ಲೇಖನಗಳು

ಶಿವಯೋಗ ಸಾಧನಾ ಸಂಜೀವಿನಿ ಲಿಂ. ಶಿವಾನಂದ ಶಿವಾಚಾರ್ಯರು

ಶಿವಯೋಗ ಸಾಧನಾ ಸಂಜೀವಿನಿ ಲಿಂ. ಶಿವಾನಂದ ಶಿವಾಚಾರ್ಯರು

ವೀರಶೈವ ಧರ್ಮ ಪರಂಪರೆಯಲ್ಲಿ ಲಿಂಗದೀಕ್ಷೆಯು ಮಹತ್ವ ಪೂರ್ಣ ಸಂಸ್ಕಾರವಾಗಿದ್ದು. ಗುರುವಿನಿಂದ ಶಿವ ಪಂಚಾಕ್ಷರಿ ಮಹಾ ಮಂತ್ರವನ್ನು ಉಪದೇಶಿಸಿ ವೀರಮಾಹೇಶ್ವರರಿಗೆ ಅಯ್ಯಾಚಾರ, ಭಕ್ತರಿಗೆ ಲಿಂಗದೀಕ್ಷೆಯನ್ನು ನೀಡುವ ಮೂಲಕ ಅವರಿಗೆ ಲಿಂಗಪೂಜಾ ಅರಿವನ್ನು ಮೂಡಿಸಿದ ಗುರುವರ್ಯರಲ್ಲಿ ಸಮೀಪದ ನೆಗಳೂರ ಸಂಸ್ಥಾನ ಹಿರೇಮಠದ 36 ನೇ ಪೀಠಾಧಿಪತಿ ಲಿಂ.ಷ.ಬ್ರ.ಶಿವಾನಂದ ಶಿವಾಚಾರ್ಯ ಸ್ವಾಮಿಗಳವರು. ಇವರಿಂದ ಲಿಂಗದೀಕ್ಷಾ ಸಂಸ್ಕಾರ ಹೊಂದಿದವರ ಸಂಖ್ಯೆ ಲಕ್ಷದಗಡಿಮುಟ್ಟಿದ ಹಿನ್ನಲೆಯಲ್ಲಿ ಇವರನ್ನು ಲಕ್ಷದೀಕ್ಷಾದಾತೃ ಎಂದು ಕರೆಯಲಾಗುತ್ತದೆ. ಶ್ರೀಗಳ ಹಿನ್ನಲೆ: ಶಿವಾನಂದ ಶಿವಾಚಾರ್ಯರು ನೆಗಳೂರ ಹಿರೇಮಠದ ಫಕ್ಕೀರಯ್ಯಸ್ವಾಮಿ. ಹಾಗೂ ಶಾಂತಮ್ಮ ದಂಪತಿಗಳ ಹಿರಿಯ ಸುಪುತ್ರರಾಗಿ ಡಿಸೆಂಬರ್ 15 1945 ರಲ್ಲಿ ಜನಿಸಿದರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆಗಳೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಹಾವೇರಿಯಲ್ಲಿ ಮುಗಿಸಿದರು. 

16 ನೇ ವಯಸ್ಸಿಗೆ ಶ್ರೀಮಠದ ಅಧಿಕಾರ: ಶ್ರೀಮಠದ ಗುರುಪರಂಪರೆಯಂತೆ 35 ನೇ ಪೀಠಾಧಿಪತಿ ಶಿವಯೋಗಿ ಶಿವಾಚಾರ್ಯರು ಲಿಂಗೈಕ್ಯರಾದ ನಂತರ ಆ ಪೀಠಕ್ಕೆ 36 ನೇ ಪೀಠಾಧಿಪತಿಯಾಗಿ ಶಿವಾನಂದ ಶಿವಾಚಾರ್ಯರು ಅಧಿಕಾರ ವಹಿಸಿಕೊಂಡರು, ಇವರಿಗೆ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರಿಂದ ಅನುಗ್ರಹ ಪಡೆದರು, ಮುಂದೆ ಉನ್ನತ ಅಭ್ಯಾಸಕ್ಕಾಗಿ ಶಿವಯೋಗ ಮಂದಿರಕ್ಕೆ ತೆರಳಿದರು.  ಅಲ್ಲಿ ಸುಮಾರು 3 ವರ್ಷಗಳ ಕಾಲ ವೇದ ಸಂಸ್ಕೃತ ಅಧ್ಯಯನ ಮಾಡಿ ಶ್ರೀಮಠಕ್ಕೆ ಮರಳಿದರು.

ಪುಟ್ಟರಾಜ ಗವಾಯಿಗಳಿಗೆ ಕ್ರಿಯಾಮೂತರ್ಿಗಳಾಗಿ: 1963 ರಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂ.ಪುಟ್ಟರಾಜ ಕವಿಗವಾಯಿಗಳು ಕೋಡಬಾಳ ಗ್ರಾಮದಲ್ಲಿ ವರ್ಷದಲ್ಲಿ ಮೂರು ತಿಂಗಳ ಕಾಲ ಬಸವ ಪುರಾಣವನ್ನು ಗ್ರಾಮದ ಶಿವಣ್ಣ ಗಾಣಗೇರ ಇವರ ಮುಂದಾಳತ್ವದಲ್ಲಿ ಗ್ರಾಮದಲ್ಲಿ  3ವರ್ಷಗಳ ಕಾಲ ನಡೆಸಿದ ಸಂದರ್ಭದಲ್ಲಿ ಅವರಿಗೆ ಕ್ರೀಯಾ ಮೂತರ್ಿಗಳಾಗಿ ಅಂದರೆ ಗುರು ಪಾದೋದಕ ಪಡೆಯದೇ ಪುಟ್ಟರಾಜರು ಪ್ರಸಾದ ಸ್ವೀಕರಿಸುತ್ತಿರಲ್ಲ, ಅವರಿಗೆ ಗುರುಪಾದೋದಕ ನೀಡುವ ಕ್ರೀಯಾ ಮೂತರ್ಿಗಳಾಗಿ 12 ವರ್ಷಗಳ ಕಾಲ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಇದ್ದು ಸೇವೆ ಸಲ್ಲಿಸುವುದರ ಜೊತೆಗೆ ಆಶ್ರಮದ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದರು. ಪುಟ್ಟರಾಜರಿಂದ ಷಟಸ್ಥಲ ಶಾಸ್ತ್ರ, ಕೈವಲ್ಯ ಪದ್ದತಿ ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಆಶ್ರಮದಲ್ಲಿರುವಾಗಲೇ ಇಲಕಲ್ಲ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಮಹಾಂತ ಸ್ವಾಮಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ಶ್ರೀಗಳು. ಇಲಕಲ್, ವಿಜಯಪುರ, ಕಲಬುರಗಿ ಆಭಾಗದಲ್ಲಿ ಲಿಂಗದೀಕ್ಷಾ ಸಂಸ್ಕಾರವನ್ನು ಆಯೋಜಿಸಿ ಶಿವಾನಂದ ಶಿವಾಚಾರ್ಯರಿಂದಲೇ ಭಕ್ತಾದಿಗಳಿಗೆ ಲಿಂಗದೀಕ್ಷೆ ಕೊಡುಸುತ್ತಿದ್ದರು. ನಾಡಿನ ಮೂಲೆ ಮೂಲೆಗೂ ಸಂಚರಿಸಿ ಲಿಂಗದೀಕ್ಷೆ ನೇರವೇರಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ, ರಾಜ್ಯ ಪಕ್ಕದ ಗೋವಾದಲ್ಲಿ ಉಜ್ಜಯನಿ ಜಗದ್ದುರು ಶಿವಪ್ರಕಾಶ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಶರಣ ಬಸವೇಶ್ವರ ಪುರಾಣ ಪ್ರವಚನ ನಡೆಸಿದ್ದಾರೆ. ನೆರೆ ರಾಷ್ಷ್ರವಾದ ಶ್ರೀಲಂಕಾದಲ್ಲಿ ವೀರಶೈವ ಸದ್ಭಕ್ತರಿಗೆ ಲಿಂಗದೀಕ್ಷೆ ನೀಡಿ ಬಂದಿದ್ದಾರೆ,

ಗುರು ವಿರಕ್ತರ ಸಮನ್ವಯ ಆಚಾರ್ಯ: ಶಿವಾನಂದ ಶಿವಾಚಾರ್ಯರು ಗುರು ವಿರಕ್ತ ಸ್ವಾಮಿಗಳವರಲ್ಲಿ ಅತ್ಯಂತ ಅವಿನಾಭಾವ ಸಂಬಂಧ ಹೊಂದಿದವರು, ಇವರ ಸಮಕಾಲಿನ ಪೂಜ್ಯರಾದ ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ, ಗುತ್ತಲ ಕಲ್ಮಠದ ಲಿಂ. ಸಂಗನ ಬಸವ ಸ್ವಾಮಿಗಳು, ಹೊನ್ನಾಳಿ ಹಿರೇಕಲ್ಮಠದ ಲಿಂ.ಒಡೆಯರ ಚಂದ್ರಶೇಖರ ಸ್ವಾಮೀಜಿ, ಹರಪನಹಳ್ಳಿಯ ತೆಗ್ಗಿನಮಠದ ಲಿಂ.ಚಂದ್ರಮೌಳೇಶ್ವರ ಸ್ವಾಮೀಜಿ ಹಿರಿಯ ಶ್ರೀಗಳೊಂದಿಗೆ ಅಷ್ಟೇ ಅಲ್ಲದೇ  ಕಿರಿಯ ಶ್ರೀಗಳೊಂದಿಗೆ ಅಷ್ಟೇ ಗೌರವ ಹೊಂದಿ ಗುರುವಿರಕ್ತರು ವೀರಶೈವ ಸಮಾಜದ ಎರಡು ಕಣ್ಣು ಗಳಿದ್ದಂತೆ ಎಂಬ ದಿವ್ಯ ಸಂದೇಶ ಸಾರಿದರು. ವಿರಕ್ತ ಪರಂಪರೆಯ ಸ್ವಾಮಿಗಳವರನ್ನು ತಮ್ಮ ಮಠದ ಜಾತ್ರಾಮಹೋತ್ಸವದಲ್ಲಿ ಕರೆಯಿಸಿ ಅಡ್ಡಪಲ್ಲಕ್ಕಿಉತ್ಸವ ಮಾಡುವುದರ ಮೂಲಕ ಸಮನ್ವಯ ಆಚಾರ್ಯರೆನಿಸಿದರು. ಹೀಗೆ 45 ವರ್ಷಗಳ ಕಾಲ ನೆಗಳೂರ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾಗಿ ಕೇವಲ ಧಾಮರ್ಿಕ ಸಂಸ್ಕಾರವನ್ನು ಮಾತ್ರ ಯಾವುದೇ ಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥ ಸಮಾಜ ಸೇವೆ ಮಾಡಿ ಸಾಮೂಹಿಕ ವಿವಾಹ ದೇವರ ಪ್ರಾಣಪ್ರತಿಷ್ಠಾಪನೆ, ಭಕ್ತರ ಗೃಹ ಪ್ರವೇಶ ಕಾರ್ಯಗಳ ಸಾನ್ನಿಧ್ಯವಹಿಸಿ ಹರಿಸಿದರು. ಪಂಚಪೀಠಾಧಿಶರ ಉತ್ಸವದ ನೇತೃತ್ವವಹಿಸಿಕೊಳ್ಳುತ್ತಿದ್ದರು.

ಶಿಕ್ಷಣ ಪ್ರೇಮಿ: ಕೇವಲ ಧಾಮರ್ಿಕ ಕ್ಷೇತ್ರಕ್ಕೆ ಸಿಮೀತಗೊಳ್ಳದೇ ಶಿಕ್ಷಣ ಕ್ಷೇತ್ರದಲ್ಲಿ ಸಹ ಸೇವೆ ಸಲ್ಲಿಸಿರುವ ಶ್ರೀಗಳು 1988 ರಲ್ಲಿ ರಾಣೇಬೆನ್ನೂರ ತಾಲೂಕಿನ ಹೊಸಹೊನ್ನತ್ತಿಯಲ್ಲಿ ತಮ್ಮ ಶಾಖಾ ಮಠ ಶಿವಯೋಗಿಶ್ವರ ಹಿರೇಮಠದಲ್ಲಿ ಸುಮಾರು 11 ವರ್ಷಗಳ ಕಾಲ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರವನ್ನು ನಡೆಸಿದರು, ವಿಶೇಷವೆಂದರೆ ಅಲ್ಲಿ ತರಬೇತಿ ಪಡೆದ ಎಲ್ಲ ಪ್ರಶಿಕ್ಷಣಾಥರ್ಿಗಳು ಇಂದಿಗೂ ಸಹ ಸರಕಾರಿ ಶಿಕ್ಷಕರಾಗಿದ್ದಾರೆ. ಜೊತೆಗೆ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ತಮ್ಮ ಶ್ರೀಮಠದ ಆವರಣದಲ್ಲಿ ಟಿ.ಎಂ.ಇ.ಸಂಸ್ಥೆಯ ಪ್ರೌಢ ಶಾಲೆ ಸ್ಥಾಪನೆಗೆ ಕಾರಣರಾದರು, ನಂತರ ಗುತ್ತಲ ಪಟ್ಟಣದ ರುದ್ರಮುನಿಶ್ವರ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಸ್ಥಾಪನೆಗೆ ಸಹಾಯಕರಾದರು, ಗುತ್ತಲ ಪಟ್ಟಣದಲ್ಲಿ 1990 ರಲ್ಲಿ ಶ್ರೀಶೈಲ ಜಗದ್ಗುರುಗಳ ದಸರಾ ಕಾರ್ಯಕ್ರಮ  ಹಾವೇರಿಯಲ್ಲಿ ಜರುಗಿದ ರಂಭಾಪುರಿಜಗದ್ಗುರುಗಳ 10 ನೇ ವರ್ಷದ ಶರನ್ನನವರಾತ್ರಿ ದಸರಾ ದಬರ್ಾರ, ರಾಣೇಬೆನ್ನೂರ ನಗರದಲ್ಲಿ ಜರುಗಿದ ರಂಬಾಪುರಿ ಜಗದ್ಗುರುಗಳ ದಸರಾದಭರ್ಾರ ಕಾರ್ಯಕ್ರಮದ ನೇತೃತ್ವ ವಹಿಸಿ ಯಶಸ್ವಿಗೊಳಸಿದ ಕೀತರ್ಿ ಶ್ರೀಗಳಿಗೆ ಸಲ್ಲುತ್ತದೆ.

ಉತ್ತರಾಧಿಕಾರಿ ನೇಮಕ: 1993 ರಲ್ಲಿ ಪ್ರಸ್ತುತ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಿವಾನಂದ ಶ್ರೀಗಳ ಪೂವರ್ಾಶ್ರಮದ ಸಹೋದರ ಪ್ರವಚನಕಾರ ಗದಿಗಯ್ಯಸ್ವಾಮಿ ಉಮಾದೇವಿ ದಂತಿಯ ಮೂರನೇ ಸುಪುತ್ರರಾದ ಶಿವಯೋಗಿಸ್ವಾಮಿಯನ್ನು ನಾಡಿನ  ಸಾವಿರಾರು ಶ್ರೀಮಠದ ಸದ್ಭಕ್ತರ ಸಮ್ಮಖದಲ್ಲಿ ಶ್ರೀಮಠದ ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸಿದರು.

ನಂತರ ಅವರಿಗೆ ಶಿವಯೋಗಿ ಮರಿ ದೇವರೆಂದು ನಾಮಕರಣಮಾಡಿದರು.

ಶಿಲಾಮಠ ನಿಮಾತೃ: ಶಿವಾನಂದ ಶಿವಾಚಾರ್ಯರ ಬಹುದೊಡ್ಡ ಕನಸುಗಳಲ್ಲಿ ಒಂದು ನೆಗಳೂರಿನ ಮೂಲ ಮಠವನ್ನು ಶಿಲಾಮಠ ನಿಮರ್ಾಣ ಮಾಡಬೇಕೆಂದು. 2002 ರಲ್ಲಿ ಪ್ರಾರಂಭಿಸಿದರು, ಅದು ಪೂರ್ಣ ನಿಮರ್ಾಣಗೊಂಡು ಲೋಕರ್ಾಪಣೆ ಯಾಗುವಷ್ಟರಲ್ಲಿ 2007 ರ ಸೆ.1 ತಮ್ಮ62 ರಲ್ಲಿ ಲಿಂಗೈಕ್ಯರಾದರು.  ನಂತರ ಈ ಮುಂಚೆಯೇ ಶ್ರೀಗಳೇ ನಿಯೋಜನೆಗೊಳಿಸಿದ  ಶಿವಯೋಗಿದೇವರನ್ನು ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯರು ಎಂಬ ನಾಮದಿಂದ ಪ್ರಸ್ತುತ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ನಾಡಿನ ಹರಗುರು ಚರಮೂತರ್ಿಗಳ ನೇತೃತ್ವದಲ್ಲಿ ನಾಡಿನ ಶ್ರೀಮಠದ ಸದ್ಭಕ್ತರಸಮ್ಮಖದಲ್ಲಿ ಶ್ರೀಮಠದ 37 ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.  ಈಗ ಶಿಲಾಮಠ ನಿಮರ್ಾಣಗೊಂಡು ಪ್ರಸ್ತುತ ಶ್ರೀಗಳ ನೇತೃತ್ವದಲ್ಲಿ ಲೋಕಾರ್ಪಣೆಯಾಗಿದೆ.

ಹೀಗೆ ಶ್ರೀಗಳು ತಮ್ಮ ಜೀವತಾವಧಿಯಲ್ಲಿ ಸಮಾಜಿಕ ಧಾಮರ್ಿಕ ಶೈಕ್ಷಣಿಕ ಕ್ಷೇತ್ರಗಳಿಗೆ, ಹಾಗೆಯೇ ತಮ್ಮನ್ನು ನಂಬಿದ ಭಕ್ತರ ಪಾಲಿನ ಕಾಮದೇನುವಾಗಿದ್ದರು. ಪ್ರಸ್ತುತ ಗುರುಶಾಂತೇಶ್ವರ ಶಿವಾಚಾರ್ಯರು ತಮ್ಮ ಗುರುಗಳ ಪರಂಪರೆಯನ್ನು ಮುಂದುವರಿಸಿಕೊಂಡು ಭಕ್ತರಲ್ಲಿ ಧಾಮರ್ಿಕ ಮನೋಭಾವನೆಯ ಅರಿವು ಮೂಡಿಸಲು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಸನ್ಮಾರ್ಗದತ್ತ ಒಯ್ಯುತ್ತಾ ಅವರ ಬದುಕು ಹಸನಾಗಿಸುವ ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳನ್ನು ಭಕ್ತರು ನೆಗಳೂರಿನ ನೆರಳು ಎಂದು ಕರೆಯುತ್ತಿದ್ದಾರೆ.

-ಗುರುಶಾಂತಸ್ವಾಮಿ ಹಿರೇಮಠ,

ನೆಗಳೂರ 

ಮೊ. 974111717 

ಸುದ್ದಿ ಓದಿ