ಹಗರಿಬೊಮ್ಮನಹಳ್ಳಿ

ಅಕ್ಷರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಡಾ. ಸಿದ್ದಲಿಂಗಯ್ಯ

ಅಕ್ಷರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಡಾ. ಸಿದ್ದಲಿಂಗಯ್ಯ

ಹಗರಿಬೊಮ್ಮನಹಳ್ಳಿ.ಜೂ.14 : ನಾಡೋಜ ಡಾ. ಸಿದ್ದಲಿಂಗಯ್ಯನವರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಅಕ್ಷರಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಸಂದೇಶ ನೀಡುವ ಮಹಾನ್ ವ್ಯೆಕ್ತಿಯಾಗಿದ್ದರು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್ ಹೇಳಿದರು. 

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬಿ.ಆರ್‌.ಆಂಬೇಡ್ಕರ್ ಸಂಘ ಹಾಗೂ ಛಲವಾದಿ ಮಹಾಸಭದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ದಲಿತ ಬಂಡಾಯ ಕವಿ ನಾಡೋಜ ಡಾ.ಸಿದ್ದಲಿಂಗಯ್ಯನವರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಾಮಾಜಿ ಪರಿವರ್ತನೆಗೆ ತಮ್ಮ ಆಕ್ರೋಶದ ಸಾಹಿತ್ಯದ ವಿಶೇಷತೆ ಸಾಮಾಜಿಕ ಸವಾಲುಗಳ ಸಮಸ್ಯೆಗೆ ಪರಿಹಾರದ ಜೊತೆ ಪರಿವರ್ತನೆಗೆ ಮೂಲ ಮಂತ್ರವಾಗಿದ್ದವು ಎಂದರು.ಕೇವಲ ದಲಿತ ಸಮುದಾಯದವರಿಗೆ ರೂವಾರಿಯಾಗಿದ್ದರು ಎನ್ನುವುದಕ್ಕಿಂತ ಸದ್ಯ ತುಳಿತಕ್ಕೆ ಒಳಗಾಗಿರುವ ಪ್ರತಿಯೊಂದು ಸಮಾಜಕ್ಕೂ ಅವರು ಪ್ರೇರಣೆಯಾಗಿದ್ದಾರೆ ಅವರ ಅಗಲಿಕೆ ಹೋರಾಟದ ಕಿಚ್ಚಿಗೆ ಕೊಂಚ ತಡೆಯಾಗಿದೆ ಎಂಬುದರಲ್ಲಿ ಎರೆಡು ಮಾತಿಲ್ಲವೆಂದರು. 

ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ಜಿ.ದೊಡ್ಡಬಸಪ್ಪ ಮಾತನಾಡಿ ಡಾ. ಸಿದ್ದಲಿಂಗಯ್ಯನವರ ಪ್ರತಿಯೊಂದು ಅಕ್ಷರಗಳಲ್ಲಿ ಸಂಘಟನೆಯ ಕಿಚ್ಚು ಎದ್ದು ಕಾಣುತ್ತಿತ್ತು, ಅವರು ತಾವು ಅನುಭವಿಸಿದ ಹಲವಾರು ಶೋಷಣೆಯನ್ನೆ ಆಧಾರಿತವಾಗಿಟ್ಟುಕೊಂಡು ಸಮಾಜದ ಶೃಯಸ್ಸಿಗೆ ಫಲಿಸಿದ ಮಾಹಾನ್ ಕವಿಯಾಗಿದ್ದರು,ಅವರ ಹೋರಾಟದ ಹಾದಿ ಇಂದು ನಮಗೆಲ್ಲಾ ದಾರಿಯಾಗಿದೆ ಎಂದರು. 

ಛಲವಾದಿ ಮಹಾಸಭದ ತಾಲೂಕಾಧ್ಯಕ್ಷ ಕಾಳಿ ಬಸವರಜ ಮಾತನಾಡಿ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಅವರು ದಾರಿ ದೀಪವಾಗಿದ್ದರು,ಇಂದು ತಳಹದಿಯಿಂದ ಸಮಾಜದ ಏಲ್ಗೆಗಾಗಿ ಸಾಹಿತ್ಯದ ಮೊರೆ ಹೋಗಿ ದಲಿತ ಸಮುದಾಯಗಳನ್ನು ತುಳಿತದಿಂದ ಪಾರುಮಾಡುವ ಕಾರ್ಯಕ್ಕೆ ಮುಂದಾಗಿದ್ದರು, ಅವರ ಆದರ್ಶಗಳು ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿಸದೇ ಸಮಾನತೆಗೆ ಹಾತೊರೆದ ಮಾಹಾನ್ ವ್ಯೆಕ್ತಿಯಾಗಿದ್ದರು, ಅವರ ಕವಿತೆಗಳು ತುಳಿತಕ್ಕೆ ಎದುರಗಿ ಈಸುವ ಧೈರ್ಯವನ್ನು ತುಂಬಿಸುತ್ತಿದ್ದವು ಎಂದರು. 

ಈ ಸಂಧರ್ಭದಲ್ಲಿ ರಾಜ್ಯ ಪೌರ ಕಾರ್ಮಿಕರ ಪ್ರಧಾನ ಕಾರ್ಯದರ್ಶಿ ಕೆ.ಪ್ರಭಾಕರ್, ಮರುಳಪ್ಪ,ದುರುಗಪ್ಪ,ಚಿಮ್ಮನಹಳ್ಳಿ ಸಿದ್ದಪ್ಪ,ಯಮುನೂರುಪ್ಪ, ಮೈಲಪ್ಪ,ಮಾದುರು ಮಹೇಶ್, ಮೋರಗೇರಿ ಮೈಲಪ್ಪ, ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ