ಶ್ರೀಮೈಲಾರಲಿಂಗೇಶ್ವರ ದೋಣಿ ತುಂಬುವ ಕಾರ್ಯಕ್ರಮ
ಮುಂಡಗೋಡ ೧೨: ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ದೋಣಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಗ್ರಾಮದಲ್ಲಿ ಶ್ರೀಮೈಲಾರಲಿಂಗೇಶ್ವರ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡಿ ಹನ್ನೊಂದು ವರ್ಷಗಳಾದವು. ಸೀಗೆಹುಣ್ಣಿಮೆಯಂದು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಶೀಗೆಹುಣ್ಣಿಮೆ ಕಳೆದು ಮೂರು ದಿನಕ್ಕೆ ತಾಲೂಕಿನ ಉಗ್ಗಿಕೇರಿ ಗ್ರಾಮದಿಂದ ದಿಂಡಿ ಯಾತ್ರಿಕರು ಬಂದಿದ್ದರು. ದಿಂಡಿ ಜತೆ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಿತು. ಗ್ರಾಮದ ಸಂತರು, ಗೊರವಯ್ಯನವರು ಮತ್ತು ಜೋಗತಿಯರು ಸೇರಿ ಶ್ರೀಮೈಲಾರಲಿಂಗೇಶ್ವರನಿಗೆ ದೋಣಿ ತುಂಬುವ ಕಾರ್ಯ ನೆರವೇರಿಸಿದರು. ಗ್ರಾಮಸ್ಥರಾದ ರಾಜು ಗುಬ್ಬಕ್ಕನವರ, ಗೌರೀಶ ಹರಿಜನ, ಮಂಜು ಕೋಣನಕೇರಿ, ಶಿವಾನಂದ ಕೆರಿಹೊಲದವರ, ಪ್ರಭು ಅರಶಿಣಗೇರಿ, ಫಕ್ಕೀರಪ್ಪ ಬೋಕಿಯವರ, ಸುರೇಶ ಕೆರಿಹೊಲದವರ, ಜೋಗತಿಯರಾದ ಸುಗಂಧಾ ಗುಬ್ಬಕ್ಕನವರ, ಗಂಗವ್ವ ಬಾರಕೇರ, ಗಂಗವ್ವ ಹರಿಜನ, ಗುಣವಂತಿ ಅರಶಿಣಗೇರಿ ಮುಂತಾದವರು ಉಪಸ್ಥಿತರಿದ್ದರು.