ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 10: ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿ ಎಂದು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಮಹಾಸ್ವಾದ್ವಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಲ್ಲಮ್ಮ ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯದವಳು, ಹೇಮರೆಡ್ಡಿ ಮಲ್ಲಮ್ಮ ಪವಾಡ ಮತ್ತು ಭಕ್ತಿಯ ಕುರಿತು ಹಲವು ಪ್ರತೀತಿ ಹಾಗೂ ಕಥನಗಳಿವೆ ಎಂದರು.
ಮುಖಂಡ ಈಶ್ವರಗೌಡ ಪಾಟೀಲ ಮಾತನಾಡಿ ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮಳನ್ನ ರೆಡ್ಡಿ ಕುಲದ ಉದ್ದಾರಕಳು ಎಂದು ಬಣ್ಣಿಸಿದ್ದಾರೆ ಎಂದರು.
ಮುಖಂಡ ಹನುಮರೆಡ್ಡಿ ನಡುವಿನಮನಿ ಮಾತನಾಡಿ ದಾನ ಚಿಂತಾಮಣಿಯಾದ ಮಲ್ಲಮ್ಮ ಕಾಯಕದಲ್ಲಿ ದೇವರನ್ನು ಕಾಣುವ ಮಾರ್ಗವನ್ನ ತೋರಿದವಳು, 15 ನೇ ಶತಮಾನದ ಪ್ರಸಿದ್ದ ಶಿವರಣೆಯಾಗಿ ಹೊರಹೊಮ್ಮಿದವಳು ಎಂದರು.
ಇದಕ್ಕು ಮೊದಲು ಪಟ್ಟಣದಲ್ಲಿ ಹೇಮರೆಡ್ಡಿ ಮಲ್ಲನವರ ಭಾವಚಿತ್ರದ ಮೆರವಣಿಗೆ ನರವೇರಿತು.
ಕಾರ್ಯಕ್ರಮದಲ್ಲಿ ನೀಲಕಂಠಪ್ಪ ಗೊರವಿ, ವಿರುಪಾಕ್ಷಗೌಡ ಪಾಟೀಲ, ಶಿವನಗೌಡ್ರ ರಾಮನಗೌಡ್ರ, ಸೋಮು ಗಿರಡ್ಡಿ, ಪಕ್ಕಿರೆಡ್ಡಿ ನಡುವಿನಮನಿ, ಶೇಖರಯ್ಯ ಹಿರೇಮಠ, ಕಲ್ಲನಗೌಡ್ರ ಪಾಟೀಲ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ರೆಡ್ಡಿ ಸಮುದಾಯದ ಮುಖಂಡರು ಇದ್ದರು.