ಬೈಲಹೊಂಗಲ

ಶಿವಯೋಗೀಶ್ವರ ಪ್ರೌಢ ಶಾಲೆ ಫಲಿತಾಂಶ ನೂರಕ್ಕೆ ನೂರು

ಶಿವಯೋಗೀಶ್ವರ ಪ್ರೌಢ ಶಾಲೆ ಫಲಿತಾಂಶ ನೂರಕ್ಕೆ ನೂರು

ಬೈಲಹೊಂಗಲ 11: ಸಮೀಪದ ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗೀಶ್ವರ ಪ್ರೌಢ ಶಾಲೆಯ ಎಸ್‌.ಎಸ್‌.ಎಲ್‌.ಸಿ.ಪರೀಕ್ಷೆ ಫಲಿತಾಂಶ ನೂರಕ್ಕೆ ನೂರರಷ್ಟು ಆಗಿದೆ. 

ಸುನಂದಾ ಶಿಂತ್ರಿ 621 ಅಂಕ ಶೇ.99.36 ಪ್ರಥಮ, ಪಲ್ಲವಿ ಖನಗೌಡ್ರ 617 ಅಂಕ ಶೇ.98.72 ದ್ವಿತೀಯ ಸ್ಥಾನ, ಭಾರತಿ ಗಾಣಗಿ 611 ಅಂಕ ಶೇ.97.76 ತೃತಿಯ ಸ್ಥಾನ, ರೋಹಿಣಿ ನಲವಡೆ 605 ಅಂಕ ಶೇ.97.42 ನಾಲ್ಕನೇ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. 

ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮಿಜಿ, ಚೇರಮನ್ ಡಿ.ಬಿ.ಮಲ್ಲೂರ,  ಕಾರ್ಯದರ್ಶಿ ಎಸ್‌.ಎನ್‌.ಕೊಳ್ಳಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಮುಖ್ಯ ಶಿಕ್ಷಕ ಬಿ.ಪಿ.ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ