ಶಿಗ್ಗಾವ್

ಶ್ರೇಷ್ಠ ಕನ್ನಡಿಗ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಶ್ರೇಷ್ಠ ಕನ್ನಡಿಗ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಶಿಗ್ಗಾವಿ 30: ಮನುಷ್ಯನಲ್ಲಿ ಕೃತಜ್ಞತಾ ಭಾವ ಇರಬೇಕು, ಈ ಹುಟ್ಟು ಹಬ್ಬವನ್ನ ಕೃತಜ್ಞತೆಯನ್ನು ಸಲ್ಲಿಸುವ ದಿನ ಎಂದು ಭಾವಿಸಿದ್ದೇನೆ. ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದವರು ನನ್ನ ಅಭಿಮಾನಿ ದೇವರುಗಳು ನಿಮಗೆ ನಾನು ಕೃತಜ್ಞರಾಗಿರುತ್ತೇನೆ ಜೊತೆಗೆ ಶಿಗ್ಗಾವಿ- ಸವಣೂರು ಕ್ಷೇತವನ್ನು ಇನ್ನು ಹೆಚ್ಚಿನ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಪಟ್ಟಣದ ಸಂತೆ ಮೈದಾನದಲ್ಲಿ ತಮ್ಮ 64 ನೇ ಹುಟ್ಟು ಹಬ್ಬದ ಅಂಗವಾಗಿ ಏರಿ​‍್ಡಸಿದ್ದ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಷ್ಟ್‌ ವತಿಯಿಂದ “ಶ್ರೇಷ್ಠ ಕನ್ನಡಿಗ ಪ್ರಶಸ್ತಿ” ನೀಡಿ ಗೌರವಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ.  ನನಗೆ 64 ವರ್ಷ ಆಗಿದೆ. ಇನ್ನೂ ಎಷ್ಟು ವರ್ಷ ಇರುತ್ತೇನೋ ಗೊತ್ತಿಲ್ಲ. ಜೀವನದ ಕೊನೆ ಉಸಿರು ಇರುವವರೆಗೂ ಶಿಗ್ಗಾವಿ ಸವಣೂರಿನ ಜನರ ಸೇವೆ ಮಾಡುತ್ತೇನೆ. 

ಇದು ಶರಣರ ನಾಡು, ಭಕ್ತ ಕನಕದಾಸರು, ಸಂತ ಶಿಶುನಾಳ ಶರೀಫರು ನೆಲೆಸಿದ್ದ ಪುಣ್ಯ ಭೂಮಿ ಶಿಗ್ಗಾವಿಯಲ್ಲಿ ಒಂದು ಕಣ್ಣಿನ ಆಸ್ಪತ್ರೆ, ಡಯಾಬಿಟಿಸ್ ಹಾಗೂ ಇಎನ್‌ಟಿ ಆಸ್ಪತ್ರೆಯನ್ನು ಮಾಡುತ್ತೇನೆ. ನಮ್ಮ ಕ್ಷೇತ್ರ ವಿದ್ಯಾರ್ಥಿಗಳಿಗೆ ಶಿಗ್ಗಾವಿಯಲ್ಲಿ ಕೋಚಿಂಗ್ ಕ್ಲಾಸ್ ಮಾಡಲು ತೀರ್ಮಾನ ಮಾಡಿದ್ದೇನೆ. ಮೂಗರು ಮತ್ತು ಕಿವುಡರ ಶಿಕ್ಷಣ ಸಂಸ್ಥೆಯನ್ನು ಬರುವ ದಿನಗಳಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು. 

ಈಗಾಗಲೇ ಟೆಕ್ಸ್‌ಟೈಲ್ ಪಾರ್ಕ್‌ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಅಲ್ಲಿ ಕಾರ್ಖಾನೆಗಳು ಆರಂಭವಾಗಲಿವೆ. ಪೂರ್ಣ ಪ್ರಮಾಣದಲ್ಲಿ ಟೆಕ್ಸ್‌ ಟೈಲ್ ಕಂಪನಿಗಳು ಆರಂಭವಾದರೆ ಮೂವತ್ತರಿಂದ ನಲವತ್ತು ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ, ಐಟಿಐ, ಬಿಎಎಂಸ್ ಕಾಲೇಜು ತರಲು ಚಿಂತನೆ ಮಾಡುತ್ತಿದ್ದೇನೆ. ಖಾಸಗಿ ವಲಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ನಮ್ಮ ಮುಖ್ಯವಾದ ಕೆಲಸಗಳು. ಮುಂದಿನ ನಾಲ್ಕು ವರ್ಷದಲ್ಲಿ ಶಿಗ್ಗಾವಿ ಸವಣೂರಿನಲ್ಲಿರುವ ಅಂಧರ ಶೇ 90 ರಷ್ಟು ಅಂಧತ್ವ ನಿವಾರಣೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು. 

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ನಮ್ಮ ಭಾಗದ ಧಾರವಾಡ, ಹಾವೇರಿ, ಗದಗ್ ಭಾಗದಿಂದ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಾರೆ. ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದು ಶಿಕ್ಷಣ ಕಲಿಯುತ್ತಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆ ನಮ್ಮ ಸಂಸ್ಕೃತಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ' ಎಂದರು.  

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಮೋಹನ್ ಆಳ್ವ ಶ್ರೇಷ್ಟ ಕನ್ನಡಿಗ ಪ್ರಶಸ್ತಿಯನ್ನ ಸ್ವೀಕರಿಸಿ ಮಾತನಾಡಿ ಬೊಮ್ಮಾಯಿಯವರು ಸಿಎಂ ಇದ್ದಾಗ ಪ್ರತಿ ಕ್ಷೇತ್ರದ ಶಾಸಕರಿಗೆ 500 ಕೋಟಿ ಅನುಧಾನ ನೀಡಿದ ಕೀರ್ತಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ, ಕಸಾಪ ಸಮ್ಮೇಳನಕ್ಕೆ ಹೆಚ್ಚು ಅನುಧಾನ ನೀಡಿದ್ದು ಬೊಮ್ಮಾಯಿಯವರು, ಕೇವಲ ರಾಮನ ಅಯೋದ್ಯೆಯನ್ನ ನಿರ್ಮಿಸಿದರೆ ಸಾಲದು ಅದರೊಟ್ಟಿಗೆ ದೇಶವನ್ನೂ ರಾಮರಾಜ್ಯದ ದೇಶವನ್ನಾಗಿ ಮಾಡಬೇಕಿದೆ, ಎಲ್ಲರೂ ಸೇರಿ ಒಟ್ಟಾಗಿ ಸಮಾಜದ ಪರಿಕಲ್ಪನೆಯಲ್ಲಿ ಬದುಕಬೇಕಿದೆ ಎಂದರು. 

ಕೆಎಲ್‌ಇ ಸಂಸ್ಥೆಯ ಅದ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ಬೊಮ್ಮಾಯಿಯವರ ತಂದೆಯವರೊಟ್ಟಿಗೂ ಕೆಲಸ ಮಾಡಿದ್ದೆನೆ, ಅವರು ಮಾಡಿದ ಆಶೀರ್ವಾದ ಮತ್ತು ಸಹಕಾರದಿಂದ ಈಗ 309 ಸಂಸ್ಥೆಗಳನ್ನ ನಡೆಸಲಾಗುತ್ತಿದೆ, ತಾಲೂಕಿನಲ್ಲಿ ಅರಟಾಳ ರುದ್ರಗೌಡ್ರ ಸಂಸ್ಥೆ ಕೇಳಿದ್ದಾರೆ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.   

ನಂತರ ಮೂಡಬಿದಿರಿಯ ಆಳ್ವಾಸ ನುಡಿಸಿರಿ ವಿರಾಸಿತ ಖ್ಯಾತಿಯ ಸಾಂಸ್ಕೃತಿಕ ಕಲಾತಂಡಗಳಿಂದ ಕಾರ್ಯಕ್ರಮಗಳು ಗಮನ ಸೆಳೆದವು. 

ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಹಾಗೂ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು, ಮಾಜಿ ಸಚಿವ ಸಿ ಸಿ ಪಾಟೀಲ, ಉದ್ಯಮಿ ಭರತ್ ಬೊಮ್ಮಾಯಿ, ಬಸವರಾಜ ಅರಬಗೊಂಡ, ಶಿವರಾಜ್ ಸಜ್ಜನ್, ಶ್ರೀಕಾಂತ ದುಂಡಿಗೌಡ್ರ, ಅಜ್ಜಂಪೀರ್ ಎಸ್ ಖಾದ್ರಿ, ಶಿವಾನಂದ ಮ್ಯಾಗೇರಿ ಸೇರಿದಂತೆ ಬೊಮ್ಮಾಯಿ ಅಭಿಮಾನಿ ಬಳಗದ ಸದಸ್ಯರು ವಿವಿಧ ಮುಖಂಡರು ಇದ್ದರು. 

ಅರಟಾಳ ರುದ್ರಗೌಡ್ರ ಅವರ ಹೆಸರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ಮನವಿ* 

ಕೋರೆಯವರು ಈಗಾಗಲೇ ಸುಮಾರು 280 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ, ಕೆಎಲ್‌ಇ ಶಿಕ್ಷಣ ಸಂಸ್ಥೆ ಪ್ರಾರಂಭದಲ್ಲಿ ಅರಟಾಳ ರುದಗೌಡ ಅವರ ಪಾತ್ರ ಅತ್ಯಂತ ಮುಖ್ಯವಾಗಿದೆ, ಹೀಗಾಗಿ ತಾಲೂಕಿನಲ್ಲಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನ ಆರಂಭಿಸಬೇಕೆಂದು ಮನವಿ ಮಾಡಬೇಕು, ಕೆಎಲ್‌ಇ ಸೊಸೈಟಿಯವರು ಹುಬ್ಬಳ್ಳಿ ಮಾರ್ಗದಲ್ಲಿ ದೊಡ್ಡ ಪ್ರಮಾಣದ ಆಸ್ಪತ್ರೆಯನ್ನು ತೆರೆಯಲು ತೀರ್ಮಾನಿಸಿದ್ದಾರೆ. ಮುಂದಿನ ನಾಲ್ಕು ತಿಂಗಳಲ್ಲಿ ಆಸತ್ರೆ ಆರಂಭವಾಗಲಿದೆ, ಶಿಗ್ಗಾವಿಯಲ್ಲಿ ನಾವು 250 ಬೆಡ್ ಆಸ್ಪತ್ರೆ ಆರಂಭಿಸುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆಗೆ ನಾವು ಹುಬ್ಬಳ್ಳಿಗೆ ಹೋಗಬೇಕು, ಅದಕ್ಕೆ ಮೊದಲೇ ಸುಸಜ್ಜಿತ ಆಸ್ಪತ್ರೆ ಆದರೆ ನಮಗೆ ಅನುಕೂಲವಾಗಲಿದೆ. 

ಬಸವರಾಜ ಬೊಮ್ಮಾಯಿ  

ಶಾಸಕ 


ಸುದ್ದಿ ಓದಿ