ಶಿಗ್ಗಾವ್

ಶಿವಾನಂದ ಮ್ಯಾಗೇರಿಯವರಿಗೆ ವಿಶ್ವಮಾನವ ಶ್ರೇಷ್ಟ ಪ್ರಶಸ್ತಿಗೆ ಭಾಜನ

ಶಿವಾನಂದ ಮ್ಯಾಗೇರಿಯವರಿಗೆ ವಿಶ್ವಮಾನವ ಶ್ರೇಷ್ಟ ಪ್ರಶಸ್ತಿಗೆ ಭಾಜನ

ಲೋಕದರ್ಶನ ವರದಿ 

ಶಿಗ್ಗಾವಿ 15: ತಾಲೂಕಿನ ರಾಜೋತ್ಸವ ಪ್ರಶಸ್ತಿ ವಿಜೇತ ಹಾಗೂ ಸಾಹಿತಿ ಮತ್ತು ಸಮಾಜ ಸೇವಕ ಹಾಗೂ ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿಯವರಿಗೆ ಧಾರವಾಡದ ರಂಗಾಯಣ ಬಯಲು ಮಂದಿರದಲ್ಲಿ ವಿಶ್ವಮಾನವ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. 

 

ಧಾರವಾಡದ ರಂಗಾಯಣ ಬಯಲು ಮಂದಿರದಲ್ಲಿ ಇವರ ಸಂಯುಕ್ತಾಶ್ರಯದಲ್ಲಿ ನೆಡೆದ ವಿಶ್ವ ಮಾನವ ಪ್ರಶಸ್ತಿ ಹಾಗೂ ಕನ್ನಡ ರಾಜೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಾನಂದ ಮ್ಯಾಗೇರಿಯವರು ಕಳೆದ 32 ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ, ಆದ್ಯಾತ್ಮೀಕ, ಶೈಕ್ಷಣಿಕ, ಸಾಹಿತ್ಯಿಕ ಸೇವೆಯನ್ನು ಪರಿಗಣಿಸಿ ವಿಶ್ವಮಾನವ ಪ್ರಶಸ್ತಿಗೆ ಆಯ್ಕೆ ಮಾಡಿದ  ಕರ್ನಾಟಕ ಸೋಷಿಯಲ್ ಕ್ಲಬ್ ಮತ್ತು ಚೇತನ ಪೌಂಡೇಷನ್ ಹುಬ್ಬಳ್ಳಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದರು ಅಲ್ಲದೇ ಕಡು ಬಡತನವು ನನ್ನನ್ನು ಎಲ್ಲ ರಂಗಗಳಲ್ಲಿ ಕಾರ್ಯನಿರ್ವಹಿಸಲು ಕಾರಣವಾಯಿತು ಅದರಿಂದ ನನಗೆ ಸಂತೃಪ್ತಿಯಿದೆ ಹಾಗೂ ಇಂದಿಗೂ ನಾನು ಬಡತನ ಪರಿಸ್ಥಿಯನ್ನು ಮತ್ತು ತಂದೆ ತಾಯಿಗಳ ಪ್ರೀತಿ ಮಮತೆ ಗೆಳೆಯರ ಸಂಬಂದಿಕರ ಅನ್ಯೋನ್ಯತೆ ಎಂದಿಗೂ ಮರೆಯುವಂತಿಲ್ಲ ಎಂದರು. 

ಮೊದಲಿಗೇ ಕುಂದಗೋಳ ಶಾಸಕ ಎಸ್‌.ಎಸ್‌.ಶಿವಳ್ಳಿಯವರ ನೇತೃತ್ವದಲ್ಲಿ ರಾಜಕೀಯ ಪ್ರವೇಶಿಸಿ ಇಂದು ನನ್ನ್‌ ಗುರುಗಳು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರ ಕೃಪಾಶಿವಾದದಿಂದ ನಾನು ಶಿಗ್ಗಾವಿ ತಾಲೂಕ ಭಾಜಪ ಅಧ್ಯಕ್ಷನಾಗಿ ಹಾಗೂ ಪಕ್ಷದ ಅನೇಕ ಜವ್ದಾಬಾರಿಯುತ ಹುದ್ದೆಯನ್ನು ಅನುಭವಿಸಿದ್ದೇನೆ ಹಾಗೂ ಹಾವೇರಿ ಜಿಲ್ಲೆಯ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ ಎಂದರು. 

ಉದ್ಘಾಟನೆಯನ್ನು ರಾಜೇಶ ಶೆಟ್ಟಿ ನಿರ್ವಹಿಸಿದರು, ಪ್ರಾಸ್ತಾವಿಕವಾಗಿ ಕ.ಸೋ ಮತ್ತು ಚೇ. ಪೌ. ಹುಬ್ಬಳ್ಳಿ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಅಧ್ಯಕ್ಷತೆ ಸಾಹಿತಿ ಮತ್ತು ಬೆಳಗಾವಿ ತೆರಿಗೆ ಅಧಿಕಾರಿ ಸುರೇಶ ಕೋರಕೊಪ್ಪ ಮಾತನಾಡಿದರು.  


ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸವಿತಾ ಕುಸುಗಲ್ಲ ಸ್ವಾಗತಿಸಿದರು, ಸಂತೋಷ ಭದ್ರಾಪೂರ ನಿರೂಪಿಸಿದರು, ಕಾರ್ಯಕ್ರಮ ನಿರ್ವಹಣೆಯನ್ನು ಭಾಗ್ಯಶ್ರೀ ರಜಪೂತ ಸೇರಿದಂತೆ ಭಾಜಪ ರಾಜ್ಯ ಯುವಮೋರ್ಚಾ ನರಹರಿ ಕಟ್ಟಿ, ಮಲ್ಲಿಕಾರ್ಜುನ ಹಡಪದ, ನಂದೀಶ ತಾಲೂಕಿನ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ