ಶ್ರೀವಿಠ್ಠಲ ರುಕ್ಮಾಯಿ ದೇವರ ದಿಂಡಿ ಕಾರ್ಯಕ್ರಮ ಸಂಪನ್ನ
ಲೋಕದರ್ಶನ ವರದಿ
ಮುಂಡಗೋಡ 30: ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿ ನಿರ್ಮಿಸಿದ ಶ್ರೀವಿಠ್ಠಲ ರುಕ್ಮಾಯಿ ಮಂದಿರದ ಪ್ರಥಮ ದಿಂಡಿ ಕಾರ್ಯಕ್ರಮ ಗುರುವಾರ ಭಕ್ತಿಭಾವದಿಂದ ಸಂಪನ್ನಗೊಂಡಿತು.
ಕ್ಷೇತ್ರ ಪಂಡರಪುರದ ಶ್ರೀ ಬೋದಲೇ ಮಹಾರಾಜರು, ಶ್ರೀನಾಮದಾಸ ಮಹಾರಾಜರ ಆಶೀರ್ವಾದದಿಂದ ಇಲ್ಲಿನ ಶ್ರೀಭಾವಸಾರ ಕ್ಷತ್ರೀಯ ಸಮಾಜ ಹಾಗೂ ನಾಮದೇವ ಸಿಂಪಿ ಸಮಾಜದ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಕಾಕಡಾರತಿ, ನಾಮಪದ, ಹರಿಪಾಠಗಳು ನೆರವೇರಿದವು. ನಂತರ 108 ಕುಂಭ ಮೇಳದೊಂದಿಗೆ ದಿಂಡಿ ಸೊಳಾ ನಗರ ಪ್ರದಕ್ಷಿಣೆ ಹೊರಟಿತು. ಮಧ್ಯಾಹ್ನ ಕೀರ್ತನೆಯೊಂದಿಗೆ ದಿಂಡಿ ಮಂಗಲವಾಯಿತು. ಪಾಂಡುರಂಗ ಉಗ್ಗಿನಕೇರಿ ಪ್ರವಚನ ನೀಡಿದರು. ನಂತರ ಭಕ್ತಾದಿಗಳಿಗೆ ಅನ್ನ ಪ್ರಸಾದ ಕಾರ್ಯಕ್ರಮ ನಡೆಯಿತು. ತಾಲೂಕಿನ ಎಲ್ಲಾ ಭಕ್ತಾಧಿಗಳು ಭಾಗಿಯಾಗಿದ್ದರು.