ಬಂಕಾಪುರದಲ್ಲಿ ನಡೆದ ಕೃಷ್ಣಾರ್ಜುನರ ಚಲನ ಚಿತ್ರದ ಶೂಟಿಂಗ್ ದೃಶ್ಯ
ಲೋಕದರ್ಶನ ವರದಿ
ಶಿಗ್ಗಾವಿ 20: ತಾಲೂಕಿನ ಬಂಕಾಪೂರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕನಕದಾಸ ದ್ವಾರ ಬಾಗಿಲು ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಭರ್ಜರಿ ನಡೆದ ಕೃಷ್ಣಾರ್ಜುನರ ಚಲನ ಚಿತ್ರದ ಶೂಟಿಂಗ್ನಲ್ಲಿ ನಟ, ನಟಿ ನೋಡಲು ಜನರು ದಂಡು ಗಮನ ಸೆಳೆಯಿತು.
ಕೃಷ್ಣಾಜರ್ುನ್ರ ನಡುವಿನ ಬಾಂಧವ್ಯದ ಕಥೆಯುಳ್ಳ ಈ ಚಿತ್ರದ ನಾಯಕ ನಟನಾಗಿ ರೈತ ಸೇನಾ ಕನರ್ಾಟಕದ ಜಿಲ್ಲಾ ಅಧ್ಯಕ್ಷರು ಹಾಗೂ ರೈತ ಮುಖಂಡ ಶ್ಯಾಡಂಬಿ ಗ್ರಾಮದ ವರುಣಗೌಡ್ರ ಪಾಟೀಲ ನಟಿಸಿದ್ದು ಸ್ಥಳೀಯರಲ್ಲಿ ಅಭಿಮಾನ ಹೆಚ್ಚಿದೆ. ನಾಯಕಿ ನಟಿಸಿರುವ ಕಾವ್ಯ ಸೇರಿದಂತೆ ಸಹ ಕಲಾವಿದರು, ನಾಯಕ ನಟ ರಸ್ತೆ ಪಕ್ಕದ ಚಹಾ ಅಂಗಡಿಯಲ್ಲಿ ರೈತರರೊಂದಿಗೆ ಟೀ ಕುಡಿಯವ ದೃಶ್ಯ ಶೂಟಿಂಗ್ನಲ್ಲಿ ಪಾಲ್ಗೊಂಡ ನಟ, ನಟಿ ನೋಡಲು ಜನರು ದಂಡು ಗಮನ ಸೆಳೆಯಿತು. ಸಂಚಾರಕ್ಕೆ ತೋಂದರೆಯಾಗದಂತೆ ಜನರನ್ನು ಚದುರಿಸಲು ಪೊಲೀಸ್ರು ಹರ ಸಹಾಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶೂಟಿಂಗ್ಗೆ ಕ್ಲಾಪ್ ಮಾಡಿದ ಬಂಕಾಪೂರ ಠಾಣೆಯ ಎ.ಎಸ್.ಐ. ಡಿ.ಎನ್.ಕೂಡಲ, ಆಧ್ಯಾತ್ಮಿಕ ಪರಂಪರೆಯನ್ನು ಸಾರುವ ಐತಿಹಾಸಿಕ ಹಿನ್ನಲೆಯುಳ್ಳ ಬಂಕಾಪುರದಲ್ಲಿ ಚಲನ ಚಿತ್ರದ ಶೂಟಿಂಗ್ ನಡೆದಿದ್ದು ಸ್ಥಳೀಯರಲ್ಲಿ ಪ್ರೀತಿಯ ಅಭಿಮಾನದ ಸುರಿಮಳೆ ಸಾಮಾನ್ಯವಾಗಿದೆ.
ವಿಶೇಷವಾಗಿ ಒಬ್ಬ ರೈತ ಕುಟುಂಬದಿಂದ ಬಂದ ವರುಣಗೌಡ್ರ ಈ ಚಿತ್ರದಲ್ಲಿ ಅರ್ಜುನ ಪಾತ್ರದಲ್ಲಿ ನಟಿಸಿ ಕೃಷ್ಣ-ಅರ್ಜುನ ನಡುವಿನ ಸಂಬಂಧ ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಸಂತಸ ತಂದಿದೆ ಎಂದರು. ಸಹ ಕಲಾವಿದರ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು