ಗುರು ಪೂರ್ಣಿಮೆ ನಿಮಿತ್ತ ಶಿರಿಡಿ ಸಾಯಿಬಾಬಾ ವಿಶೇಷ ಅಲಂಕಾರ
ಲೋಕದರ್ಶನ ವರದಿ
ಕಂಪ್ಲಿ24 ಪಟ್ಟಣದ ಎರಡು ಸಾಯಿಬಾಬಾ ದೇಗುಲಗಳಲ್ಲಿ ಪ್ರತ್ಯೇಕವಾಗಿ, ಗುರು ಪೂರ್ಣಿಮೆಯನ್ನು ಸರಳವಾಗಿ ಶನಿವಾರ ಆಚರಿಸಿದರು.ಸ್ಥಳೀಯ ಎಸ್.ಎನ್ ಪೇಟೆಯಲ್ಲಿರುವ ಶಿರಿಡಿ ಸಾಯಿಬಾಬಾ ದೇಗುಲದಲ್ಲಿ ಗುರು ಪೂರ್ಣಿಮೆ ನಿಮಿತ್ತ ಬಾಬಾ ಅವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಬೆಳಗ್ಗೆ ಪಂಚಾಭಿಷೇಕ ಅಷ್ಟೋತ್ರ ಕಾಕಡ ಆರತಿ, ಮಧ್ಯಾಹ್ನದ ಆರತಿ ರಾತ್ರಿ ಪಲ್ಲಕ್ಕಿ ಉತ್ಸವ ಸೇರಿ ಹಲವಾರು ಧಾರ್ಮಿಕ ಕಾರ್ಯಕ್ರಗಳು ನಡೆದವು. ಶಿರಿಡಿ ಸಾಯಿಬಾಬಾ ದೇವಸ್ಥಾನದ ಅರ್ಚಕರಾದ ರಾಜೇಂದ್ರ ಅರ್ಚಾರ್ ಮತ್ತು ಸಾಯಿ ಬಾಬ ಕಾರ್ಯಕಾರಿ ಸಮಿತಿಯರಿದ್ದರು ಇಲ್ಲಿನ ಶಿರಿಡಿ ಸಾಯಿ ಸೇವಾಶ್ರಮದ ಸಾಯಿಬಾಬಾ ಮಂದಿರದಲ್ಲಿ ಬಾಬಾ ಅವರನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಗ್ಗೆ ಕಾಕಡ ಆರತಿ, ಸುಪ್ರಭಾತ, ಹಾಲಿನ ಅಭಿಷೇಕ, ಸತ್ಯ ಸಾಯಿ ವ್ರತಗಳು, ಸಾಯಿ ಸೇವಕರಿಂದ ಸತ್ಸಂಗ ಪ್ರಸಂಗ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.