪಕುಮಾರ ಜೋಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಮಂಡಳದ ಗೌರವಾಧ್ಯಕ್ಷ ಶಮಂತಕಮಣಿ ಇಲ್ಲೂರ ಅರ್ಚಕರಾದ ಕೆ ಗುರಾಚಾರ್ಯ, ಕೃಷ್ಣಮೂರ್ತಿ, ಧೀರೇಂದ್ರ ಆಚಾರ್ಯ ಇನಾಮದಾರ, ರಘೋತ್ತಮ ಡಂಬಳ, ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಗೋವಿಂದರಾಜ ಹೆಗ್ಗಡಾಳ, ರಾಘವೇಂದ್ರ ಚಿನ್ನಿ, ದೇವಪ್ಪ ಇಟಗಿ, ನಾಗರಾಜ ಮುರಡಿ, ಕಾಶಿನಾಥ ಅಳವಂಡಿ, ಮಂಜುನಾಥ ಗುಡ್ಡದ, ಸೇತುರಾಮಾಚಾರ್ಯ ಕಟ್ಟಿ,ಸತ್ಯನಾಥ ಇನಾಮದಾರ, ಸುಬ್ರಮಣ್ಯ ಇನಾಮದಾರ, ರಂಗಪ್ಪ ಕೋಳಿ, ಶಂಕರ ಹೊನ್ನಿಹಳ್ಳಿ, ದೇವಪ್ಪ ಜವಳಗೇರಿ, ಎ.ಎಸ್.ಮಕಾಂದಾರ, ಎಸ್ ಟಿ ಹುಬ್ಬಳ್ಳಿ, ಪ್ರೋ ಆರ್ ಕೆ ರಾಯನಗೌಡರ, ಸಂಜೀವ ಮುಂಡರಗಿ,ಲಕ್ಷ್ಮಣ ಇಲ್ಲೂರ, ಮಹಿಳಾ ಮಂಡಳ ಅಧ್ಯಕ್ಷ ಚಂದ್ರಕಲಾ ಕಾಗಲಕರ, ಉಪಾಧ್ಯಕ್ಷ ಶೋಭಾ ಕುಲಕರ್ಣಿ, ಕಾರ್ಯದರ್ಶಿ ಹೇಮಾ ಕುಲಕರ್ಣಿ, ವಿಧ್ಯಾವತಿ ಕೃಷ್ಣಮೂರ್ತಿ, ಶ್ರೀದೇವಿ ಜೋಶಿ, ವಿನೋದಾ ತಾವರಗೇರಿ, ಅರ್ಚನಾ ಕಬ್ಬೂರ,,ಶಕುಂತಲಾ ಕುಲಕರ್ಣಿ, ಭಾರ್ಗವಿ ಗಂಭೀರ, ಗುಂಡೂರಾವ ಕಾಗಲಕರ,ಗೀತಾ ಕುಲಕರ್ಣಿ, ರಾಘವೇಂದ್ರ ಕಾಗಲಕರ, ಶ್ರೀನಿವಾಸ ಕುಲಕರ್ಣಿ, ರೇಣುಕಾ ಅಳವಂಡಿ, ಸುನೀತಾ ಅಳವಂಡಿ, ವ್ಹಿ ಎನ್ ಕೊಪ್ಪಳ, ಕೃಷ್ಣ ಗಂಭೀರ, ದತ್ತಣ್ಣ ಹೆಗಡಾಳ, ಹಾಗೂ ನೂರಾರು ಭಕ್ತರು ಮಹಿಳಾ ಮಂಡಳದ ಸರ್ವಸದಸ್ಯರು, ವಾಸವಿ ಮಹಿಳಾ ಮಂಡಳದ ಸದಸ್ಯರು, ಉಪಸ್ಥಿತರಿದ್ದರು.