ಶಿರಡಿ ಸಾಯಿಬಾಬಾ ದೇವಸ್ಥಾನ ವಾರ್ಷಿಕೋತ್ಸವ: ವಿಶೇಷ ಪೂಜೆ
ಮುಂಡರಗಿ : ಪಟ್ಟಣದ ಶಿರಡಿ ಸಾಯಿಬಾಬಾ ದೇವಸ್ಥಾನದ 20ನೇ ವಾರ್ಷಿಕೋತ್ಸವ ನಿಮಿತ್ಯ ಶನಿವಾರ ರಂದು ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.
ಪಟ್ಟಣದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಬೆಳ್ಳಗ್ಗೆ ಸಾಯಿ ಬಾಬಾ ಮೂರ್ತಿಗೆ ಮಂಗಲ ಸ್ನಾನ, ಆರತಿ, ಲಘು ರುಧ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಂಕಲ್ಪ ಕಾಯಿ, ಬಿಲ್ವಾರ್ಚನೆ, ಕುಂಕುಮಾರ್ಚನೆ, ದುಪಾರ್ಚನೆ, ಸರ್ವಸೇವಾ ಅಲಂಕಾರ ನಡೆಯಿತು. ಮಧ್ಯಾಹ್ನ ನೈವೇದ್ಯ, ಆರತಿ, ಮಹಾಮಂಗಳಾರತಿ, ಮಹಾಪ್ರಸಾದ ವಿತ್ತರಿಸಿದರು. ಸೂರ್ಯಾಸ್ಥಕ್ಕೆ ದೂಪಾರತಿ, ಶೇಜಾರತಿ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದುಕೊಂಡರು.
ಈ ವೇಳೆ ಜಯಣ್ಣ ಪಾಸಿ ಪೂಜಾ ಕಂಕೈರ್ಯಗಳು ನಡೆಸಿಕೊಟ್ಟರು. ಹಾಗೂ ಹುಲ್ಲಗೆಮ್ಮ ಭಜಂತ್ರಿ ಸಂಗೀತಾ ಸೇವೆ ಸಲ್ಲಿಸಿದರು. ಗೋಪಾಲ ಸೂಡಿ, ಈಶ್ವರ ಪಾಟೀಲ, ವಿಜಯಲಕ್ಷ್ಮೀ ಈಳಿಗೇರ, ಪೂಜಾ ಉಪ್ಪಿನಬೇಟಗೇರಿ, ಸುಮಿತ್ರ ಜಾದವ, ವಿದ್ಯಾಶ್ರೀ ಕೊಸಮರಿ, ಲಕ್ಷ್ಮೀಬಾಯಿ ಕಂಬಳೆ, ಸುಮಾ ಸಜ್ಜನರ, ಸಂತೋಷ ಕಪಟಕರ, ಸುರೇಶ ಕಂಬಳೆ, ಎಂ.ಬಿ.ಗೊಂಡಬಾಳ, ಅರುಣು ಕುಮಾರ ಶಾನಬಾಗ, ಸುರೇಶ ಬೂಸ್ಲೆ, ಅಂಜನೇಯ ರಾಜು, ಮನಿಕಂಠ ವರ್ಮಾ, ದೀಪಾ ಕಾಲಾಲ, ವೆಂಕಟ ಬಾಸ್ಕರ್ ಇತ್ತರರು ಇದ್ದರು.