ಬಳ್ಳಾರಿ

ಪವರ್‌ಸ್ಟಾರ್ ಪುನಿತ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ

ಪವರ್‌ಸ್ಟಾರ್ ಪುನಿತ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ

ಬಳ್ಳಾರಿ 30: ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಅವರ ನಿಧನಕ್ಕೆ ನಗರದ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಮತ್ತು ಅಭಿಮಾನಿಗಳು ಶನಿವಾರ ಶ್ರದ್ಧಾಂಜಲಿ ಸಭೆ ನಡೆಸಿದರು.  

ಪುನಿತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ, ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನ ಆಚರಿಸಲಾಯಿತು.  

ಇದೇ ವೇಳೆ ಮಾತನಾಡಿದ ಪಕ್ಷದ ಜಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ. ಮೀನಹಳ್ಳಿ ತಾಯಣ್ಣ ಅವರು, ಪುನಿತ್ ರಾಜ್ ಕುಮಾರ್ ಅವರು ಡಾ. ರಾಜಕುಮಾರ ಅವರಷ್ಟೇ ಸರಳ ವ್ಯಕ್ತಿತ್ವ ಹೊಂದಿದ್ದರು. ದೊಡ್ಮನೆ ಹುಡುಗನಾಗಿದ್ದರೂ ಸಹ ಸರಳ ವ್ಯಕ್ತಿತ್ವದ ಮನೋಭಾವ ಬೆಳೆಸಿಕೊಂಡಿದ್ದರು. ಪುನಿತ್ ರಾಜ್‌ಕುಮಾರ್ ಅವರು ಇಷ್ಟು ಬೇಗ ನಿಧನರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ದೇವರು ಇಂತಹ ಕ್ರೂರಿ ಎಂದು ಯಾಊ ಭಾವಿಸಿರಲಿಲ್ಲ. ಪುನಿತ್ ಅವರ ಅಕಾಲಿಕ ಮರಣದಿಂದಾಗಿ ಇಡೀ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅಲ್ಲದೆ, ಸಿನಿಮಾ ಫೀಡ್‌ಗೂ ತುಂಬಲಾರದ ನಷ್ಟ ಉಂಟಾಗಿದೆ. ಅಭಿಮಾನಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ತಡೆಯಲಾರದ ನೋವು ಉಂಟಾಗಿದೆ. ದೇವರು ಪುನಿತ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ದುಃಖ ಭರಿಸುವ ಶಕ್ತಿ ಭಗವಂತ ಕುಟುಂಬದ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.  

ಈ ಸಭೆಯಲ್ಲಿ ಪಕ್ಷದ ರಾಜ್ಯ ಮುಖಂಡ ಅಲ್ಲಾಬಕಾಷ್, (ಮುನ್ನಾಬಾಯಿ), ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಿ. ವಿಜಯಕುಮಾರ್, ಮಹಿಳಾ ಧುರೀಣೆ ಪುಷ್ಪಾವತಿ, ಮುಖಂಡರಾದ ವಾದಿರಾಜಶೆಟ್ಟಿ, ಹೊನ್ನೂರ​‍್ಪ (ವಂಡ್ರಿ), ಬಿಸಿಲಹಳ್ಳಿ ರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. 


ಸುದ್ದಿ ಓದಿ