ಶಿರಹಟ್ಟಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ: ಹಿರೇಮನಿ
ಲೋಕದರ್ಶನ ವರದಿ
ಮುಂಡರಗಿ 02: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ. ಹೀಗಾಗಿ ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರವು ಎಸ್.ಸಿ ಮೀಸಲಾತಿಯಲ್ಲಿ ಒಳಪಡುವುದರಿಂದ ಈ ಭಾರಿ ಕಾಂಗ್ರೆಸ್ ಪಕ್ಷದಿಂದ ನಾನು ಎಸ್.ಸಿ ಮೀಸಲಾತಿಯಡಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ನೀಡುವಂತೆ ಹಿರಿಯ ಮುಖಂಡರಿಗೆ ಒತ್ತಾಯಿಸುತ್ತೇನೆ ಎಂದು ಪುರಸಭೆ ಸದಸ್ಯ ಸಂತೋಷ ಹಿರೇಮನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷದಲ್ಲಿ ಸುಮಾರು 12 ವರ್ಷಗಳ ಕಾಲ ಬಡವರ, ಜನಸಾಮಾನ್ಯರ ಸೇವೆ ಮಾಡಿದ್ದೇನೆ. ಅಲ್ಲದೇ ಕಾಂಗ್ರೇಸ್ ಪಕ್ಷದಿಂದ ಅನೇಕ ಹುದ್ದೆಗಳನ್ನು ಪಡೆದು ಜನರ ಸೇವೆ ಮಾಡಿದ ಅನುಭವ ಹೊಂದಿದ್ದೇನೆ. ಅಲ್ಲದೇ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ, ಮುಂಡರಗಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ.
ಈಗ ಪ್ರಸ್ತುತ ಪುರಸಭೆ ಸದಸ್ಯನಾಗಿ ಸಾಮಾಜಿಕ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಜನರಿಗಾಗಿ ಹಗಲು-ಇರುಳು ಸೇವೆ ಸಲ್ಲಿಸಿದ್ದು, ಸರ್ವಜನಾಂಗದ ಮನೆ ಮಗನಾಗಿ ಈಗಲೂ ಸಾಮಾಜಿಕ ಸೇವೆ ಸಲ್ಲಿಸುತ್ತಾ ಇದ್ದೇನೆ. ನಾನು ಶಿಕ್ಷಣದಲ್ಲಿ ಬಿ.ಎ ಹಾಗೂ ಬಿ.ಈಡಿ ಕೋರ್ಸನಲ್ಲಿ ತೇರ್ಗಡೆ ಹೊಂದಿದ್ದೇನೆ. ಹೀಗಾಗಿ ಜನರ ಪರವಾಗಿ ಸದಾ ಸೇವೆ ಮಾಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸರ್ವರ ಹಿತದೃಷ್ಠಿಯಿಂದ ವಿವಿಧ ಸಂಘಟನೆಯಲ್ಲಿ ಭಾಗವಹಿಸಿ ಉನ್ನತವಾದ ಹುದ್ದೆಯನ್ನು ಪಡೆದು ವಿವಿಧ ಕ್ಷೇತ್ರದ ಜನತೆಯ ಉನ್ನತಿಗಾಗಿ ಹೋರಾಟಗಳನ್ನು ಮಾಡಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಹೋರಾಟ ಹಾಗೂ ಸತ್ಯಾಗ್ರಹವನ್ನು ಮಾಡಿದ್ದೇನೆ.
ಅಲ್ಲದೇ ಕನ್ನಡಪರ ಹೋರಾಟದ ಸಂಘಟನೆಯಲ್ಲಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ದಲಿತರ ಹಾಗೂ ಸರ್ವ ಜನಾಂಗದ ಅಭಿವೃದ್ದಿಪರ ಹೋರಾಟಗಳನ್ನು ಮಾಡಿದ್ದೇನೆ. ಜಾತಿ, ಮತ, ಪಂಥವೆನ್ನದೇ ಬುಧ್ಧ, ಬಸವ, ಅಂಬೇಡ್ಕರ್ರವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಅವರೆಲ್ಲರ ಮಾರ್ಗದರ್ಶನದಂತೆ ಪ್ರತಿಯೊಂದು ಜನತೆಯ ಮನೆಮಗನಂತೆ ಸೇವೆ ಮಾಡುತ್ತೇನೆ. ಈ ಹಿನ್ನೆಲೆಯಲ್ಲಿ ನಾನು ಸ್ಪರ್ಧಾಳುಗಳಾಗಿ ಚುನಾವಣೆಯಲ್ಲಿ ಸೋತರೂ ಚಿಂತೆ ಇಲ್ಲ. ಜನರ ಸೇವೆ ಮಾಡುತ್ತೇನೆ. ಈ ಕುರಿತು ಪಕ್ಷದ ಹಿರಿಯ ಮುಖಂಡರ ಗಮನಕ್ಕೆ ತಂದು ಅವರ ಮಾರ್ಗದರ್ಶನವನ್ನು ಪಡೆದು, ಎಸ್.ಸಿ ಮೀಸಲು ಕ್ಷೇತ್ರವಾದ ಶಿರಹಟ್ಟಿ ವಿಧಾನ ಸಭೆ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ನೀಡುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಕಾರ್ಯಕರ್ತರಾದ ಮಹೇಶ ವಡ್ಡರ, ದುರಗಪ್ಪ ಮೋರನಾಳ, ವಿಜಯಕುಮಾರ ಹೊಸಪೇಟಿ, ಬಸವರಾಜ ಹಿರೇಮಠ ಇದ್ದರು.