ಕನಕಗಿರಿ

ಅದ್ದೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಅದ್ದೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ


ಕನಕಗಿರಿ 22: ಪಟ್ಟಣದ ಗೊಲ್ಲ ಸಮುದಾಯದಿಂದ ರವಿವಾರ ಅದ್ದೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮುಂಜಾನೆ ಶ್ರೀ ಕೃಷ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸುಮಂಗಲಿಯರಿಂದ 101 ಕಳಸ ಬಾಲಕರಿಂದ ಕೃಷ್ಣನ ವೇಷ ಧರಿಸಿ ಮತ್ತು ಕಾಮದೇನುವಿಗೆ(ಗೋವು)ಹೂವುಗಳಿಂದ ಶೃಂಗರಿಸಿ, ವಿವಿಧ ತಂಡಗಳ ಡೊಳ್ಳು ಕುಣಿತ ಬಾಜಾ ಭಜಂತ್ರಿಯೊಂದಿಗೆ ಆಚೇರಿ ಕಟ್ಟೆಯಿಂದ ಪ್ರಾರಂಭವಾದ ಭಾವಚಿತ್ರ ಮೆರವಣಿಗೆಗೆ ಮಾಜಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. 


ಬಳಿಕ ಸ್ಥಳೀಯ ಯಾದವ ಸಮಾಜದ ಮುಖಂಡರಾದ ದುರ್ಗಾದಾಸ ಮಾತನಾಡಿ ಕನಕಗಿರಿಯಲ್ಲಿ 701ಗೊಲ್ಲಕಿ ಇರುವುದರಿಂದ ತನ್ನದೆಯಾದ ಇತಿಹಾಸ ಪರಂಪರೆಯನ್ನು ಹೊಂದಿದೆ ಎಲ್ಲರು ಒಟ್ಟಾಗಿ  ಶ್ರೀಕ್ರೀಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ಸಂತಸದ ಸಂಗತಿ ಎಂದು ಹೇಳಿದರು.ರಾಜ ಬೀದಿಯ ಮೂಲಕ ಶ್ರೀ ಕನಕಚಾಲಪತಿ ದೇವಸ್ಥಾನಕ್ಕೆ ತಲುಪಿ ವಿಶೇಷ ಪೂಜೆ ಸಲ್ಲಿಸಿದರು.ಪಟ್ಟಣ ಸೇರಿದಂತೆ ಬಂಕಾಪುರ, ಗುಡದೂರು, ಕಾಟಾಪುರ, ವಿವಿಧ ಹಳ್ಳಿಯ ಯಾದವ (ಗೋಲ್ಲಾರ) ಸಮಾಜದವರು ಭಾಗವಹಿಸಿದ್ದರು.ಇದೇ ವೇಳೆ ಸ್ಥಳೀಯ ಯಾದವ ಸಮಾಜದ ಅಧ್ಯಕ್ಷ ನಿರುಪಾದಿ, ಪ್ರಮುಖರಾದ ಕೆ.ಗಂಗಾಧರಸ್ವಾಮಿ,ವೀರೇಶ ಸಮಗಂಡಿ,ರೆಡ್ಡಿ ಶ್ರೀನಿವಾಸ,ಶರಣಪ್ಪ ಭತ್ತದ,ಪ್ರಶಾಂತ ಪ್ರಭುಶೆಟ್ಟರ್,ವೆಂಕಟೇಶ ಬಂಡ್ಲಿ ಸೇರಿದಂತೆ ಯಾದವ ಸಮಾಜದವರು ಇದ್ದರು. 


ಸುದ್ದಿ ಓದಿ