ಬಂಡೆರಂಗನಾಥಸ್ವಾಮಿಯನ್ನು ಬೆಟ್ಟಕ್ಕೆ ಕರೆದೊಯ್ಯುವ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ 13 : ತಾಲೂಕಿನ ತಂಬ್ರಹಳ್ಳಿಯಲ್ಲಿ ಮಾರ್ಚ್ 18ರ ಹೋಳಿ ಹುಣ್ಣಿಮೆಯಂದು ಜರುಗುವ ಶ್ರೀಬಂಡೆರಂಗನಾಥೇಶ್ವರ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀರಂಗನಾಥಸ್ವಾಮಿಯನ್ನು ಬೆಟ್ಟಕ್ಕೆ ಕರೆದೊಯ್ಯುವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ವಂಶಪರಾಂಪರ್ಯ ಧರ್ಮಕರ್ತರಾದ ಶಾನುಬೋಗರ ಟಿ.ಉದಯಭಾಸ್ಕರ ಇವರ ಮನೆಯಿಂದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ಬಂಡೆ ರಂಗನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸದ ಜೊತೆಗೆ ಸಮಾಳ ಹಾಗೂ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬೆಟ್ಟಕ್ಕೆ ಕರೆದೊಯ್ದರು. ಇಂದಿನಿಂದ ಒಂದು ವಾರಗಳ ಕಾಲ ಬೆಟ್ಟದ ಮೇಲಿರುವ ಶ್ರೀರಂಗನಾಥೇಶ್ವರ ಸ್ವಾಮಿ ಮತ್ತು ಲಕ್ಷ್ಮಿದೇವಿಯರಿಗೆ ಋತ್ವಿಕರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಪ್ರಾರಂಭವಾಗಲಿವೆ,.ಕಳೆದೆರಡು ವರ್ಷಗಳಿಂದ ಲೋಕಕ್ಕೆ ಅಂಟಿದ ಮಹಾಮಾರಿ ಕೋವಿಡ್ನಿಂದ ಸರಳವಾಗಿ ಜಾತ್ರೆ ನಡೆದಿತ್ತು ಈ ಭಾರಿ ಕೋವಿಡ್ ನಿಯಮಾವಳಿ ಪ್ರಕಾರವೇ ಅದ್ದೂರಿಯಾಗಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷ ಬಿ.ಲಕ್ಷಣ ಕಾರ್ಯದರ್ಶಿ ಸುಣಗಾರ ಪರುಶುರಾಮ ತಿಳಿಸಿದರು.
14ಸೋಮವಾರ ಮತ್ತು 15 ಮಂಗಳವಾರ ರಂದು ರಂಗನಾಥಸ್ವಾಮಿ ಮತ್ತು ಲಕ್ಮೀ ದೇವರಿಗೆ ಅಭಿಷೇಕ ದೇವತಾರ್ಚನೆ. 16 ರಂದು ಬುಧವಾರ ಸ್ವಾಮಿಗೆ ಪಂಚಾಭಿಷೇಕದೊಂದಿಗೆ ಸರ್ವಾಭರಣ ಅಲಂಕಾರ ಮತ್ತು ರಂಗನಾಥ ಸ್ವಾಮಿ ಮತ್ತು ಲಕ್ಷ್ಮೀದೇವಿಯ ಕಲ್ಯಾಣೋತ್ಸವ ಕಾರ್ಯಕ್ರಮ ಹಾಗೂ ಕಳಸರೋಹಣ ರಾತ್ರಿ ಪಲ್ಲಕ್ಕಿ ಉತ್ಸವದ ಬಳಿಕ ಲಾಲಿ ಸೇವಾ 17 ರಂದು ಶನಿವಾರ ಸಕಲ ಸೇವೆಗಳೊಂದಿಗೆ ರುದ್ರಾಭಿಷೇಕ, ದೇವಾತರ್ಚನೆ, ಮಾರ್ಚ 18 ರಂದು ರವಿವಾರ ರಥದ ಪೂಜೆ,ಬಲಿ ಪೂಜೆಯೊಂದಿಗೆ ಸಾಯಂಕಾಲ ಶ್ರೀ ಬಂಡೆರಂಗನಾಥ ಸ್ವಾಮಿ ಮಹಾ ರಥೋತ್ಸವ ಜರುಗುವುದು 19 ರಂದು ಬೇಟೆ ಗಿಡ ಉತ್ಸವ ಹಾಗೂ ಕಡುಬಿನ ಕಾಳಗ ನಂದಿ ವಿಸರ್ಜನೆ, ಪುನಹ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ತರುವ ಕಾರ್ಯಕ್ರಮಗಳು ಜರುಗುತ್ತವೆ.
ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಟಿ. ಉದಯಬಾಸ್ಕರ್ರಾವ್, ಬಿ.ಲಕ್ಷ್ಮಣ, ಎಚ್ಬಿ.ನಾಗನಗೌಡ, ಗೌರಜ್ಜನವರ ಬಸವರಾಜಪ್ಪ, ಬಣಕಾರ ತೋಟಪ್ಪ, ಹೆಚ್ಬಿ ಗಂಗಾಧರ ಗೌಡ, ಬಣಕಾರ ಕೊಟ್ರೇಶ್, ಕಡ್ಡಿ ಚೆನ್ನಬಸಪ್ಪ ಸುಣಗಾರ ಮಂಜುನಾಥ್, ಬಿ.ದೇವಿಪ್ರಸಾದ್, ಸುಣಗಾರ ಪರಶುರಾಮು, ಮಂಜುನಾಥ್ ಪಾಟೀಲ್,ಸರಾಯಿ ಮಂಜುನಾಥ,ಗ್ರಾಪಂ ಸದಸ್ಯ ಎಂಎನ್ ಮಂಜುನಾಥ್ ಟಿ.ಸುರೇಶ್, ಬಿ,ಶ್ರೀನಿವಾಸ್, ಟಿ.ಪಾಂಡುರಂಗಪ್ಪ, ಟಿ.ವಿಠ್ಠಲ, ಎಸ್.ಹರೀಶ್ ಕಡ್ಡಿ ಕೊಟ್ರೇಶ್,ಬಿ.ಶ್ರೀನಿವಾಸ, ಟಿ.ಪಾಂಡುರಂಗಪ್ಪ, ಗಡ್ಡಿ ನಿಂಗಪ್ಪ, ತಳವಾರ ಪರುಸಪ್ಪ, ಕೊಟಿಗಿ ಪರಮೇಶಿ, ಪಂಚಯ್ಯ, ಏಣಿಗಿ ರಾಮಣ್ಣ, ಆರ್ಚಕ ರಂಗನಗೌಡ ಪೂಜಾರ್, ಮಹಾಬಲೇಶ್ವರಯ್ಯ, ಯಲ್ಲಪ್ಪಗೌಡ, ಇತರರಿದ್ದರು.